ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಮುಖ, ಕೈ ಮೂಗು ಮೈ ಶುದ್ದಗೊಳಿಸಿಕೊಂಡರೆ ಕೊರೊನ ಬರೋದಿಲ್ಲ. ಆಹಾರದಲ್ಲಿಯೇ ಅಶುದ್ದವಾಗಿ, ವ್ಯವಹಾರದಲ್ಲಿ ಶುದ್ದಿಯಿಲ್ಲದೆ ಇದ್ದರೆ ಒಳಗೆ ಹೋದ ಮೇಲೆ ಕೇಳೋರೆ ಇಲ್ಲ ಕೊರೊನಕ್ಕೆ ಕೇವಲ‌ಹೊರಗಿನಿಂದ ಶುದ್ದ ಆದರೆ ಸಾಲದು ಒಳಗಿನ ಮನಸ್ಸು ಶುದ್ದವಾಗಬೇಕು. ಅದು ವಿಜ್ಞಾನದಿಂದ ಸರ್ಕಾರದಿಂದ ಅಸಾಧ್ಯ. ಪ್ರಜೆಗಳ ಸತ್ಯ ಧರ್ಮದಿಂದ ಮಾತ್ರ ಸಾಧ್ಯ. ಸ್ವಚ್ಚಭಾರತ ಜ್ಞಾನದಿಂದ ಸಾಧ್ಯವಿದೆ. ಜ್ಞಾನ ಒಳಗಿದೆ. ಸತ್ಯ ಒಳಗಿದೆ. ಬೆಳೆಸಿಕೊಂಡರೆ ಆರೋಗ್ಯಕರ ಜೀವನ ಇದು ಮಹಾತ್ಮರುಗಳು ತಿಳಿಸಿದ್ದಾರೆ.

ಮಹಾತ್ಮರ ಹೆಸರಲ್ಲಿ ರಾಜಕೀಯ ನಡೆಸುವುದು ಅಧರ್ಮ.ಮಕ್ಕಳ ಶಿಕ್ಷಣದಲ್ಲಿಯೇ ಆತ್ಮಶುದ್ದತೆ ಇಲ್ಲವಾದರೆ ದೊಡ್ಡವರು ಯಾರು? ಶುದ್ದವಾದ, ಮುಗ್ಧ ಮನಸ್ಸಿಗೆ ಅಶುದ್ದ ಅಪ್ರಬುದ್ದ ಶಿಕ್ಷಣ ನೀಡಿದ ಪರಿಣಾಮ,ಇಂದು ರೋಗ ಹರಡಿತನ್ನ ಪ್ರಭಾವ ತೋರಿಸುತ್ತಿದೆ. ಇದನ್ನು ಸರ್ಕಾರ ತಡೆಯಲು ಸಾಧ್ಯವೆ?ಮಂತ್ರ,ತಂತ್ರ,ಯಂತ್ರಗಳನ್ನು ಅತಿಯಾದ ಸ್ವಾರ್ಥಕ್ಕೆ ಬಳಸಿ ಸ್ವತಂತ್ರ ಜ್ಞಾನ ಹಿಂದುಳಿದಿರುವಾಗ, ಈಗಲಾದರೂ ಲೋಕದ ಹಿತಕ್ಕಾಗಿ ನಿಸ್ವಾರ್ಥ, ನಿರಹಂಕಾರದಿಂದ.

ಬಳಸಿಕೊಂಡರೆ ಮುಂದಿನ ಪೀಳಿಗೆಗೆ ಉತ್ತಮ ಗುರು ಹಿರಿಯರ ಸಹಕಾರ ಸಹಾಯ ದೊರೆತು ಸಮಾಜ ಉದ್ದಾರವಾಗಬಹುದು.ಪ್ರತಿಯೊಂದು ಶ್ಲೋಕ ವೂ ಶೋಕದಿಂದ ಬಿಡುಗಡೆ ಪಡೆಯಲು ರಚನೆಯಾಗಿತ್ತು. ಆದರೆ ಈಗ ಶೋಕಾಚರಣೆ ಮಾಡುವ ತನಕ ದುರ್ಭಳಕೆ ಮಾಡಿಕೊಂಡವರು ಶ್ಲೋಕವೆ ಸರಿಯಿಲ್ಲವೆಂದರೆ ಕುಣಿಯಬಾರದವಳು ನೆಲಡೊಂಕು ಎಂದ ಹಾಗಿದೆ. ಹಣಗಳಿಸುವುದು ಸುಲಭ ಅದನ್ನು ಸದ್ಬಳಕೆ ಮಾಡಿ ಜೀವನ ನಡೆಸುವುದು ಕಷ್ಟ. ಜ್ಞಾನ ಪಡೆಯಲು ಹಣ ದಾನ ಮಾಡಬೇಕು.

- Advertisement -

ಹಣವೇ ದಾನವರಿಂದ ಪಡೆದರೆ ಜ್ಞಾನ ಸಿಗುವುದೆ? ಸಮಸ್ಯೆಗಳಿಗೆ ಪರಿಹಾರ ಒಳಗೇ ಇದ್ದರೂ ಹೊರಗೆ ಹುಡುಕಿದರೆ ಇನ್ನೊಂದು ಸಮಸ್ಯೆ ಹುಟ್ಟುತ್ತದೆ. ಭಾರತದ ಭವಿಷ್ಯ ಭಾರತೀಯರ ಕೈಯಲ್ಲಿತ್ತು. ಇದನ್ನು ವಿದೇಶಿಗಳ ಕೈಗೆ ಕೊಟ್ಟರೆ ಅವರೆ ಆಳುತ್ತಾರೆ. ಆಳುವವರು ದೇಶದ ಪ್ರಜೆಗಳ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕಿತ್ತು.ವಿದೇಶಿ ಶಿಕ್ಷಣಕ್ಕೆ ಸಹಕರಿಸುತ್ತಾ ಮುಂದೆ ನಡೆದಂತೆ ಸ್ವದೇಶಿ ಜ್ಞಾನ ಹಿಂದುಳಿದು ಹಿಂದುಳಿದವರ ಸಂಖ್ಯೆ ಬೆಳೆಯಿತು.

ಇವೆಲ್ಲವೂ ಸಾಮಾನ್ಯಜ್ಞಾನದ ವಿಚಾರವಷ್ಟೆ. ಇದಕ್ಕೆ ಪುರಾಣ ಇತಿಹಾಸ ಕೆದಕುವ ಅಗತ್ಯವಿಲ್ಲ. ಈಗಿನ ಪರಿಸ್ಥಿತಿಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡರೆ ಸತ್ಯದರ್ಶನ ಸಾಧ್ಯವಿದೆ. ಹೆಸರು, ಹಣ, ಸ್ಥಾನಮಾನ, ಸನ್ಮಾನ,ಪದವಿ,ಪಟ್ಟ ಎಲ್ಲಾ ಸತ್ಯದಿಂದ ಸಿಗುವುದಾಗಿದ್ದರೆ ನಮ್ಮಲ್ಲಿ ಎಲ್ಲಾ ಸತ್ಯವಂತರೆ.ಆದರೆ ಪೂರ್ಣಸತ್ಯ ಒಂದೆ.ಅದು ನಮ್ಮೊಳಗೇ ಇರುತ್ತದೆ.

ಅದನ್ನು ತಿಳಿದು ನಡೆದರೆ ಜ್ಞಾನ. ಹೊರಗಿನಿಂದ ತಿಳಿದರೆ ವಿಜ್ಞಾನ. ಎರಡನ್ನೂ ಸಮಾ‌ನವಾಗಿ ಅರ್ಥ ಮಾಡಿಕೊಂಡು ಮಾನವ ನಡೆಯಲು ಬೇಕು ಸಾಮಾನ್ಯಜ್ಞಾನ. ಎಲ್ಲಾ ಒಂದೆ ಎಲ್ಲಾ ಸಮಾನರು,ಎಲ್ಲಾ ಮಾನವರು. ಅದನ್ನು ಮರೆತು ನಡೆದರೆ ಅಸುರಿತನ ಸ್ವಾರ್ಥ ಅಹಂಕಾರ ಒಳಗಿನಿಂದ ಬೆಳೆದು ದೇಹವನ್ನು ಆಳುತ್ತದೆ.ಹೀಗಾಗಿ ದೇಹಕ್ಕೆ ಸೇರಿಸುವ ವಿಷಯ,ಆಹಾರ,ವಿಹಾರವೇ ಎಲ್ಲದ್ದಕ್ಕೂ ಕಾರಣ.ಇದನ್ನು ಸಾತ್ವಿಕ ಶಿಕ್ಷಣದಿಂದ ತಿಳಿಸಿ ಬೆಳೆಸುವುದೆ ಮಾನವಧರ್ಮ. ‘ವಿಷ’ಯದೊಳಗೆ ವಿಷವಿದ್ದರೆ ಅಮೃತಪುತ್ರರಾಗಿದ್ದೂ ವ್ಯರ್ಥ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!