ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಯುಗಾದಿ ಹಬ್ಬ ಹಿಂದೂಗಳು ಹಿಂದಿನಿಂದಲೂ ಹೊಸ ವರ್ಷವನ್ನಾಗಿಸಿಕೊಂಡು ಪ್ರಕೃತಿಯ ಹೊಸ ಬೆಳವಣಿಗೆ ಹೊಸ ಹುರುಪನ್ನು ಸಾತ್ವಿಕವಾಗಿ ಅರ್ಥ ಮಾಡಿಕೊಂಡು ಸಂತೋಷ, ಸಂಭ್ರಮ, ಸಡಗರ, ಪ್ರೀತಿ, ವಿಶ್ವಾಸದಿಂದ ಸ್ವಾಗತಿಸುವ‌ ವರ್ಷದ ಮೊದಲ ಹಬ್ಬವಾಗಿದೆ. ಇದು ಮನುಕುಲಕ್ಕೆ ಮನೋಲ್ಲಾಸವನ್ನು ಹೆಚ್ಚಿಸುವ ಜೊತೆಗೆ ಆತ್ಮವಿಶ್ವಾಸವನ್ನೂ ,ಒಗ್ಗಟ್ಟನ್ನು ,ಸುಖ,ಶಾಂತಿ,
ಸಮೃದ್ದಿಯನ್ನೂ ಹೆಚ್ಚಿಸುತ್ತದೆ. ಅಂದಿನ ಪ್ರಕೃತಿ ಇಂದಿಗೂ ಇದೆ.

ಯುಗಾದಿ ಪ್ರತಿವರ್ಷವೂ ಬರುತ್ತದೆ. ಆಚರಣೆಗಳೂ ನಡೆಯುತ್ತದೆ. ಆದರೆ, ವ್ಯತ್ಯಾಸವಿಷ್ಟೆ , ಆಚರಣೆಗಳಲ್ಲಿಯೇ ಮಾನವ ಬದಲಾಗಿರೋದೆನ್ನಬಹುದು. ಕೇವಲ ಯುಗಾದಿ ಹಬ್ಬ ಮಾತ್ರವಲ್ಲದೆ ಇತರ ದೇವಾನುದೇವತೆಗಳ ಹಬ್ಬ ಹರಿದಿನಗಳ ಆಚರಣೆಗಳು ಸಾಕಷ್ಟು ಪ್ರಮಾಣದಲ್ಲಿ ಭಾರತೀಯ ಜನತೆ ನಡೆಸಿಕೊಂಡು ಬರುತ್ತಿದ್ದರೂ ವರ್ಷ ವರ್ಷದಿಂದ ಹೆಚ್ಚುತ್ತಿರುವ ಸಂಕಷ್ಟ, ಸಮಸ್ಯೆಗಳಿಗೆ ಕಾರಣವನ್ನು ಹುಡುಕಿದರೂ ಸಿಗೋದು ಕಷ್ಟ.

ಸಿಕ್ಕಿದರೂ ಒಪ್ಪಿಕೊಳ್ಳಲು ಕಷ್ಟ. ಒಪ್ಪಿಕೊಂಡರೂ ಹಾಗೆ ನಡೆಯೋದು ಕಷ್ಟ. ನಡೆದವರನ್ನು ಸಮಾಜವೇ ಅಡ್ಡತಡೆದು ನಿಲ್ಲಿಸುವ ಮಟ್ಟಿಗೆ ಇಂದು ಆಚರಣೆಗಳು ತಮ್ಮ‌ಸ್ವಾರ್ಥ, ಸುಖಕ್ಕಾಗಿ ಮಾಡುತ್ತಿರುವುದೇ ಎಲ್ಲಾ ಸಂಕಷ್ಟ, ಸಮಸ್ಯೆಗಳು ಬೆಳೆದಿರೋದಕ್ಕೆ ಕಾರಣ.”ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಹರಿಯ ಚರಣದೊಳಾವಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೋ..” ದಾಸ ಶ್ರೇಷ್ಠ ಸಾತ್ವಿಕವಾದ. ಸತ್ಯವಾದ ಪದಗಳಲ್ಲಿ ನಿಸ್ವಾರ್ಥ ,ನಿರಹಂಕಾರ ದಿಂದ. ದಾನ, ಧರ್ಮಕಾರ್ಯ ನಡೆಸಿದವರ ಋಣ ಹಾಗು ಕರ್ಮಫಲದಿಂದ ಮುಕ್ತಿ ಕೊಡುವ ಪರಮಾತ್ಮನ ವರ್ಣನೆ ಇದೆ.

- Advertisement -

ಮಹಾತ್ಮರು ಪ್ರತಿಫಲಾಪೇಕ್ಷೆಯಿಲ್ಲದೆ ಕರ್ಮಗಳನ್ನು ಮಾಡುವುದಕ್ಕೆ ಕಾರಣವೆ ಅವರೊಳಗಿದ್ದ ರಾಜಯೋಗದ ಅದ್ವೈತ ತತ್ವ ಜ್ಞಾನ. ಇದನ್ನು ಈಗ ಕಾಣುವುದಕ್ಕೆ ಕಷ್ಟವಾದರೂ ಇದು ಸಾಧ್ಯವಾಗುವುದಕ್ಕೆ ಅವಕಾಶ ನಮಗಿದ್ದರೆ ಸಾಧ್ಯ. ಯುಗಾದಿಯ ವಿಶೇಷಗಳಲ್ಲಿ ಪ್ರಮುಖವಾಗಿರುವ‌ ಬೇವು ಬೆಲ್ಲ ತಿಂದು ಕಷ್ಟಸುಖವನ್ನು ಸಮಾನವಾಗಿ ಅರ್ಥ ಮಾಡಿಕೊಳ್ಳಲು ಜ್ಞಾನ ಪಡೆಯುವುದು. ಸತ್ಯ ತಿಳಿಯದೆ ಯಾವುದೇ ಆಚರಣೆ ಮಾಡಿದಾಗ ಆಚರಣೆ ಬೇರೆ ಬೇರೆಯಾಗಿ ಬೆಳೆಯುತ್ತದೆ.

ದೇವನೊಬ್ಬನೆ ಆದರೆ ನಾಮ ಹಲವು ಎಂದಹಾಗೆ ದೇವರನ್ನು ಕಾಣದವರು ತಮ್ಮ ತಮ್ಮ ಮನಸ್ಸಿಗೆಬಂದಹಾಗೆಸೃಷ್ಟಿ ಮಾಡಿಕೊಂಡು ಸೃಷ್ಟಿಯನ್ನೇ ದುರ್ಭಳಕೆ ಮಾಡಿಕೊಂಡು, ಪ್ರಕೃತಿಯನ್ನು ಕೆಟ್ಟದಾಗಿ ಬಳಸಿಕೊಂಡರೆ ದೇವರು ಒಲಿಯುವನೆ? ನಿರಾಕಾರ ಶಕ್ತಿ ಕೇಳೋದು ಭಕ್ತಿ, ಶ್ರದ್ದೆ, ಸತ್ಯ, ಶಾಂತಿ ನೆಮ್ಮದಿ,ತೃಪ್ತಿ, ನಿಸ್ವಾರ್ಥ, ನಿರಹಂಕಾರ,…

ಇಂದಿನೆಷ್ಟೋ ಜನರಿಗೆ ಹಬ್ಬದ ಉದ್ದೇಶ ಊಟ,ಮನರಂಜನೆ, ನಿದ್ದೆ ಇಷ್ಟೇ ಆಗಿದೆ. ಇದರಿಂದಾಗಿ ಸಮಾಜ ಹಾಳಾಗದಂತೆ ಎಚ್ಚರ ವಹಿಸಿಕೊಂಡರೆ ಮನುಕುಲಕ್ಕೆ ಮುಂದಿನ ಜನಾಂಗದವರೆಗೆ ಪ್ರಕೃತಿ ಶುದ್ದವಾಗಿ ಬಳಸಬಹುದಷ್ಟೆ ಆದರೆ, ಬೆಳೆದ ಅಸುರಿತನದ ಸ್ವಾರ್ಥ ಅಹಂಕಾರದ ರಾಜಕೀಯತೆ ದೇವತೆಗಳನ್ನೇ ಒಂದು ಚೌಕಟ್ಟಲ್ಲಿ ಇಟ್ಟು
ಬೌತಿಕ ಬೇಡಿಕೆಗಳನ್ನು ಬೇಡಿದಂತೆಲ್ಲ ಸೋ’ಮಾರಿ’ತನ ಹೆಚ್ಚಾಗಿ, ರೋಗದೆಡೆಗೆ ಸಮಾಜ ನಡೆಯಿತು.

ಕೊರೊನ ಸಮಯದಲ್ಲಿ ದೊಡ್ಡ ದೊಡ್ಡ ಮಂದಿರಗಳ ತುಂಬಾ ಆಸ್ತಿ ಇದ್ದರೂ ರೋಗವನ್ನು ಹೋಗಲಾಡಿಸಲು ಸಾಧ್ಯವಾಯಿತೆ? ರಾಜಕಾರಣಿಗಳು ಒಂದೆಡೆ ಜನರನ್ನು ಕೂರಿಸಿ ತಿನ್ನಿಸಿದರೆ,ಇನ್ನೊಂದು ಕಡೆ ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿ ಚದುರಿ ಹೋಗಿದೆ. ಪ್ರಕೃತಿಯನ್ನು ಪೂಜಿಸುವವನೆ ಪ್ರಕೃತಿಗೆ ಕೊಡಲಿ ಏಟು ಹಾಕುವುದನ್ನು ಸ್ವಾಗತಿಸಿದರೆ , ಮಾತನಾಡುವವರು ಯಾರು? ಯುಗಾದಿ ಹಬ್ಬ.

ಹೊಸವರುಷವಾದರೂ ಎಲ್ಲಾ ಇದನ್ನು ಬೇರೆ ಬೇರೆಯಾಗಿ ರಾಜ್ಯಗಳ ಪ್ರಕಾರ ನಡೆಸಿ ಆಚರಣೆಯಲ್ಲಿಯೇ ಭಿನ್ನಾಭಿಪ್ರಾಯ ಹೆಚ್ಚಾಗಿದ್ದರೆ ದೈವಶಕ್ತಿ ಕ್ಷೀಣಿಸುತ್ತದೆ. ಆದರೂ ಆಚರಣೆಯಿಂದ ನಮ್ಮ ಕುಟುಂಬದ ಒಗ್ಗಟ್ಟು, ಆರೋಗ್ಯ ಹೆಚ್ಚಾಗುವುದಕ್ಕಾಗಿಯೇ ಭಾರತೀಯರ ಉದ್ದೇಶ.

ಬೇವು ಬೆಲ್ಲ ,ಕಷ್ಟ ಸುಖ,ಭೂಮಿ ಆಕಾಶ, ಸ್ತ್ರೀ ಪುರುಷ, ಜ್ಞಾನವಿಜ್ಞಾನ, ಇವೆರಡರ ಮದ್ಯೆ ನಿಂತಿರುವ ಮಾನವನ ಮನಸ್ಸು ಪರಮಾತ್ಮನೆಡೆಗೆ ಹರಿಯಲು ಆಚರಣೆಶುದ್ದವಾದ ಸ್ವಚ್ಚವಾದ,ಸರಳವಾದ, ಸಾತ್ವಿಕವಾದ, ಸತ್ಯಧರ್ಮವನ್ನು ಇದ್ದಲ್ಲಿ ತಿಳಿದರೆ ಸಾಕಷ್ಟು ಉತ್ತಮ ಬದಲಾವಣೆ ಪ್ರಕೃತಿಯಲ್ಲಿ ಆಗಬಹುದು. ಪ್ರಕೃತಿಯ ಸಣ್ಣ ಜೀವಕಣದಿಂದ ಹುಟ್ಟಿ ಬೆಳೆದ ಮಾನವನೆ ಪ್ರಕೃತಿ ವಿರುದ್ದ ನಡೆಯುವುದಾಗಲಿ, ಪ್ರಕೃತಿಯನ್ನುಅಧರ್ಮಕ್ಕೆ ಬಳಸಿ ಆಳೋದಾಗಲಿ ಮಾಡುತ್ತಿದ್ದರೆ ಕೊರೊನ ದಂತಹ ಮಹಾಮಾರಿಯ ದರ್ಶನವಾಗುತ್ತದೆ.

ಸಾವಿನಲ್ಲಿ ಸುಖಪಡುವ ಜೀವವನ್ನು ಯಾರೂ ಹಿಡಿದಿಟ್ಟುಕೊಳ್ಳಲು ಕಷ್ಟ ಆದರೆ, ಜೀವ ಇರೋವಾಗಲೇ ಸಾವಿನ ನಂತರದ ಜೀವದ ಪಯಣವನ್ನು ವಿವರಿಸಿರುವ ಹಿಂದೂಗ್ರಂಥಕ್ಕೆ ವಿರೋಧಿಸಿದರೆ ಸತ್ಯ ಸುಳ್ಳಾಗುವುದಿಲ್ಲ. ಸುಳ್ಳು ಸತ್ಯ ಆಗೋದಿಲ್ಲ. ಎಲ್ಲಾ ಕಾಲಕ್ಕೆ ತಕ್ಕಂತೆ ನಡೆಯುತ್ತದೆ.ಏನೇ ರೋಗ ಬಂದರೂ ಅದಕ್ಕೆ ಕಾರಣ ಅಜ್ಞಾನದ ಆಹಾರ, ವಿಹಾರ, ಶಿಕ್ಷಣವಾಗಿರಬಹುದು. ಅದನ್ನು ತಿಜ್ಞಾನವಿರಬೇಕು. ಜ್ಞಾನ ಸಂಪಾದನೆಗೆ ದಾನ. ,ಧರ್ಮ ಮಾಡಿರಬೇಕು.ದಾನ,ಧರ್ಮ ಮಾಡುವುದಕ್ಕಾಗಿಯೇ ಆಚರಣೆಗಳು ಹೆಚ್ಚಾದವು.

ಆದರೆ, ಕೊಟ್ಟವರು ಪಡೆದವರನ್ನು ಆಳಲು ಪ್ರಾರಂಭಿಸಿ, ಋಣ ತೀರದೆ ಜನ್ಮ ಹೆಚ್ಚಾಗುತ್ತಿದೆ. ಮುಕ್ತಿ ಮೋಕ್ಷವೆನ್ನುವ ನಿರಾಧಾರವನ್ನು ಬುದ್ದಿವಂತರು,ವಿಜ್ಞಾನಿಗಳು ಅಲ್ಲಗೆಳೆದರು. ಆದರೆ ಇದು ಸತ್ಯವೆಂದು ಸಾಬೀತುಪಡಿಸುವುದಕ್ಕೆ ನಿರಾಕಾರ ಬ್ರಹ್ಮನ ತೋರಿಸಲಾಗದೆ ಹಿಂದುಳಿದವರನ್ನೇ ಈಗ ವಿರೋಧಿಗಳೆ ಆಳಲು ಹೊರಟಿದ್ದಾರೆ.

ಹೀಗಾಗಿ ಏನೇ ಬರಲಿ ಒಗ್ಗಟ್ಟು ಇರಲಿ ಎನ್ನುವ ಮಂತ್ರವನ್ನ ಅದ್ವೈತ ಎಂದರ್ಥದಲ್ಲಿ ತಿಳಿದು,ತಿಳಿಸಿದಾಗ ಜನರಲ್ಲಿ ಅಜ್ಞಾನ ಕಡಿಮೆಯಾಗಲು ಸಾಧ್ಯ. ಯುಗಾದಿ ಹಬ್ಬದ ಇನ್ನೊಂದು ಮುಖ್ಯ ವಿಚಾರವೆಂದರೆ

ಪಂಚಾಂಗ ಶ್ರವಣ. ಹಿಂದೂಗಳ ಜ್ಞಾನಶಕ್ತಿಯಿಂದ ಹಿಂದೆ ಮಹಾತ್ಮರುಗಳು ಭೂಮಿಮೇಲಿದ್ದೇ ನಭೋಮಂಡಲದ
ವಿಚಾರವನ್ನು ತಿಳಿಸುತ್ತಿದ್ದರು. ಈಗಲೂ ಅದರ ಆಧಾರದ ಮೇಲೇ ಜ್ಯೋತಿಷ್ಯ, ಪುರಾಣ, ಪಂಚಾಂಗಗಳು ನಡೆದಿದೆ. ಇಡೀ ವರ್ಷದಲ್ಲಿ ನಡೆಯೋ ಗ್ರಹಗಳ ಚಲನವಲನ,ರಾಶಿ,ನಕ್ಷತ್ರಗಳ ಪ್ರತಿಕ್ರಿಯೆ ಯಾಗಿ ಮಾನವನ ಭವಿಷ್ಯ ಯಾವ ರೀತಿಯಲ್ಲಿ ರುತ್ತದೆ ದಿನಭವಿಷ್ಯದ ಜೊತೆಗೆ ವರ್ಷಭವಿಷ್ಯವನ್ನೂ ತಿಳಸುವ ಪಂಚಾಂಗವನ್ನು ಮನೆ ಮನೆಯಲ್ಲಿ ಪಠಣಮಾಡಿ,ಶ್ರವಣ ಮಾಡುವುದರಿಂದಾಗುವ ಪ್ರಯೋಜನವನ್ನು ಯುಗಾದಿ ಹಬ್ಬದಲ್ಲಿ ಕಾಣಬಹುದು.

ಪ್ಲವನಾಮ ಸಂವತ್ಸರ ಆರಂಭವಾಗಿದೆ. ಪ್ಲವ ಎಂದರೆ ‘ತೆಪ್ಪ’ ‘ಹರಿಗೋಲು’. ಒಂದು ದೋಣಿ ನೀರಿನ ಮೇಲೆ ಹೋಗಲು ಎರಡೂ ಕಡೆಯೂ ಸರಿಸಮನಾಗಿ ಹುಟ್ಟು ಹಾಕುವುದು ಎಷ್ಟು ಮುಖ್ಯವೋ ಹಾಗೆಯೇ ಜೀವನದ ಪಯಣದಲ್ಲಿ ಸಂಸಾರದೊಳಗಿದ್ದು ಕಷ್ಟ ಸುಖವನ್ನು ಹಾಗೆ ಜೊತೆಜೊತೆಗೆ ಎಳೆದುಕೊಂಡು ಹೋಗಿ ಜೀವಕ್ಕೆ ದಡ ಸೇರಿಸಬೇಕೆನ್ನಬಹುದಷ್ಟೆ. ಕೆಲವರಿಗೆ ಮೊದಲೇ ಕಷ್ಟವಿದ್ದರೆ ನಂತರದ ಸುಖ ಸಂತೋಷ ತರುತ್ತದೆ. ಮೊದಲೇ ಸುಖ ವಿದ್ದರೆ ನಂತರದ ಕಷ್ಟ ಕಹಿಯಾಗಿರುತ್ತದೆ ಆದರೆ ಇವೆರಡೂ ಇದ್ದಾಗಲೆ ಜೀವನ ಎನ್ನಬಹುದೆನ್ನುವುದೆ ಬೇವು ಬೆಲ್ಲದ ಸಂಕೇತ.

ಆರೋಗ್ಯವೆಂದರೆ ಕಾಮ,ಕ್ರೋಧ,ಲೋಭ,ಮೋಹ,ಮಧ,ಮತ್ಸರ ಇವನ್ನು ಹಿತಮಿತವಾಗಿ ಹತೋಟಿಯಲ್ಲಿಟ್ಟು ಭೂಮಿಯಲ್ಲಿ ಜೀವನ ನಡೆಸುವುದಾಗಿದೆ. ಮಾನವ ಎಷ್ಟೇ ಅಧರ್ಮದ ರಾಜಕೀಯದಿಂದ ಏನೇ ಗಳಿಸಿದರೂ ಅದನ್ನು ಬಿಟ್ಟು ಧರ್ಮಸತ್ಯದವರೆಗೆ ಬರೋವರೆಗೂ ಭೂಮಿಯಿಂದ ಬಿಡುಗಡೆ ಪಡೆಯದ ಸಣ್ಣ ಜೀವಾತ್ಮನ ಒಳಗಿಟ್ಟುಕೊಂಡು ಹೊರಗೆ ಜೀವ ಉಳಿಸುವ ತಾತ್ಕಾಲಿಕ ಔಷಧಗಳ ಮೊರೆ ಹೋದರೂ ಒಳಗಿರುವ ಆರೋಗ್ಯಕರ ಸದ್ಗುಣಗಳನ್ನು ಬೆಳೆಸಿಕೊಳ್ಳದಿದ್ದರೆ ಕಷ್ಟ ನಷ್ಟ ತಪ್ಪಿದ್ದಲ್ಲ.

ಕಷ್ಟ ನಷ್ಟ ಎಲ್ಲರಿಗೂ ಸರಿಸಮನಾಗಿರೋದಿಲ್ಲ. ಹಾಗಂತ ಎಲ್ಲರೂ ಕಷ್ಟಪಡದೆ ಸುಖವಾಗಿರಲಾಗೋದಿಲ್ಲ.ಆಧ್ಯಾತ್ಮ ದ ಕಡೆಗೆ ನಡೆದರೆ ಕಷ್ಟ ಮೊದಲು ಸುಖ. ಕೊನೆಗೆ.ಬೌತಿಕದಲ್ಲಿ ಸುಖ ಮೊದಲು ಕಷ್ಟ ಕೊನೆಗೆ. ಇದನ್ನು ಯಾರೂ ತಡೆಯಲಾಗದು. ನಮ್ಮನ್ನ ನಾವೇ ತಿಳಿಯಲಾಗದ ಮೇಲೆ ಬೇರೆಯವರನ್ನು ತಿಳಿಯಲಾಗುವುದೆ?

ಯುಗಾದಿ ಪ್ರತಿವರ್ಷವೂ ಬರುತ್ತದೆ. ಹಿಂದಿನ ವರ್ಷದ ಹಾಗೇ ಈ ವರ್ಷ ದ ಆಚರಣೆ ಮಾಡಲಾಗದಿದ್ದರೂ ನಮ್ಮ ಆಚರಣೆಯಲ್ಲಿ ಸಾತ್ವಿಕ ಬದಲಾವಣೆ ತಂದು ಕೊಂಡರೆ ಹೊಸವರ್ಷ ಸುಖ,ಸಮೃದ್ದಿ, ನೆಮ್ಮದಿ, ಶಾಂತಿ ಹೆಚ್ಚಿಸುತ್ತದೆ.ಅದೇ ನಿರಾಕಾರ, ನಿರ್ಗುಣ, ನಿರಾವಲಂಬನೆ, ನಿಸ್ವಾರ್ಥ, ಸ್ವಾಭಿಮಾನ, ಸ್ವಾವಲಂಬನೆ ಸತ್ಯ,ಧರ್ಮದ ಬಗ್ಗೆ ಅರಿವು ಮೂಡಿಸಿಕೊಂಡು ಮುಂದೆ ನಡೆಯುವುದು. ಇದಕ್ಕೆ ಹೊರಗಿನ ಸರ್ಕಾರದ ಅಗತ್ಯವಿಲ್ಲ. ಒಳಗಿನ. ಸರ್ಕಾರದ ಅಗತ್ಯವಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!