ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಎಲ್ಲಿಯವರೆಗೆ ಭಾರತೀಯರು ಸತ್ಯಕ್ಕೆ ಬೆಲೆಕೊಡದೆ ಹಿಂದುಳಿದಿರುವರೋ ಅಲ್ಲಿಯವರೆಗೆ ಧರ್ಮ ಅರ್ಧಸತ್ಯದ ಅತಂತ್ರಸ್ಥಿತಿಯಲ್ಲಿರುತ್ತದೆ. ಶಂಖದಿಂದ ಬಂದದ್ದೇ ತೀರ್ಥ ಎಂದು ಕುಡಿದು ಕುಣಿಯುತ್ತಿದ್ದರೆ, ಶಂಖದೊಳಗೇ ಅಡಗಿದ್ದ ಕೊಳೆ ತೆಗೆಯಲಾಗೋದಿಲ್ಲ.

ಸ್ವಚ್ಚಭಾರತಕ್ಕೆ ಸ್ವಚ್ಚವಾದ ,ಶುದ್ದವಾದ, ಸತ್ಯತೀರ್ಥ ಮಾನವ ಕುಡಿಯಬೇಕು. ನಮ್ಮಲ್ಲೇ ದ್ವೇಷದ ರಾಜಕೀಯತೆ ಇದ್ದರೆ ಸ್ವಚ್ಚತೆ ಎಲ್ಲಿರಬೇಕು? ಪರಮಾತ್ಮನಿಗೆ ಅಧಿಕಾರ, ಹಣ, ಸ್ಥಾನಮಾನ, ಸನ್ಮಾನಪದವಿ, ಅಲಂಕಾರ, ಅಹಂಕಾರವಿಲ್ಲ.

ಆದರೆ,ಅವನನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಮಂತ್ರ, ತಂತ್ರ, ಯಂತ್ರಗಳಿಗಿದೆ. ಹೀಗಾಗಿ ಮಾನವ ಮಧ್ಯೆ ನಿಂತು ಪರಮ ಶಕ್ತಿಯನ್ನು ತಡೆದು ಸ್ವತಂತ್ರ ಪಡೆದರೂ ತನ್ನ ಜೀವವೇ ಅತಂತ್ರಸ್ಥಿತಿಗೆ ತಲುಪುವುದೆನ್ನುವ ಸತ್ಯಜ್ಞಾನ ಬಿಟ್ಟರೆ ಧರ್ಮ ಉಳಿಯೋದಿಲ್ಲ.

- Advertisement -

ಪ್ರಜಾಪ್ರಭುತ್ವದಲ್ಲಿ ಧರ್ಮ ಹಾಳಾಗಿರೋದು ಪ್ರಜೆಗಳ ಸಾಮಾನ್ಯಜ್ಞಾನವನ್ನು ತಿರಸ್ಕರಿಸಿ ನಡೆದಿರುವ ವಿಶೇಷಜ್ಞಾನಿಗಳ ಅಹಂಕಾರದಿಂದ ಎಂದರೆ ತಪ್ಪಾಗದು. ಸತ್ಯವೇ ದೇವರಾದಾಗ ಎಲ್ಲರೊಳಗೂ ಇರುವ ಸತ್ಯ ಬಿಟ್ಟು ಹೊರನಡೆದ ಮಿಥ್ಯವನ್ನು ಬೆಳೆಸಿರೋದು ನಮ್ಮ ಸಹಕಾರವಷ್ಟೆ.

ಇದು ಧಾರ್ಮಿಕ ಕ್ಷೇತ್ರದಲ್ಲಿಯೇ ಹೆಚ್ಚಾದಾಗ ಅಧರ್ಮಕ್ಕೆ ಶಕ್ತಿ. ಇನ್ನು ರಾಜಕೀಯ ಕ್ಷೇತ್ರ ಕೇಳಬೇಕೆ?ಸಮಾಜದ ತುಂಬಾ ಹರಡಿರುವ ಅಜ್ಞಾನಕ್ಕೆ ಮೂಲವೇ ಶಿಕ್ಷಣ.ಅದನ್ನು ಯಾರೂ ವಿರೋಧಿಸದಿರೋದೆ ಅಧರ್ಮ. ಅದ್ವೈತ ತತ್ವದಲ್ಲಿ ರಾಜಕೀಯವಿಲ್ಲ.

ಅದ್ವೈತಿಗಳಲ್ಲಿ ಇಲ್ಲವೆ? ಗುರುವಿನ ಉಪದೇಶವನ್ನು ರಾಜಕೀಯವಾಗಿ ಬಳಸಿದರೆ ಆಗೋದೆ ಹೀಗೆ. ರಾಜಯೋಗಕ್ಕೆ ಬಳಸಿದಾಗಲೇ ಸ್ಥಿತಪ್ರಜ್ಞ ರಾಗಬಹುದು. 🙏

ಆಧ್ಯಾತ್ಮದ ವಿಚಾರ ಓದಿ ತಿಳಿದು, ನಡೆದು,ನುಡಿಯುವುದರಿಂದ ಪೂರ್ಣಸತ್ಯ ಅರ್ಥ ಆದರೂ ಕೆಲವು ವೇಳೆ ಓದಿ ತಿಳಿದು ಇದೇ ಸತ್ಯವೆನ್ನುವವರಿಂದ ಪೂರ್ಣ ಸತ್ಯ ತಿಳಿಯಲಾಗದೆ ಜೀವಾತ್ಮ ಪರಮಾತ್ಮನೆಡೆಗೆ ನಡೆಯದೆ ರಾಜಕೀಯವಾಗಿ ಜನರನ್ನು ಆಳೋದಕ್ಕೆ ಪ್ರಾರಂಭ ಮಾಡಿದಾಗಲೇ ಸತ್ಯ ಹಿಂದುಳಿದು ಪ್ರಚಾರ ಮಾತ್ರ ಮುಂದೆ ಹೋಗುತ್ತದೆ.

ಹೀಗೇ ನಡೆದುಬಂದ ಪ್ರಚಾರ ಇಂದು ರಾಜಪ್ರಭುತ್ವ ಬಿಟ್ಟು ಪ್ರಜಾಪ್ರಭುತ್ವ ತಲುಪಿದೆ. ಇಲ್ಲಿ ರಾಜರಿಲ್ಲದಿದ್ದರೂ ರಾಜಕೀಯವಿದೆ. ಹೀಗಾಗಿ ಜನರು ರಾಜಕೀಯದ ಹಿಂದೆ ನಡೆದು ಒಳಗೇ ಇದ್ದ ಸತ್ಯ ಬಿಟ್ಟು ಹೊರಗೆ ದೇವರನ್ನು ಹುಡುಕಿದರೆ ಪರಮಾತ್ಮ ಸಿಗೋದಿಲ್ಲ.ಪರದೇಶ ಸಿಗಬಹುದು.

ಯಾರ ಹಿಂದೆ ನಡೆಯುವೆವೋ ಅವರೆ ನಮ್ಮನ್ನು ಆಳೋದಷ್ಟೆ. ಸ್ವಧರ್ಮ
ಸತ್ಯ,ಶಿಕ್ಷಣವನ್ನು ಬಿಟ್ಟು ಪರಕೀಯರಿಗೆ ಸಹಕರಿಸಿ ವಿಜ್ಞಾನ
ಬೆಳೆದಿದೆ.ಆತ್ಮ ಜ್ಞಾನ ಹಿಂದುಳಿದಿದೆ. ಈಗ ತಿರುಗಿ ಹಿಂದೆ ನಡೆಯಲು ಮಧ್ಯವರ್ತಿಗಳು ಬಿಡೋದಿಲ್ಲ. ಮಧ್ಯವರ್ತಿಗಳು ಯಾರು?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!