ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ನಮ್ಮ ಮನಸ್ಸು ಹೊರಗೆ ಹೋದಷ್ಟೂ ಚಂಚಲವಾಗಿ ಶಾಂತಿ ಕಳೆದುಕೊಳ್ಳುತ್ತದೆ ಕಾರಣವೆಂದರೆ ಹೊರಗಿನ ವಿಚಾರವೇ ಶಾಶ್ವತವಲ್ಲ. ಒಳಗಿರುವ ಶಾಶ್ವತ ಸತ್ಯ ಬಿಟ್ಟು ಹೊರಗೆ ನಡೆದವರೆಷ್ಟೋ ಮಂದಿ ಕೊನೆಯಲ್ಲಿ ತಿರುಗಿ ಬಂದಿದ್ದಾರೆಂದರೆ ಅವರು ಮೂಲ ಸತ್ಯವನ್ನು ತಿಳಿದಿದ್ದ.

ಹಿಂದಿನ ಕಾಲದಲ್ಲಿದ್ದ ಸಾತ್ವಿಕ ಶಿಕ್ಷಣವನ್ನು ಮಕ್ಕಳಿರುವಾಗಲೆ ಒಳಗೆ ಹಾಕಿಕೊಂಡವರು ಹೊರಗಿನ ರಾಜಕೀಯದಲ್ಲಿಯೂ ಅದನ್ನು ಅಳವಡಿಸಿಕೊಂಡು ಸ್ವತಂತ್ರ ಜೀವನ ನಡೆಸಿದ್ದರು. ಸ್ವಾತಂತ್ರ್ಯ ಬಂದ ನಂತರ ಅಧಿಕಾರ ಪಡೆದ ಎಷ್ಟೋ ದೇಶಭಕ್ತರು ದೇಶವಾಳುವ ಅಧಿಕಾರವಿದ್ದರೂ ತಿರಸ್ಕರಿಸಿ, ದೇಶಸೇವೆಗಾಗಿ ನಿಂತರು ಕೆಲವರು ಅಧಿಕಾರಪಡೆದರೂ ತಮ್ಮ ಸಂಬಳವನ್ನುvಸದ್ಬಳಕೆ ಮಾಡಿಕೊಂಡು ಜನರ ಸೇವೆಗೆ ಇಳಿದರು, ಹಾಗೆಯೇ ಎಷ್ಟೋ ಕಲಾವಿದರು,ಸಾಹಿತಿಗಳು ನಿಸ್ವಾರ್ಥ ನಿರಹಂಕಾರದಿಂದ ಜ್ಞಾನವನ್ನು ಮಕ್ಕಳವರೆಗೆ ಹಂಚಲು ಶಿಕ್ಷಕರಾಗಿ ದುಡಿದರು.

ಇಲ್ಲಿ ನಾವೀಗ ಸ್ಮರಿಸಬೇಕಾಗಿರೋದು ಅವರ ಸೇವಾಕಾರ್ಯದ ಹಿಂದೆ ಇದ್ದ ಮಹಾತ್ಮರನ್ನು.ಅವರ ಜ್ಞಾನವನ್ನು, ಅವರ ನಡೆ ನುಡಿಯ ಹಿಂದಿನ ಉದ್ದೇಶವನ್ನಷ್ಟೆ. ಅವರ ಪ್ರತಿಮೆ,ಫೋಟೋ, ಹೆಸರು ಮದ್ಯೆ ಇಟ್ಟು ವ್ಯವಹಾರಕ್ಕೆ ಇಳಿದರೆ ಮನಸ್ಸು ಹಣಸಂಪಾದನೆ, ಅಧಿಕಾರ, ಸ್ಥಾನಮಾನ, ಸನ್ಮಾನವನ್ನಷ್ಟೇ ಬಯಸುತ್ತದೆ.

- Advertisement -

ಅದಕ್ಕಾಗಿ ಹೆಚ್ಚು ಹೆಚ್ಚು ಮುಂದೆ ನಡೆದಂತೆ ಮನಸ್ಸು ಚಂಚಲಗೊಂಡು ತನ್ನ ಮೂಲ ಉದ್ದೇಶಮರೆತು ದಾರಿ ತಪ್ಪಿಸಿಕೊಂಡು ಅಲೆದಾಡುತ್ತದೆ. ಇದನ್ನು ಕಟ್ಟಿಹಾಕಲು ಬಹಳ ಕಷ್ಟ. ಹೀಗಾಗಿಯೇ ಮಹಾತ್ಮರು ತಿಳಿಸಿರುವುದು “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು.

ಅತಿಆಸೆ ಗತಿಗೇಡು,” ಅತಿಆಸೆಯೇ ದು:ಖದ ಮೂಲ” ಹಿಂದಿನ ಮಹಾತ್ಮರುಗಳಲ್ಲಿ ಈ ಅತಿಯಾದ ಆಸೆ,ಆಕಾಂಕ್ಷೆಗಳು ಇರಲಿಲ್ಲವೆಂದರೆ ಅವರ ಮೂಲ ಶಿಕ್ಷಣ ಗಟ್ಟಿಯಾಗಿತ್ತು. ಬೇರು ಗಟ್ಟಿಯಾಗಿದ್ದರೆ ರೆಂಬೆ ಕೊಂಬೆಗಳು ಗಟ್ಟಿಯಾಗುತ್ತದೆ. ಆದರೆ ಇಂದಿನ ಮೂಲ ಶಿಕ್ಷಣದಲ್ಲಿಯೇ ವ್ಯವಹಾರಜ್ಞಾನ ತುಂಬಿ, ಮಕ್ಕಳ ತಲೆ ಮೇಲೆ ಸಾಲದ ಹೊರೆ ಹಾಕಿ ಹೊರಗೆ ಕಳಿಸುವ ಕಾರಣ ಹೊರಗೆ ನಡೆದ ಮನಸ್ಸನ್ನು ಒಳಗೆ ತರಲು ಪೋಷಕರಿಗೆ ಕಷ್ಟ.

ಇನ್ನು ಶಿಕ್ಷಕರು ಏನು ಮಾಡಲು ಸಾಧ್ಯ? ಕೆಲವು ಪೋಷಕರು ಮನೆಯಲ್ಲಿ ಸಂಸ್ಕಾರ ನೀಡಿದರೆ ಹಲವರಿಗೆ ಸಂಸ್ಕಾರದ ಪದಕ್ಕೆ ಅರ್ಥ ತಿಳಿಯದೆ, ಮೂಢನಂಬಿಕೆ ಎನ್ನುತ್ತಾರೆ. ಇದಕ್ಕೆಲ್ಲಾ ಕಾರಣ ಶಿಕ್ಷಣದ ವಿಜ್ಞಾನದ ರಾಜಕೀಯ ಭ್ರಷ್ಟಾಚಾರ. ಶಿಕ್ಷಣವೇ ಭ್ರಷ್ಟರ ಪಾಲಾದರೆ ಒಳಗೆ ಹೋದ ‘ವಿಷ’ಯ ಹೊರಗೆ ಹಾಕಲು ಮಾಧ್ಯಮಗಳ ಸಹಕಾರವಿದೆ. ಆದರೆ ಉತ್ತಮ ಸದ್ವಿಚಾರಕ್ಕೆ ಸರಿಯಾದ ಸಹಕಾರವಿಲ್ಲದೆ ರೋಗ ಒಳಗಿದ್ದು ತನ್ನ ಸಾಮ್ರಾಜ್ಯ ಬೆಳೆಸಿಕೊಳ್ಳುತ್ತಿದೆ.

ವಿಜ್ಞಾನದಿಂದ ತಡೆಯಲಾಗದ ರೋಗವನ್ನು ಜ್ಞಾನದಿಂದ ತಿಳಿದರೆ ರೋಗಕ್ಕೆ ಮದ್ದು ಒಳಗೇ ಸಿಗುತ್ತದೆ. ನಮನ್ನ ನಾವು ತಿಳಿಯದೆ ಪರರ ಹಿಂದೆ ನಡೆದರೆ ಜೀವ ಹೊರಗಿದೆಯೆ? ಒಳಗಿದೆಯೆ? ಸ್ವದೇಶದ ಮೂಲ ವನ್ನು ಮರೆತು ವಿದೇಶದ ಮೂಲವನ್ನು ಬಳಸಿದರೆ ಮೂಲೆ ಸೇರಿಸಿ ಆಳೋದು ವಿದೇಶಿಗರೆ.

ಅವರಿಗೆ ಅವರ ಶಿಕ್ಷಣ,ಧರ್ಮ,ಸಂಸ್ಕೃತಿ ಭಾಷೆ ಎಷ್ಟು ಮುಖ್ಯವಾಗಿದೆಯೋ ನಮಗೂ ನಮ್ಮ ಭಾಷೆ,ಧರ್ಮ,ಸಂಸ್ಕೃತಿಯೆ ಜೀವ. ಈ ಜೀವಕ್ಕೆ ಸಂಚು ಮಾಡಿ ಆಳೋದಕ್ಕೆ ಹೋದರೆ ಜೀವಕ್ಕೆ ಸಂಚಕಾರ. ಅತಿಥಿ ಸತ್ಕಾರ ಮಾಡಬೇಕು.

ಆದರೆ, ಅತಿಥಿಗಳೇ ತಿಥಿ ಮಾಡುವಷ್ಟು ಅವರನ್ನು ಮನೆಯೊಳಗಿಟ್ಟು ಸತ್ಕಾರ ಮಾಡಿದರೆ, ಮನೆಯವರನ್ನು ಹೊರಗೋಡಿಸಿ ತಮ್ಮ ಸ್ಥಾನ ಭದ್ರಗೊಳಿಸುತ್ತಾರೆ. ಕೊರೊನ ರೋಗದ ಮೂಲ ವಿದೇಶ. ಈಗಿದು ಭಾರತದ ಪ್ರಜೆಗಳ ಅತಿಥಿಯಾಗಿ ಮನೆ ಮನೆ ಸೇರುತ್ತಿದೆ. ಅದರ ಉದ್ದೇಶ ತಿಳಿಯದೆ ಅಜ್ಞಾನದಿಂದ ವರ್ತನೆ ಮಾಡಿದರೆ ತಿಥಿ ಮಾಡಿ ಹೋಗುತ್ತದೆ.

ಆದ್ದರಿಂದ ಜ್ಞಾನವನ್ನು ಬಳಸಿ ರೋಗಕ್ಕೆ ಕಾರಣ ತಿಳಿಯುವುದು ಬುದ್ದಿವಂತರ ಲಕ್ಷಣ. ಪ್ರಕೃತಿ ವಿಕೋಪದಲ್ಲಿ ಇದೂ ಒಂದು, ಪ್ರಳಯ, ನೆರೆ, ಪ್ರವಾಹ,ಭೂಕಂಪದಲ್ಲಿ ಒಮ್ಮೆಗೆ ಎಷ್ಟೋ ಜೀವ ತೆಗೆದುಕೊಂಡು ಹೋದಾಗಲೂ ಮಾನವ ಎಚ್ಚರವಾಗದೆ ಭೂಮಿಯನ್ನು ದುರುಪಯೋಗ ಪಡಿಸಿಕೊಂಡರೆ ಸೂಕ್ಷ್ಮ ರೂಪದಲ್ಲಿ ವೈರಸ್ ಬಂದಾಗ ಎಚ್ಚರವಾಗದೆ ಅದರಲ್ಲಿಯೂ ರಾಜಕೀಯ ವ್ಯವಹಾರ ನಡೆಸಿದರೆ ಇದು‌ ಮುಗಿಯದ ಕಥೆ.

ಪ್ರಕೃತಿ ಯಿಂದ ಹುಟ್ಟಿ ಬೆಳೆದ ಜೀವ ತಿರುಗಿ ಪ್ರಕೃತಿಗೆ‌ಹೋಗೋದು ಸಹಜ. ಆದರೆ ಪ್ರಕೃತಿ ವಿಕೋಪಕ್ಕೆ ತಿರುಗುವಷ್ಟು ಮಾನವನ ಜೀವನ ತಿರುಗಬಾರದೆನ್ನಬಹುದು.ಕಾಲಚಕ್ರ ಬದಲಾದಂತೆ ಪ್ರಕೃತಿಯೂ ಬದಲಾಗುತ್ತದೆ. ಮಾನವ ಮಾತ್ರ ಬದಲಾವಣೆಯನ್ನು ತಿರಸ್ಕರಿಸಿದರೆ ವಿಕೋಪಕ್ಕೆ ತಿರುಗುತ್ತದೆ.

ವೈಚಾರಿಕತೆಯಲ್ಲಿದ್ದ ಸದ್ವಿಚಾರವನ್ನುಸರಿಯಾಗಿ ತಿಳಿಯದೆ,ವ್ಯವಹಾರ ನಡೆಸಿದರೆ ವೈರಸ್ ಮೂಲಕ ವೈಜ್ಞಾನಿಕತೆಗೂ ಸತ್ಯ ತಿಳಿಯದಂತೆ ಆಟವಾಡಿಸೋ ಶಕ್ತಿ ಭೂಮಿಯಲ್ಲಿದೆ. ಭೂಮಿ ಮೇಲೇ ನಿಂತು ಅವಳ ಶಕ್ತಿ ಪಡೆದು ಅವಳನ್ನು ಆಳಲು‌ ಹೋಗಲು ಕಷ್ಟ.ಕಲಿಗಾಲದಲ್ಲಿ ಮಾನವನ ಬುದ್ದಿಶಕ್ತಿ ಆಕಾಶದೆತ್ತರ ಹೋದರೂ ಜೀವ ಮಾತ್ರ ಭೂಮಿ ಮೇಲೇ ಹೋಗೋದು.ಜೀವ ಇದ್ದರೆ ಮಾನವನ ಜೀವನ.

ಶ್ರೀಮತಿ ಅರುಣ ಉದಯಭಾಸ್ಕರ,ಬೆಂಗಳೂರು

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!