ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಭಾರತದ ಈ ಸ್ಥಿತಿಯಲ್ಲಿ ಸ್ವತಃ ಶ್ರೀ ರಾಮ, ಶ್ರೀ ಕೃಷ್ಣ ಎದುರು ಬಂದರೂ ಗುರುತಿಸುವುದಿಲ್ಲ. ಕಾರಣ ಮಾನವ ದೇವರನ್ನೇ ದಾಸರನ್ನಾಗಿಸಿಕೊಂಡು ತಮ್ಮ ತಮ್ಮ ಸ್ವಾರ್ಥ ದ ರಾಜಕೀಯದಲ್ಲಿ ಮುಳುಗಿದ್ದಾರೆನ್ನಬಹುದು. ಅಂದಿನ ರಾಜನೀತಿ ಇಂದಿನ ರಾಜಕೀಯ ವಿರುದ್ದದಿಕ್ಕಿನಲ್ಲಿ ನಡೆದಿದೆ.

ಇದಕ್ಕೆ ಕಾರಣ ಅಜ್ಞಾನದ ಶಿಕ್ಷಣ. ಈ ಮಂತ್ರ,ತಂತ್ರ,ಯಂತ್ರದ ಸಹಾಯ ಮಾನವನಿಗೆ ತಾನು ಮಧ್ಯವರ್ತಿ ಎನ್ನುವ ಸತ್ಯದಿಂದ ದೂರವಾಗಿಸಿ ನಾನೇ ದೇವರು ಎನ್ನುವ ಅಹಂಕಾರದತ್ತ ನಡೆಸಿರೋದಕ್ಕೆ ಕಾರಣವೆಂದರೆ ತತ್ವಜ್ಞಾನವನ್ನು ಬಿಟ್ಟ ತಂತ್ರಜ್ಞಾನ. ತತ್ವದ ಉದ್ದೇಶ ತನ್ನ ತಾನರಿತು ಜೀವನ ನಡೆಸುವುದಾಗಿತ್ತು. ತಂತ್ರದ ಉದ್ದೇಶ ಏನಾದರಾಗಲಿ ಮುಂದೆ ನಡೆದು ಸಾಧನೆ ಮಾಡುವುದಾಗಿದೆ.

ಇಲ್ಲಿ ಎಲ್ಲಾ ಒಂದು ರೀತಿಯ ಸಾಧಕರೆ ಆದರೂ ಸಾಧನೆಯ ಹಾದಿ ಬೇರೆ ಬೇರೆ ಆಗಿ ಪೈಪೋಟಿಗಿಳಿದಿದೆ. ಅಡ್ಡರಸ್ತೆ ಬಹಳ ಬೇಗ ಮುಗಿಯುತ್ತದೆ,ಸೀದ ರಸ್ತೆ ನಿಧಾನವಾದರೂ ಕೊನೆ ತಲುಪಿಸುತ್ತದೆ. ಸೀದ ನಡೆಯುತ್ತಿದವರನ್ನು ಅಡ್ಡದಾರಿಗೆಳೆದವರೆ ಮಧ್ಯವರ್ತಿಗಳು. ಮಧ್ಯವರ್ತಿಗಳ ಜೀವನಕ್ಕಾಗಿ ಅಡ್ಡ ತಡೆದು ನಿಲ್ಲಿಸಿದರೆ ಮುಂದೆ ನಡೆದವರ ಸಂಖ್ಯೆ ಕುಸಿದು ಮೂಲದ ಸತ್ಯ ಮರೆತು ಎಡೆಬಿಡಂಗಿ ಜೀವನ.

- Advertisement -

ಶ್ರೀ ರಾಮನಂತಹ ಮಹಾಪುರುಷನ ದೇಶ, ಶ್ರೀ ಕೃಷ್ಣನ ಮಹಾಭಾರತ ಇಂದು ಆತ್ಮನಿರ್ಭರ ಎಂದರೆ ನಮ್ಮ ಹಣದಲ್ಲಿ ನಾವು ಜೀವನ ನಡೆಸೋದು ಎನ್ನುವ ಮಟ್ಟಿಗೆ ಬಂದಿದೆ. ಆದರೆ, ನಮ್ಮ ಸಂಪಾದನೆಯ ಮೂಲವನ್ನು ತಿಳಿದಾಗಲೆ ಪರರ ಜ್ಞಾನದಲ್ಲಿ, ಪರರ ಕೈಕೆಳಗಿದ್ದು,ಪರ ದೇಶದವರಿಗೆ ನಾವು ದುಡಿದರೆ ಆತ್ಮನಿರ್ಭರ ಭಾರತ ಆಗುವುದೆ?

ಸಾಲವಿಲ್ಲದ ವ್ಯಕ್ತಿಗಳಿಲ್ಲ. ಸಾಲ ತೀರಿಸಲು ಬಂದಿರುವ ಎಲ್ಲರೂ ಭಗವಂತನ ಅಧೀನರಷ್ಟೆ. ಆದರೆ, ಭಗವಂತನ ಸತ್ಯದ ಅರಿವಿಲ್ಲದೆ ಇನ್ನಷ್ಟು ಸಾಲಮಾಡಿಯಾದರೂ ತುಪ್ಪ ತಿನ್ನಬೇಕೆನ್ನುವವರೆ ಬೆಳೆಯುತ್ತಿದ್ದರೆ ಅಜ್ಞಾನಕ್ಕೆ ಮದ್ದಿಲ್ಲ. ಜ್ಞಾನದ ಶಿಕ್ಷಣದಿಂದ ಆತ್ಮನಿರ್ಭರ ಭಾರತ ನಿರ್ಮಾಣ ಮಾಡಲು ಶಿಕ್ಷಣದಲ್ಲಿ ಬದಲಾಗಬೇಕು. ಇದು ಇಂದಿನ ಸರ್ಕಾರ ಮಾಡಲು ಕಷ್ಟ. ಪ್ರಜೆಗಳೇ ತಮ್ಮ ಆತ್ಮರಕ್ಷಣೆಗಾಗಿ ಮಕ್ಕಳಿಗೆ ಮನೆಯಿಂದಲೇ ಸಾತ್ವಿಕ, ನೈತಿಕ ,ಧಾರ್ಮಿಕ, ವಿಚಾರಗಳಿಂದ ಬೆಳೆಸುವುದಷ್ಟೆ ಈ ಸಮಯದಲ್ಲಿ ಸಾಧ್ಯವಿದೆ. ಸರ್ಕಾರದಿಂದ ನಾವಲ್ಲ.

ನಮ್ಮಿಂದ ಸರ್ಕಾರವಿದೆ. ನಮ್ಮ ಸಹಕಾರದಲ್ಲಿ ಆತ್ಮರಕ್ಷಣೆಯಿರಬೇಕು. ಆತ್ಮವಂಚನೆ ಮಾಡಿಕೊಂಡರೆ ಆತ್ಮಹತ್ಯೆ ಹೆಚ್ಚಾಗುತ್ತದೆ. ಆಧ್ಯಾತ್ಮ ಎಂದರೆ ಹೊರಗೆ ಓದಿ ತಿಳಿದರೆ ಸಾಲದು ಒಳಗೆ ಮಾಡಿ ಕಲಿತು ಅರ್ಥ ಮಾಡಿಕೊಂಡರೆ ಶ್ರೀ ರಾಮನ ತತ್ವ,ಅದ್ವೈತ ತತ್ವ ತಿಳಿಯಬಹುದು.

ಕಾಲಬದಲಾದಂತೆ ರಾಜಕೀಯವೂ ಬದಲಾಗುತ್ತದೆ.ಆದರೆ ತತ್ವಜ್ಞಾನ ಒಂದಾಗಿಸೋದು ಶಿಕ್ಷಣದಿಂದಾಗಬೇಕು. ಎಷ್ಟೋ ವರ್ಷದ ಇದನ್ನು ಸರಿ ಪಡಿಸುವುದು ಸುಲಭವಲ್ಲ. ಹಾಗಂತ ಸಾಧ್ಯವೇ ಇಲ್ಲ ಎನ್ನಲಾಗದು. ಪ್ರಯತ್ನಪಟ್ಟರೆ ಎಲ್ಲಾ ಸಾಧ್ಯವಿದೆ. ನಿಧಾನವಾಗಿಯಾದರೂ ಬದಲಾವಣೆ ಆಗುತ್ತದೆ.

“ನಿಧಾನವೆ ಪ್ರಧಾನ” ನಮ್ಮ ಪ್ರಧಾನಿಗಳು ನಿಧಾನವಾಗಿ ಚಿಂತನೆ ಮಾಡಬೇಕಿತ್ತು. ದೇಶದ ಜನರನ್ನು ಸರಿಪಡಿಸಲು ನಮ್ಮವರನ್ನೇ ವಿರೋಧಿಗಳಾಗಿಸಿ, ವಿದೇಶಿಗಳಿಗೆ ಕೈ ಜೋಡಿಸಿ ವಿದೇಶಿಗಳ ವ್ಯವಹಾರದ ಅಗತ್ಯವಿರಲಿಲ್ಲ.ದೇಶದ ಸಾಲ ತೀರಿಸಲು ವಿದೇಶಿ ಸಾಲ ಅಗತ್ಯವಿರಲಿಲ್ಲ.

ಆಧ್ಯಾತ್ಮದ ಏಳಿಗೆಗೆ ವಿಜ್ಞಾನದ ಅಗತ್ಯ ಇರಲಿಲ್ಲ. ನಮ್ಮ ಮನೆಯ ಸಾಲ ತೀರಿಸಲು ನಮ್ಮನೆ ಸದಸ್ಯರಿಗೆ ಅವರ ಜ್ಞಾನ ಹೆಚ್ಚಿಸುವ ಶಿಕ್ಷಣ ನೀಡಿ ಮೂಲ ಧರ್ಮ ಕರ್ಮವನ್ನು ಬೆಳೆಸಿಕೊಂಡರೆ ಇದ್ದಲ್ಲಿಯೇ ಸ್ವಾವಲಂಬನೆ, ಸ್ವಾಭಿಮಾನ ಹೆಚ್ಚಿಸಬಹುದು. ಎಲ್ಲಾ ನಡೆಯಬೇಕಿತ್ತು ನಡೆದಿದೆ.

ಮುಂದಿನ ಪ್ರಜೆಗಳಿಗೆ ಕೊಡಬೇಕಾದ ಶಿಕ್ಷಣದ ಬಗ್ಗೆ ಪ್ರಜೆಗಳೇ ಚಿಂತನೆ ನಡೆಸಿದರೆ ಉತ್ತಮ. ಆದರೆ ಮಿತಿಮೀರಿದ ಅಜ್ಞಾನದಲ್ಲಿ ಮನೆಯಿಂದ ಹೊರಬಂದವರಿಗೆ ತಿರುಗಿ ಮನೆ ಸೇರಿಸುವುದು ಒಬ್ಬರ ಕೆಲಸವಲ್ಲ. ಕೊರೊನ ಈ ಕೆಲಸ ಮಾಡಿದೆ. ಆದರೂ ಪ್ರಜೆಗಳಿಗೆ ಸತ್ಯದ ಅರಿವಾಗದೆ ಸರ್ಕಾರದ ಹಿಂದೆ ನಿಂತು ಬೇಜವಾಬ್ದಾರಿಯಂತೆ ಹೋರಾಟ ನಡೆಸಿದ್ದಾರೆ. ಪ್ರಜೆಗಳೆ ಇದಕ್ಕೆ ಕಾರಣಕರ್ತರು.

ಗುರುಹಿರಿಯರ ವಿರುದ್ದ ನಿಂತವರಿಗೆ ರಾಜಕೀಯ ಮಾತ್ರ ಕಾಣುತ್ತದೆ. ರಾಜಕಾರಣಿಗಳೂ ಅವರ ಪ್ರಕಾರ ನಡೆದು ನಿಂತರೆ ಕೇಳೋರಿಲ್ಲವಾಗಿ ದೇಶವನ್ನೇ ವಿದೇಶಮಾಡಲು ಹೊರಟು ಈಗ ಪರಿಸ್ಥಿತಿ ಗಂಭೀರ ವಾಗಿದೆ. ವಿದೇಶಿಗಳ ಆಗಮನದಿಂದ ಸ್ವದೇಶಿಗಳ ಜ್ಞಾನ ಕುಸಿದರೆ ಭಾರತ ಆತ್ಮನಿರ್ಭರ ಆಗುವುದೆ?

ಸ್ವಾತಂತ್ರ್ಯ ಹೋರಾಟಗಾರರು ಪ್ರಾಣತ್ಯಾಗ ಮಾಡಿ ದೇಶವನ್ನು ಬಿಡುಗಡೆ ಮಾಡಿದ್ದರು. ಈಗಿನವರು ತಮ್ಮ ಅಧಿಕಾರಕ್ಕಾಗಿ ದೇಶವನ್ನು ವಿದೇಶ ಮಾಡಲು ಹೊರಟರು. ಇದಕ್ಕೆ ಪ್ರಜಾಪ್ರಭುತ್ವ ಸರ್ಕಾರ ಕಾರಣವೆ? ಅಜ್ಞಾನದ ಶಿಕ್ಷಣವೆ? ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವಿರೋದಿಲ್ಲ. ಹಸಿವಾದವರಿಗೆ ಸತ್ಯಜ್ಞಾನದ ಅಭಾವ.”ಹಲ್ಲಿದ್ದವರಿಗೆ ಕಡಲೆಯಿಲ್ಲ.

ಕಡಲೆಯಿದ್ದವರಿಗೆ ಹಲ್ಲಿಲ್ಲ”.ಆತ್ಮನಿರ್ಭರ ಪದಕ್ಕೆ ಬಹಳ ದೊಡ್ಡ ಅರ್ಥ ವಿದೆ ಸ್ವಾವಲಂಬನೆ, ಸ್ವಾಭಿಮಾನ, ಸತ್ಯ ಇವು ಆತ್ಮಜ್ಞಾನದಿಂದ ಬೆಳೆಯಬೇಕು. ವಿಜ್ಞಾನದಿಂದಲ್ಲ. ಆತ್ಮ ಒಳಗಿದೆ. ಸತ್ಯ ಒಳಗಿದೆ. ತೋರುಗಾಣಿಕೆಯ ದೇಶಭಕ್ತಿ ಹೊರಗಿದೆ. ದೇಶರಕ್ಷಣೆಗೆ ಆತ್ಮಜ್ಞಾನಿಗಳ ಅಗತ್ಯವಿದೆ. ಸೈನಿಕರನ್ನು ಬಿಟ್ಟರೆ ಯಾರಿದ್ದಾರೆ ದೇಶಭಕ್ತರು? ಹಣವಿದ್ದವರು ಕೊರೊನ ಸಮಯದಲ್ಲಿ ಮನೆಯಲ್ಲಿದ್ದು ಮಾಧ್ಯಮದ ಮುಂದೆ ಕುಳಿತು ಕಾಲಹರಣ ಮಾಡಿದರೆ, ಕೆಲಸಕಳೆದುಕೊಂಡವರ ಗತಿ ಏನು? ಹಣವೂ ಇಲ್ಲ ಜ್ಞಾನವೂ ಇಲ್ಲದ ಮೇಲೆ ಸರ್ಕಾರದ ಮುಂದೆ ನಿಂತು ಬೇಡೋದೆ ಮುಖ್ಯವಾಗುತ್ತದೆ.

ಬೇಡಿಕೆ ಈಡೇರದಿದ್ದರೆ ಹೋರಾಟ.ಆದರೆ ಹೋರಾಟ ಮಾಡುವವರೊಮ್ಮೆ ಹಸಿವಿನಿಂದ ನರಳುವ ಬಿಕ್ಷುಕರ ಜೀವನ ನೆನಪಿಸಿಕೊಂಡು, ನಾವೆಷ್ಟು ಸ್ವತಂತ್ರವಾಗಿದ್ದೇವೆಂದರಿತು ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿದ್ದು ಪ್ರಸ್ತುತ ಸ್ಥಿತಿಯನ್ನ ಸರಿಪಡಿಸಲು ಮುಂದಾಗಬೇಕಿತ್ತು ಆದರೆ ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಕೆಲಸ ಬಿಟ್ಟು ಹೋರಾಟ ನಡೆಸುವುದರಿಂದ ತಮ್ಮ ಸಂಸಾರಕ್ಕೆ ದೊಡ್ಡ ಕಷ್ಟ ನಷ್ಟ ಬಂದಾಗ ಯಾವ ಮಧ್ಯವರ್ತಿಗಳು ಇರೋದಿಲ್ಲ. ಆತ್ಮನಿರ್ಭರ ಭಾರತವಾಗಲು ಭಾರತದ ಪ್ರಜೆಗಳಿಗೆ ಆತ್ಮಜ್ಞಾನದ ಅಗತ್ಯವಿದೆ.ಇದು ಶಿಕ್ಷಣದಿಂದ ಸರ್ಕಾರ ನೀಡಿದರೆ ಉತ್ತಮ. ಪೋಷಕರಿಗೆ ಕೊರೊನ ಸಮಯದಲ್ಲಿ ಖಾಸಗಿ ಶಾಲೆಗಳ ಶುಲ್ಕ ಕಟ್ಟುವುದಕ್ಕೂ ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಸಾಮಾನ್ಯವಾಗಿ ಹೆಚ್ಚು ಪೋಷಕರ ದುಡಿಯುವ ಹಣವನ್ನು ಶಿಕ್ಷಣಕ್ಕೆ ಸುರಿಯುವಾಗ ಆರ್ಥಿಕವಾಗಿ ದುರ್ಭಲರಾಗಿ, ಅಡ್ಡದಾರಿಯ ಸಂಪಾದನೆ ಹೆಚ್ಚಾಗುತ್ತದೆ. ಇದೇ ಭ್ರಷ್ಟಾಚಾರ ಕ್ಕೆ ಪ್ರೋತ್ಸಾಹ ನೀಡುತ್ತಿರುವುದೇ ದೇಶದ ದೊಡ್ಡ ಸಮಸ್ಯೆ.ಕೊರೊನ ವನ್ನು ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಂಡು ಜನಸಾಮಾನ್ಯರ ಜೀವನಕ್ಕೆ ಶ್ರೀಮಂತ ವರ್ಗದವರು ಸಹಕರಿಸಿ, ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಯುವಪೀಳಿಗೆ ತಮ್ಮ ಕೈಯಲ್ಲಾದಷ್ಟು ಸರಳಜೀವನ ನಡೆಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಬದಲಾವಣೆ ಸಾಧ್ಯವಿದೆ. ಇದನ್ನು

ಮಾಧ್ಯಮಗಳು ಜನರಿಗೆ ತಿಳಿಸುವ ಕಾರ್ಯಕ್ರಮ ಹೆಚ್ಚು ಪ್ರಸಾರಮಾಡುವುದು ಅಗತ್ಯ. ಒತ್ತಾಯಪೂರ್ವಕವಾಗಿ, ರಾಜಕೀಯವಾಗಿ ಯಾರೂ ಸಾಮಾನ್ಯರನ್ನು ಸರಿದಾರಿಗೆ ತರಲಾಗುವುದಿಲ್ಲ. ಸತ್ಯದ ಮೂಲಕ ಧರ್ಮದ ಮೂಲಕ ಪರಿಸ್ಥಿತಿಗೆ ಕಾರಣ ತಿಳಿದು ಪರಿಹಾರವನ್ನು ಹುಡುಕುವುದರಿಂದ ಮನಸ್ಸು ಶಾಂತಿ ಕಾಣಲು ಸಾಧ್ಯ. ಆದರೂ ಕಾಲಮಿಂಚಿ ಹೋಗಿದೆ, ಚಿಂತಿಸಿ ಫಲವಿಲ್ಲ. ಹಾಗಂತ ಚಿಂತನೆ ನಡೆಸದೆ ಇರಲು ಕಷ್ಟ. ಸದ್ವಿಚಾರವನ್ನು ತಿಳಿಸುವುದರಿಂದ ನಷ್ಟವಿಲ್ಲ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!