ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಶ್ರೀ ರಾಮಚಂದ್ರನಿಗೂ ಧರ್ಮದ ಚೌಕಟ್ಟು ಇತ್ತು. ಮಹಾರಾಜನಾಗಿದ್ದು ಪ್ರಜಾಪಾಲಕನಾಗಿ ತನ್ನ ರಾಜಧರ್ಮದ ಪ್ರಕಾರ ನಡೆಯಲು ಸ್ವಯಂ ಧರ್ಮಪತ್ನಿಯನ್ನೇ ತ್ಯಾಗ ಮಾಡಬೇಕಾದ ಧರ್ಮ ಸಂಕಟ ಎದುರಿಸಿದ ಮರ್ಯಾದ ಪುರುಷೋತ್ತಮ ಶ್ರೀ ರಾಮನವಮಿಯನ್ನು ಇಂದು ಭಕ್ತರಾದವರು ಕೊರೊನ ಸಮಯದಲ್ಲಿಯೂ ಭಕ್ತಿ ಶ್ರದ್ಧೆಯಿಂದ ಮನೆಯೊಳಗಿದ್ದು ಆಚರಿಸಲು ಆ ಪರಮಾತ್ಮ ಅವಕಾಶ ನೀಡಿದ್ದಾನೆ.

ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿ ಅಲ್ಲಾಡದು ಎಂದರೆ ಈಗಿನ ಪರಿಸ್ಥಿತಿಗೆ ಪರಮಾತ್ಮ ಕಾರಣವೆ? ಅಂತಹ ಮಹಾತ್ಮರಿಗೇ ಧರ್ಮದ ಚೌಕಟ್ಟು ಅನಿವಾರ್ಯ ಆದಾಗ ಸಾಧಾರಣ ಮಾನವರಾದ ಈಗಿನವರಿಗೆ ಇದರ ಅಗತ್ಯವಿಲ್ಲವೆ? ಚೌಕಟ್ಟಿನಲ್ಲಿ ಅತಿಯಾದ ಹಿಂಸೆ, ನೋವು, ಸಂಕಟದ ರಾಜಕೀಯವಿದ್ದರೆ ಇಂದಿದು ಅಧರ್ಮ ವಾಗುತ್ತದೆನ್ನಬಹುದಷ್ಟೆ.

ಕಾರಣ ಜೀವಕ್ಕೆ ಅಪಾಯವಾಗುವಾಗ ಯಾರೂ ಚೌಕಟ್ಟಿನಲ್ಲಿ ಇರಲಾಗದು. ಹಿಂದಿನ ಕಾಲದಂತೆ ಇಂದು ಪರಿಸ್ಥಿತಿ ಕೆಟ್ಟಾಗ ಹೊರಬರುವುದಕ್ಕೆ ಸಹಕಾರವಿದೆ. ಆದರೆ ಕೆಲವರಿಗೆ ಧರ್ಮ,ಸತ್ಯದ ವಿಚಾರಗಳು ತಿಳಿಯದಿರುವ ಕಾರಣ ಬೌತಿಕದಲ್ಲಿ ಸ್ವತಂತ್ರವಾಗಿರಲು ಹೊರ ಬಂದು ತಿರುಗಿ ನಡೆಯಲಾಗದೆ ಮಧ್ಯವರ್ತಿಗಳಾಗಿದ್ದಾರೆ.

- Advertisement -

ಮಧ್ಯವರ್ತಿಗಳ ಅರ್ಧಸತ್ಯ ತಿಳಿದು ಸಹಕರಿಸಿದವರೂ ಇಂದು ಹೆಚ್ಚಾದ ಕಾರಣ ಜನರನ್ನು ಹಿಡಿದಿಡಲಾಗದೆ ಸರ್ಕಾರ ತನ್ನದೇ ಆದ ಅಸ್ತ್ರ ದಿಂದ ಎಚ್ಚರಿಸುವ ಕೆಲಸ ನಡೆದಿದೆ.

ಮಾನವನಿಗೆ ಒಂದು ಚೌಕಟ್ಟು ಅಗತ್ಯವಿದೆಯೆ? ಇಲ್ಲವೆ? ಧರ್ಮದ ಚೌಕಟ್ಟಿನಲ್ಲಿ ಬಂಧಿಗಳಾದವರು ಇಂದಿಗೂ ಅಮರರಾಗಿದ್ದಾರೆ. ಅಧರ್ಮದಿಂದ ನಡೆದವರು ಇಂದೂ ಇದ್ದಾರೆ. ದೇವಾಸುರರ‌ ನಡುವಿನ ಈ ಚೌಕಟ್ಟಿನಲ್ಲಿ ಗೆದ್ದವರು ಯಾರು? ಸೋತವರು ಯಾರು?ಇಬ್ಬರೂ ಭೂಮಿ ಮೇಲಿದ್ದವರೆ ಆದರೆ ಒಬ್ಬರು ಧರ್ಮ ರಕ್ಷಣೆಗಾಗಿ ಜೀವನ  ನಡೆಸಿದ್ದರೆ.

ಇನ್ನೊಬ್ಬರು ಸ್ವಾರ್ಥಚಿಂತನೆಯಲ್ಲಿ ರಾಜಕೀಯ  ನಡೆಸಿದ್ದಾರೆನ್ನಬಹುದಷ್ಟೆ. ಇಬ್ಬರಿಗೂ ಜನಬಲ, ಹಣಬಲ, ಅಧಿಕಾರಬಲ, ದೈವಬಲ ಜ್ಞಾನಬಲ ಎಲ್ಲಾ ಇತ್ತು. ಇದನ್ನು ನಾವು ಪುರಾಣ ಕಥೆಗಳ ಮೂಲಕ,ಇತಿಹಾಸದ ಮೂಲಕ ತಿಳಿಯಬಹುದು.

ಆದರೆ, ವಾಸ್ತವ ಸತ್ಯವೇ ಬೇರೆ ಅಂದಿನ ಸತ್ಯವೇ ಬೇರೆ. ಅಂದು ಚೌಕಟ್ಟನ್ನು ವರ್ಣಗಳ ಆಧಾರದ ಮೇಲೆ ಮಾಡಿ ಧರ್ಮರಕ್ಷಣೆ, ದೇಶರಕ್ಷಣೆ, ರಾಜ್ಯರಕ್ಷಣೆ ಮಾಡಿದ್ದರು.ಆದರೆ ಈಗಿದು ಜಾತಿಯ ಚೌಕಟ್ಟಾಗಿಟ್ಟುಕೊಂಡು ಜೀವರಕ್ಷಣೆಗಾಗಿ ಮಾನವ ತನ್ನಆತ್ಮವಂಚನೆಯತ್ತ ನಡೆಯುತ್ತಿರುವುದರಿಂದ  ಯಾವ  ಧರ್ಮಸತ್ಯ, ನ್ಯಾಯ, ನೀತಿ,ಸಂಸ್ಕೃತಿ, ಭಾಷೆಯ ಮೂಲ ಉದ್ದೇಶ ಜನರಿಗೆ ಅರ್ಥ ವಾಗದೆ, ಪುರಾಣವನ್ನು ಇತಿಹಾಸವನ್ನು ತಿರುಚಿಕೊಂಡು ರಾಜಕೀಯ ನಡೆಸುವವರ ಹಿಂದೆ ನಡೆದು, ತಮ್ಮ ಚೌಕಟ್ಟು ಸ್ವಚ್ಚವಿದ್ದರೂ ಹೊರಬಂದು ಹೊಲಸಾಗುತ್ತಿದೆ.

ಮಾನವನ ಮನಸ್ಸನ್ನು ತಡೆಹಿಡಿದು ಭೂಮಿಯನ್ನು ಆಳೋದರಿಂದ ಧರ್ಮರಕ್ಷಣೆ ಸಾಧ್ಯ. ಸ್ವೇಚ್ಚಾಚಾರಕ್ಕೆ ಬಳಸಿಕೊಂಡರೆ ಅಧರ್ಮಕ್ಕೆ ಜಯ. ಏನೇ ಇರಲಿ ಒಗ್ಗಟ್ಟು ಇರಲಿ ಎನ್ನುವ ಮಂತ್ರ ಇಂದು ರಾಜಕೀಯದ ಪರವಾಗಿ,ರಾಜಯೋಗದ ವಿರುದ್ದವಾಗಿರುವಾಗ ಎಲ್ಲಾ ಚೌಕಟ್ಟನ್ನು ದಾಟಿ ನಡೆಯುವಂತಾಗಿದೆ. ಕಾರಣ ಪಕ್ಷಗಳೆ ಪಕ್ಷಾಂತರಕ್ಕೆ ,ಧರ್ಮಗಳೆ ಧರ್ಮಾಂತರಕ್ಕೆ ಜಾತಿಗಳೆ ಜಾತ್ಯಾಂತರ ಕ್ಕೆ ಸಹಕರಿಸುತ್ತಾ ಮುಂದೆ ನಡೆದಾಗ ಒಂದೇ ದೇಶವನ್ನು ಒಂದು ಮಾಡಲು ಕಷ್ಟವಾಯಿತು.

ಇದಕ್ಕೆ ಮಧ್ಯವರ್ತಿಗಳು ತಮ್ಮ ತಮ್ಮ ಸುಖ ಶಾಂತಿಗೆ ಏನು ಬೇಕೋ ಅದನ್ನು ಬೌತಿಕದಲ್ಲಿ ಪಡೆದಿದ್ದರೂ ಮುಖ್ಯವಾದ ಆಧ್ಯಾತ್ಮ ಜಗತ್ತಿನ ಸತ್ಯ ಹಿಂದುಳಿದು ಈಗ ಅದೇ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದು ಭಾರತದಂತಹ ಪವಿತ್ರದೇಶಕ್ಕೆ ಅವಮಾನವೋ? ಸನ್ಮಾನವೋ? ಸನ್ಮಾನಕ್ಕಾಗಿ ಹಾತೊರೆಯುವ ಎಷ್ಟೋ ಜನರಿಗೆ ದೇಶದ ಮಾನ ಮರ್ಯಾದೆ ಯಾವ ಚೌಕಟ್ಟಿನಲ್ಲಿರಬೇಕಿತ್ತು ಎನ್ನುವ ಜ್ಞಾನವಿಲ್ಲವಾದರೆ ,ನಾವು ಭಾರತೀಯರೆ ಎನ್ನುವ ಅನುಮಾನ ಕಾಡದಿರುವುದಿಲ್ಲ.ದೇ ಶಬಿಟ್ಟು ಹೊರಗೆ ನಡೆದವರಿಗೆಸನ್ಮಾನ,ದೇಶದೊಳಗಿರುವ  ಪ್ರತಿಭಾವಂತ, ಜ್ಞಾನಿಗಳಿಗಿಲ್ಲವಾದರೆ ವಿಚಾರವನ್ನು

ಲಕ್ಷ, ಕೋಟಿ ಹಣದಿಂದ ತಿಳಿಯಲಾಗದು. ಕಣ್ಣೆದುರಿಗೇ ನಡೆಯುತ್ತಿರುವ ತಾರತಮ್ಯದಲ್ಲಿ ಧಾರ್ಮಿಕ ವಿಚಾರ ಬೇರೆ,ರಾಜಕೀಯವಿಚಾರ ಬೇರೆ ಆದರೆ ಕೊರೊನ ರೋಗ ಇಬ್ಬರಿಗೂ ಬೇರೆ ಬೇರೆ ಕಾಣುತ್ತಿದೆಯೆ? ಜನರನ್ನು ಗುಂಪು ಸೇರದಂತೆ ಮಾಡೋದೆ ಮುಖ್ಯ ವಿಚಾರವಾದರೆ, ಹೊರಗಿನ ವ್ಯವಹಾರದಲ್ಲಿಯೂ ಇದು ಅನ್ವಯಿಸುತ್ತದೆ.

ಹಾಗೇ ರಾಜಕೀಯ ವಿಚಾರಗಳು ಬರುತ್ತದೆ. ಮುಖ್ಯವಾದ ಮನರಂಜನಾ ಕಾರ್ಯಕ್ಕೆ ತಡೆ ಹಾಕಬಹುದು. ಆದರೆ, ಮಾಧ್ಯಮಗಳಲ್ಲಿ ಮನೆ ಮನೆ ತಲುಪುವ ಗುಂಪು ಘರ್ಷಣೆ ಯ ಮನರಂಜನ ಕಾರ್ಯಕ್ರಮ ದಿಂದಲೂ ಮಕ್ಕಳು,ಮಹಿಳೆಯರ ಮನಸ್ಸು ಹಾಳಾಗುತ್ತಿದ್ದರೆ, ಹಾಗೆ ನಕಾರಾತ್ಮಕ ಕಥೆಗಳ ಧಾರಾವಾಹಿ, ಚಲನಚಿತ್ರ ಇನ್ನಿತರ ಕಾರ್ಯಕ್ರಮ ವೀಕ್ಷಣೆಯಿಂದಲೂ ರೋಗ ಹೆಚ್ಚುವುದು. ಇನ್ನೊಂದು ಮುಖ್ಯ ವಿಚಾರವೆಂದರೆ ಸುದ್ದಿ ತಿಳಿದು ಮನಸ್ಸು ಹಾಳಾಗಿ ರೋಗ‌ಹೆಚ್ಚುವ ಬದಲು ಸುದ್ದಿ ತಿಳಿಯದೆ ಇದ್ದರೆ ಉತ್ತಮ ಶಾಂತಿ ಎಂಬ ನಂಬಿಕೆಯಲ್ಲಿ ಹಲವರು ಯಾವ ಸುದ್ದಿಗೂ ಬೆಲೆಕೊಡದೆ ತಮ್ಮ ದಿನನಿತ್ಯದ ಕಾರ್ಯ ನಡೆಸಿಕೊಂಡು ಹೋಗುತ್ತಿದ್ದವರಿಗೆ ಈಗ ಮನೆಯಲ್ಲಿ ಕೂರಿಸಿದರೆ ಅವರ ಆರ್ಥಿಕ ಸ್ಥಿತಿ ಏನಾಗಬಹುದು? ಮೊದಲು ನಾವು ಬದಲಾದರೆ ಮಾತ್ರ ಇತರರಿಗೆ ಉಪದೇಶ, ಉಪಕಾರ ಮಾಡಬಹುದು.

ಆದರೆ ಈಗ ಕೊರೊನ ದಿಂದ ಉಪಕಾರ ಯಾರಿಗಾಗಿದೆ ಉಪದೇಶ ನೀಡಿದರೆ ಕೇಳುವ ಮನಸ್ಥಿತಿ ಯಾರಿಗಿದೆ?ಎಲ್ಲಾ ಚೌಕಟ್ಟಿನಲ್ಲಿ ಹೊರಬಂದವರನ್ನು ಮತ್ತೆ ಚೌಕಟ್ಟು ಹಾಕಿ ಕುಳ್ಳಿರಿಸುವ ಕೆಲಸ ಸರ್ಕಾರ ನಡೆಸಿದ್ದರೂ ಅದನ್ನು ವಿರೋಧ ಪಕ್ಷಗಳ ಜೊತೆಗೆ ಮಾಧ್ಯಮದವರೂ ಅನುಸರಿಸಿದರೆ ಉತ್ತಮ ಫಲಿತಾಂಶವಿದೆ.

ಒಟ್ಟಿನಲ್ಲಿಯಾರ ಜೀವ ಉಳಿಸುವ ಮೊದಲು ನಮ್ಮ ಜೀವ ಯಾರ ಪರವಾಗಿದೆ ಎನ್ನುವ ಸತ್ಯಜ್ಞಾನ ಮಾನವರಿಗಿರಬೇಕಿದೆ. ಎಲ್ಲರ ಜೀವವೂ ಮುಖ್ಯವೆ. ಅನಾವಶ್ಯಕ ವಾಗಿ ತಿರುಗೋ ಜೀವದ ರಕ್ಷಣೆಗಾಗಿ ಜವಾಬ್ದಾರಿಯುತ ಪ್ರಜೆಯ ಜೀವ ಹೋದರೆ ಬಹಳ ನಷ್ಟ. ರಾಜಕಾರಣಿಗಳಾಗಲಿ, ವೈದ್ಯಕೀಯ ಸೇವಕರಾಗಲಿ ಸಾಮಾನ್ಯರಾಗಲಿ ಎಲ್ಲರೂ ಪ್ರಜೆಗಳಾಗಿ

ತಮ್ಮ ತಮ್ಮಜೀವರಕ್ಷಣೆಯ ಜೊತೆಗೆ ಆತ್ಮರಕ್ಷಣೆಯೂ  ಬಹಳ ಮುಖ್ಯ.ರೋಗದ ಹೆಸರಲ್ಲಿಆರೋಗ್ಯಹಾಳಾಗದಿರಲಿ. ಆರೋಗ್ಯವೆಂದರೆ ಆರು ಯೋಗ್ಯವಾದವುಗಳು, ಕಾಮ, ಕ್ರೋಧ, ಲೋಭ, ಮೋಹ, ಮಧ, ಮತ್ಸರ. ವು ಮಾನವನೊಳಗಿದೆ.ಮನೆಯೊಳಗೆ ಇದ್ದರೂ ಹೆಚ್ಚುತ್ತದೆ. ಹೊರಗೆ ಹೋದರೂ ಹೆಚ್ಚುತ್ತದೆ. ಇದನ್ನು ತಡೆಹಿಡಿಯಲು ಯೋಗ,ಧ್ಯಾನ,ದಾನ,ಧರ್ಮದ ಅಗತ್ಯವಿದೆ. ಅದನ್ನೇ ನಿಲ್ಲಿಸಿದರೆ ಗತಿ ಏನು?

ಯೋಗಿಗಳ ದೇಶವೀಗ ರೋಗಿಗಳ ದೇಶವಾಗಲು ಕಾರಣವೆ ಭೋಗದ ರಾಜಕೀಯ .ನಮ್ಮಲ್ಲೇ ಇರುವ ಈ ರಾಜಕೀಯತೆ ಬಿಟ್ಟು ಚಿಂತನೆ ನಡೆಸಿದರೆ ರೋಗಕ್ಕೆ ಕಾರಣ ತಿಳಿಯಬಹುದು. ಎಷ್ಟು ಹೊರಗಿನಿಂದ ಔಷಧ ಪಡೆದರೂ ತಾತ್ಕಾಲಿಕವಷ್ಟೆ. ರಾಜಕೀಯ ಕ್ಷೇತ್ರ ನಡೆಸಿದ ಪ್ರಜೆಗಳ ರಾಜಕೀಯವೆ ರೋಗ ಹರಡಲು ಕಾರಣ.ಮುಖ್ಯವಾಗಿ ಮಧ್ಯವರ್ತಿಗಳ ಸಹಕಾರವೆ ಕಾರಣ.

ಈಗಿನ ಪರಿಸ್ಥಿತಿಯಲ್ಲಿ ಮುಕ್ಕಾಲು ಭಾಗದ ಜನ ಸರ್ಕಾರದ ನಡೆ ನುಡಿ, ಮಾಧ್ಯಮಗಳ ಮೂಲಕ ನೋಡುತ್ತಾ ತಮ್ಮ ನಿತ್ಯ ಕರ್ಮ ಬಿಟ್ಟು ಕೊರೊನ ಹೋಗುವುದೆನ್ನುವ ನಂಬಿಕೆಗೆ ಕಟ್ಟುಬಿದ್ದು ಮನೆಯಲ್ಲಿ ಕಾಲಕಳೆದರೆ ನಷ್ಟ ಕಷ್ಟ ಕೇಳೋರು ಇರೋದಿಲ್ಲ. ಜೀವನ ಕ್ಷಣಿಕ. ಹೊರಗಿನ ಸತ್ಯ ತಾತ್ಕಾಲಿಕ. ಒಳಗಿನ ಜ್ಞಾನ ಶಾಶ್ವತ.

ಜ್ಞಾನಸಂಪಾದನೆಗಾಗಿ ಯೋಗದೆಡೆಗೆ ನಡೆದ ಮಹಾತ್ಮರ ದೇಶ ಇಂದು ದೇವರನ್ನು ಮರೆತು ಚೌಕಟ್ಟನ್ನು ಬಿಟ್ಟು ಹೊರಬಂದು ಯಾರೋ ನಮ್ಮ ಜೀವ ಉಳಿಸುತ್ತಾರೆಂದರೆ ಸಾಧ್ಯವೆ? ಉತ್ತಮ ಕಾರ್ಯಕ್ಕೆ ತಡೆಯಿದ್ದರೂ ನಮ್ಮ ಒಳಗಿನ ಚಿಂತನೆ ಉತ್ತಮವಾಗಿಸಿಕೊಳ್ಳಲು‌ ಮನೆಯೊಳಗಿದ್ದರೆ ಮಾತ್ರ ಸಾಧ್ಯ.

ಶ್ರೀ ರಾಮನವಮಿಯನ್ನು ಆಡಂಬರದಿಂದ ಆಚರಿಸುವ ಅಗತ್ಯವಿಲ್ಲ. ರಾಮಜಪದಿಂದಲೇ ಶ್ರೀ ರಾಮನ ರಕ್ಷೆ ಪಡೆಯಲು ಸಾಧ್ಯ. ರಾಮರಾಜ್ಯದ ಕನಸು ರಾವಣ ರಾಜ್ಯದ ಕಡೆ ನಡೆದಿದೆಯೆ? ಶ್ರೀ ರಾಮ ಯೋಗಿ,ರಾವಣ ಭೋಗಿ.

ಭಾರತದ ಈ ಸ್ಥಿತಿಗೆ ಪ್ರಜೆಗಳ ಭೋಗ ಜೀವನವೆ ಚೌಕಟ್ಟು ದಾಟಿ ಬರಲು ಕಾರಣ.ಇದರಿಂದಾಗಿ ಸಮಾಜದಲ್ಲಿ ರೋಗ ಹರಡುತ್ತಿದೆ.ರೋಗದ ಹೆಸರಲ್ಲಿ ವ್ಯವಹಾರ ನಡೆಸಿದರೆ ಹಣ ಸಿಗಬಹುದು. ಇದು ಆತ್ಮಹತ್ಯೆಗೆ ಸಮಾನ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!