ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಕೊರೊನವು ಗಾಳಿಯಲ್ಲಿ ಹರಡುತ್ತಿರುವುದಕ್ಕಿಂತ ಗಾಳಿಸುದ್ದಿಯಲ್ಲಿ, ಅರ್ಧಸತ್ಯದಲ್ಲಿ, ಅಜ್ಞಾನದಲ್ಲಿ ಅಧರ್ಮದಲ್ಲಿ ಸುದ್ದಿಮಾಧ್ಯಮಗಳಿಂದ, ಮಧ್ಯವರ್ತಿಗಳ ವ್ಯವಹಾರದಿಂದ ವೇಗವಾಗಿ ಜನರೊಳಗೆ ಸೇರುತ್ತಿದೆ. ಇದನ್ನು ಸರ್ಕಾರ ತಡೆಯಲು ಕಷ್ಟ.

ಸರ್ಕಾರವೇ ಕೊರೊನ ಹೆಚ್ಚಲು ಕಾರಣವೆಂದು ಜನರಲ್ಲಿ ತುಂಬಿರುವ ಅಜ್ಞಾನವನ್ನು ಹೆಚ್ಚಿಸಿ ಮನರಂಜನೆಯಲ್ಲಿ ಆತ್ಮವಂಚನೆ ಹೆಚ್ಚಾಗಿ ತುಂಬಿದರೆ ಮಾನವನ ರೋಗ ಹೋಗುವುದೆ? ಈವರೆಗೆ ಮಾಧ್ಯಮ ಈ ಕೆಳಗಿನ ವಿಚಾರಕ್ಕೆ ಅವಕಾಶ ನೀಡಿಲ್ಲ. ಜನರೆ ಎಚ್ಚರ!

ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳ ಜೀವದ ಜೊತೆಗೆ ಆಟ ಆಡಿ ಜೀವ‌ಹೋದಮೇಲೆ ಸರ್ಕಾರ ಕಾರಣವೆಂದರೆ ಅಜ್ಞಾನ. ಮಧ್ಯವರ್ತಿಗಳ ಜೀವನದಲ್ಲಿ ಮನರಂಜನೆಯ ಜೊತೆಗೆ ಆತ್ಮವಂಚನೆಯೂ ಸೇರಿರುತ್ತದೆ.ಸತ್ಯಾಸತ್ಯತೆಯನ್ನು ಮಧ್ಯೆ ಇಟ್ಟು ವ್ಯವಹಾರವಷ್ಟೆ ಜೀವನದ ಗುರಿ ಮಾಡಿಕೊಂಡವರಿಗೆ ಹಣಕ್ಕಾಗಿ ಹೆಣವನ್ನೂ ಮಾರಾಟ ಮಾಡುವ ದುರುದ್ದೇಶವಿರುತ್ತದೆ.ಇದನ್ನುಅಸುರಿತನವೆಂದಿದ್ದಾರೆ.

- Advertisement -

ವಿಜ್ಞಾನ ಜಗತ್ತು ಮಾನವನ ದೈಹಿಕಅಂಗಾಂಗಗಳನ್ನು ಒಬ್ಬರಿಗೊಬ್ಬರು ಜೋಡಿಸಿಕೊಂಡು ಜೀವ ಉಳಿಸುವಷ್ಟರ ಮಟ್ಟಿಗೆ ಮುಂದೆ ನಡೆದಿದೆ. ಆದರೆ ಮಾನವನ ಆಂತರಿಕ ಶಕ್ತಿಯನ್ನು ಅರ್ಥ ಮಾಡಿಕೊಳ್ಳುವ ಸತ್ಯಜ್ಞಾನದಿಂದ ಹಿಂದುಳಿದು ಜನಸಾಮಾನ್ಯರ ಜೀವವನ್ನುಕಡೆಗಣಿಸಿ ಅವರ ಸಾಮಾನ್ಯಜ್ಞಾನದ ಪವಿತ್ರತೆಯನ್ನು ಹಾಳು ಮಾಡಿ ಅವರನ್ನೇ ಆಳೋದಕ್ಕೆ ಹೊರಟವರಿಗೆ ಈಗಕೊರೊನ  ಅಡ್ಡ ಬಂದು ತಡೆ ಹಾಕಿದೆ.

ರಕ್ತದಾನ, ಅಂಗಾಂಗ ದಾನವೆಲ್ಲವೂ ಮಾನವನಿಗೆ ವ್ಯವಹಾರವಾಗಿತ್ತು. ಈಗಲೂ ಈ ವ್ಯವಹಾರ ವಿದೇಶಗಳಲ್ಲಿ ನಡೆಯುತ್ತಿದೆ. ವಿದೇಶದವರಿಗೆ
ದೇಹ ಒಂದು ಮನರಂಜನೆಯ ಮಾಧ್ಯಮ. ಭಾರತೀಯರಿಗೆ ದೇಹವೇ ದೇಗುಲ. ಈ ದೇಗುಲಗಳು ಈಗ ರೋಗದಿಂದ ನರಳುತ್ತಿದೆ ಎಂದಾಗ ದೇವರಿರುವರೆ?

ನಮ್ಮೊಳಗೇ ಅಡಗಿದ್ದ ಸತ್ಯವನ್ನು ಬಿಟ್ಟು ಹೊರಗಿನಿಂದ ಸತ್ಯ ತಿಳಿದು ನಮ್ಮ ವ್ಯವಹಾರಕ್ಕೆ ಬಳಸಿಕೊಂಡರೆ ಜನರನ್ನು ಆಳಬಹುದು. ಆದರೆ, ಜೀವ ಉಳಿಸಲಾಗದು.ಜೀವ ಉಳಿಸಿದರೂ ಆತ್ಮ ರಕ್ಷಣೆ ಕಷ್ಟ.ಕಾರಣ ಆತ್ಮಸಾಯೋದಿಲ್ಲ.

ಕಲಿಯುಗದ ಅಜ್ಞಾನದಲ್ಲಿ ಮಾನವನಿಗೆ ನಾನೆಲ್ಲಿ ತಪ್ಪಿದೆ ಎಂದು ಕೇಳಿಕೊಳ್ಳದಷ್ಟು ಮುಂದೆ ನಡೆದಿರುವಾಗ ಹಿಂದಿರುಗಲು ಕಷ್ಟ. ಹಾಗಂತ ಹಿಂದೆ ನಡೆದು ಬರುತ್ತಿರುವವರಿಗೆ ಸತ್ಯ ತಿಳಿಯಲು ಸಹಕರಿಸುವ ಸಾಮಾನ್ಯ ಜ್ಞಾನ ಇದ್ದರೆ ನಮ್ಮ ಕೆಟ್ಟಕರ್ಮಕ್ಕೆ ಮೇಲಿನ ಪರಮಾತ್ಮನ ಕ್ಷಮೆ ಇರಬಹುದು.

ಭಾರತೀಯರಲ್ಲಿ ಒಂದು ದೋಷವಿದೆ ತನ್ನ ಅಧಿಕಾರವನ್ನು ಇತರರೊಡನೆ ಹಂಚಿಕೊಳ್ಳದಿರುವುದು.ನನ್ನ ನಂತರ ಇದರ ಪರಿಣಾಮ ಏನಾಗಬಹುದೆನ್ನುವುದರ ಚಿಂತನೆ ನಡೆಸದಿರೋದು ಎಂದು ಸ್ವಾಮಿ ವಿವೇಕಾನಂದರು ಅಂದಿನ ಕಾಲದಲ್ಲೇ ತಿಳಿಸಿದ್ದರು.

ಎಂದರೆ ಭಾರತೀಯರಲ್ಲಿರುವ ಮಹಾ ಧೋಷವೇ ಈವರೆಗೆ ಎಳೆದು ತಂದಿದೆ. ಈಗಲೂ ಸತ್ಯ ತಿಳಿಸೋವವರನ್ನು ಅಧಿಕಾರ, ಹಣವಿಲ್ಲವೆನ್ನುವ ಕಾರಣಕ್ಕೆ ತಡೆದು ತಮ್ಮದೇ ಆದ ಚೌಕಟ್ಟಿನಲ್ಲಿ ಕ್ಷೇಮವಾಗಿರುತ್ತೇವೆ ಎನ್ನುವುದರಲ್ಲಿ ಅರ್ಥ ವಿಲ್ಲ. ನಮ್ಮ ಅಧಿಕಾರದಲ್ಲಿ ನಾವೇನು ಮಾಡಿದ್ದೇವೋ ಅದನ್ನೇ ಮುಂದಿನ. ಅಧಿಕಾರಿಗಳೂ ಮಾಡೋದು.

ಪರಮಾತ್ಮ ಅಧಿಕಾರ ಕೊಟ್ಟಿರುವುದು ಸಮಾಜಕಲ್ಯಾಣ ಕ್ಕಾಗಿ ಎಂದಾಗ ಅಧಿಕಾರ ಪಡೆದು ಸಮಾಜಕಲ್ಯಾಣವಾಗಿದೆಯೆ?ಪುರಾಣ,ಇತಿಹಾಸದ ಸತ್ಯವೇ ಬೇರೆ,ಪ್ರಜಾಪ್ರಭುತ್ವದ ಸತ್ಯವೇ ಬೇರೆ. ಅಂದಿನ ರಾಜರಿಗೆ ಜ್ಞಾನದ ಶಿಕ್ಷಣ ಗುರುಗಳು ನೀಡಿದ್ದರು.

ಈಗಿನವರಿಗೆ ಯಾವ ಶಿಕ್ಷಣ ನೀಡಲಾಗಿದೆ? ಈ ವಿಚಾರದಲ್ಲಿ ರಾಜಕೀಯತೆ ಬೆಳೆಸಿಕೊಂಡು ತಮ್ಮ ತಮ್ಮಚೌಕಟ್ಟನ್ನು ಭಧ್ರಗೊಳಿಸಿಕೊಳ್ಳಲೂ ಸಾಧ್ಯವಾಗದೆ ಚೌಕಟ್ಟನ್ನು ಬಿಟ್ಟು ಪರಧರ್ಮದೆಡೆಗೆ ನಡೆದವರನ್ನು ಧೋಷಿಗಳೆಂದರು.

ಜೀವನ ಎಂದರೆ ಜೀವಿಗಳ ವನ.ಸರಿಸಮಾನ ಒಗ್ಗಟ್ಟು ಬೆಳೆಸೋ ತತ್ವ ಬಿಟ್ಟು ತಂತ್ರದಿಂದ ಆಳೋದಕ್ಕೆ ಹೊರಟು ಪ್ರಜಾಪ್ರಭುತ್ವ ಬಂದರೂ ರಾಜಕೀಯ ಬಿಡದೆ ಅಸತ್ಯ,ಅನ್ಯಾಯ,ಅಧರ್ಮ,ಭ್ರಷ್ಟಾಚಾರದಲ್ಲಿಯೇ ದೇಶ ನಡೆಸಿದರೆ ಜನರ ಒಳಗೆ ಆರೋಗ್ಯ ಹೆಚ್ಚಾಗುವುದೆ? ರೋಗವೆ?
ಕೊರೊನವನ್ನು ಗಾಳಿಸುದ್ದಿ ಮಾಡೋದರಿಂದ ಏನೂ ಬದಲಾಗದು. ಕಾರಣ ನಾವು ಏನನ್ನು ಹರಡುವೆವೋ ಅದೇ ಹೆಚ್ಚಾಗುತ್ತದೆ.

ಇದಕ್ಕೆ ಪರಿಹಾರವೆಂದರೆ ಆರೋಗ್ಯಕರ ವಿಚಾರ ಮಕ್ಕಳು ಮಹಿಳೆಯರು ಪ್ರಜೆಗಳು ಮನೆಮನೆಯಲ್ಲಿದ್ದೇ ತಿಳಿಯಬೇಕು. ದೇಹದೊಳಗೆ ಸೇರಿದ ಎಷ್ಟೋ ವರ್ಷದ ಅನಾರೋಗ್ಯಕರ ವಿಚಾರಗಳನ್ನು ಹೊರಗೆ ಹಾಕುವುದಷ್ಟು ಸುಲಭವಲ್ಲ. ಆದರೂ ಒಳಗಿಟ್ಟುಕೊಂಡು ಇನ್ನಷ್ಟು ರೋಗದ ವಿಚಾರ ಸೇರಿಸಿದಷ್ಟೂ ಆತ್ಮಹತ್ಯೆಗಳು, ಜೀವಹತ್ಯೆಗಳು ಹೆಚ್ಚಾಗುತ್ತದೆ.

ಅಜ್ಞಾನವೆಂಬ ಮಹಾರೋಗಕ್ಕೆ  ಸತ್ಯಜ್ಞಾನವೆಂಬ ಔಷಧ ಕೊಡುವುದಕ್ಕೂ ನಮ್ಮಲ್ಲಿ ಸತ್ಯವಿರಬೇಕು. ನಮ್ಮಲ್ಲೇ ಇರದ ಸತ್ಯವನ್ನು ಓದಿ ತಿಳಿಸಿದರೂ ಮಕ್ಕಳಿಗೆ ಅರ್ಥ ಆಗೋದಿಲ್ಲ. ಗುರುವಾದವರು ಶಿಕ್ಷಕರು, ಪ್ರತಿಷ್ಟಿತರು,ಜ್ಞಾನಿಗಳು,ದೇಶಭಕ್ತರು, ದೇವರಭಕ್ತರು ಎಲ್ಲಾ ಜೀವ ಇದ್ದರೆ ಮಾತ್ರ ನಮ್ಮ ಅಧಿಕಾರ, ಹಣ,ಪದವಿ,ಪ್ರತಿಷ್ಟೆ.ಹಾಗೆ ಏನೂ ಅಧಿಕಾರವಿಲ್ಲದವರ  ಸಾಮಾನ್ಯಜ್ಞಾನದಿಂದ ದೈವತ್ವ ಪಡೆಯಬಹುದೆನ್ನುವ ಸತ್ಯವನ್ನು ನಮ್ಮ ಮಹಾತ್ಮರುಗಳು ಹಿಂದೆ ತಿಳಿಸಿದ್ದಾರೆ.

ಈಗ ನಾವು ಸಾಮಾನ್ಯ ಪ್ರಜೆಗಳಾಗಿ ನಿಂತು ಸತ್ಯ ಅರ್ಥ ಮಾಡಿಕೊಂಡರೆ ಬಂದಿರುವ ಸಮಸ್ಯೆಗಳಿಗೆ ಕಾರಣದ ಜೊತೆಗೆ ಪರಿಹಾರವೂ ಮನೆಯಲ್ಲೇ ಇರುತ್ತದೆ.

ಆದರೆ ಮನಸ್ಸನ್ನು ಆಧ್ಯಾತ್ಮದ ಕಡೆ ಎಳೆದು ಸತ್ಯದ ಕಡೆ ನಡೆದರೆ ಜೀವನ್ಮುಕ್ತಿ. ಇದಕ್ಕೆ ಹೊರಗಿನ‌ ಮದ್ಯವರ್ತಿಗಳ ಅಗತ್ಯವಿದೆಯೆ? ಕಂಡದ್ದೆಲ್ಲಾ ಸತ್ಯವಲ್ಲ.ಕಾಣದ ಸತ್ಯಕ್ಕೆ ಒಳನಡೆಯಬೇಕು. ಕೊರೊನ ಕಾಣದ ಸತ್ಯ.

ವ್ಯವಹಾರಕ್ಕೆ ಬಳಸಿದರೆ ಕೆಟ್ಟ ಪರಿಣಾಮ. ರಾಜಕೀಯದಿಂದ ತಡೆಯುವುದು ಕಷ್ಟ.ರಾಜಯೋಗದಿಂದ ಶಾಂತವಾಗಬಹುದು. ಕೋಟ್ಯಂತರ ಜೀವರಾಶಿಗಳನ್ನುಮಾನವನ ತನ್ನ ಸ್ವಾರ್ಥ ಕ್ಕೆ ಬಳಸಿ ಮನರಂಜನೆಯಲ್ಲಿದ್ದರೆ ತನ್ನ ಸಣ್ಣ ಜೀವ ರಕ್ಷಣೆಗೆ ಕೋಟಿಹಣ ಕೊಟ್ಟರೂ ಉಳಿಸಲು ಕಷ್ಟಪಡಬೇಕು.

ಯೋಗಿಗಳು ದೇಶ ರೋಗಿಗಳ ದೇಶ ಮಾಡಿರೋದು ಅನಾರೋಗ್ಯಕರ ವಿಚಾರಗಳನ್ನು ಗಾಳಿಸುದ್ದಿ ಮಾಡುತ್ತಾ ಬಂದಿರುವ ಮಧ್ಯವರ್ತಿಗಳು. ಇದರಲ್ಲಿ ನಾನೂ ನೀವೂ ಎಲ್ಲರೂ ಪಾಲುದಾರರೆ.

ನೋಡುವವರು ,ಕೇಳುವವರು ಸಹಕರಿಸುವವರು ಬೆಳೆದಂತೆಲ್ಲಾ ಈ ಮಧ್ಯವರ್ತಿಗಳು ಬೆಳೆಯುತ್ತಾರೆ. ಇವರಲ್ಲಿ ಒಳ್ಳೆಯ ಸುದ್ದಿಗಳಿದ್ದರೂ ಕೆಟ್ಟ ಸುದ್ದಿ ಮಾನವನ ಅಜ್ಞಾನಕ್ಕೆ ಹೆಚ್ಚು ಪ್ರಿಯವಾದಾಗ ಅದೇ ತನ್ನ ಪ್ರಭಾವ ತೋರಿಸುತ್ತದೆ. ಕಾಲದ ಪ್ರಭಾವ,ಆಗೋದೆಲ್ಲಾ ಒಳ್ಳೆಯದಕ್ಕೆ.

ಆಗೋದನ್ನು ತಡೆಯಲಾಗದು. ಆದರೆ ಆದ ಮೇಲೆ ವಿರೋಧಿಸಿ ಪ್ರಯೋಜನವಿಲ್ಲ. ಅನುಭವಕ್ಕೆ ಬಂದ ಮೇಲೇ ಜ್ಞಾನಬರೋದು ಎಂದ ಹಾಗೆ ಅನುಭವವಿಲ್ಲದೆ ಸತ್ಯ ಅರ್ಥ ಆಗೋದಿಲ್ಲ.ಸತ್ಯ ತಿಳಿಯದೆ ದೇವರ ಅಸ್ತಿತ್ವ

ಒಪ್ಪಲಾಗದು. ನಾನಿರೋವರೆಗೆ ದೇವರಿರೋದಿಲ್ಲ.ನಾನು ಹೋದಮೇಲೆ ದೇವರು ಕಾಣೋದಿಲ್ಲ. ನಾನು ಮತ್ತು ದೇವರು ಒಂದಾಗಲು‌ ಸತ್ಯವೇ ದೇವರಾಗಬೇಕು. ಸತ್ಯ ಒಳಗಿದೆ. ನಾನು ಹೊರಗಿದೆ.  ಪಂಚಭೂತಗಳಿಂದಾದ ಶರೀರವನ್ನು ಜೀವ ಹೋದಮೇಲೆ ತಿರುಗಿ ಪಂಚಭೂತಗಳಲ್ಲಿ ಲೀನವಾಗಿಸಿದರೆ ಆತ್ಮತೃಪ್ತಿ. ಭೂಮಿಯಲ್ಲಿ ಇಟ್ಟುಕೊಂಡು ತಮ್ಮ ಮನಸ್ಸಿಗೆ ಬಂದಂತೆ ಬಳಸಿದರೆ ಜೀವಕ್ಕೆ ಅತಂತ್ರಸ್ಥಿತಿ. ಇದೇ ಇತರರ ದೇಹದಲ್ಲಿ ಸೇರಿ ತನ್ನ ಆಟ ಪ್ರಾರಂಭಿಸಿದರೆ ನೋಡೋರಿಗೆ ಮನರಂಜನೆ, ಆದರೆ ಮೂಲ ಜೀವಿಯ ಆತ್ಮವಂಚನೆ.

ನಾಟಕದಲ್ಲಿ ನಾಟಕವಾಡಿದರೆ ಮನರಂಜನೆ, ಜೀವನದಲ್ಲಿ ನಾಟಕವಾಡಿದರೆ ಆತ್ಮವಂಚನೆ. ನಾಟಕದಲ್ಲಿ ಸತ್ಯ ಧರ್ಮ ಇದ್ದರೆ ಆರೋಗ್ಯ. ಇಲ್ಲವಾದರೆ ಅನಾರೋಗ್ಯ. ಮಾಧ್ಯಮಗಳು ಸರ್ಕಾರದ ವಿರುದ್ದ ಮಾತನಾಡುವಷ್ಟು ಸುಲಭವಲ್ಲ ಸರ್ಕಾರ ನಡೆಸುವುದೆನ್ನಬಹುದಷ್ಟೆ. ಆ ಸ್ಥಳದಲ್ಲಿದ್ದವರಿಗೆ ಮಾಧ್ಯಮಗಳ ವಿರುದ್ದ ಮಾತನಾಡೋಹಾಗಿಲ್ಲವಾದರೆ ಇಲ್ಲಿ ಯಾರಿಗೆ ಹೆಚ್ಚು ಸ್ವಾತಂತ್ರ?bಅರ್ಧಸತ್ಯದಿಂದ ರೋಗ ಹೆಚ್ಚುತ್ತದೆ.

ಅರ್ಧ ಬೆಂದ ಕಾಳೂರು ಆರೋಗ್ಯ ಕಳೆದುಕೊಂಡಿರುವುದು ಅರ್ಧಸತ್ಯದ
ಅನವಶ್ಯಕ ‘ವಿಷ’ಯ ಗಳಿಂದ. ಇದನ್ನು ಪೂರ್ಣ ಸತ್ಯದ ಕಡೆಗೆ ನಡೆಯಲು ಬಿಟ್ಟರೆ ಉತ್ತಮ ಆರೋಗ್ಯ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!