ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯಜ್ಞಾನದ ಅಗತ್ಯವಿದ್ದರೂ ಬೆಳೆಸಿಕೊಂಡ ವಿಶೇಷಜ್ಞಾನ ನಮ್ಮನ್ನು ಸತ್ಯ ತಿಳಿಯಲು ಬಿಡದೆ ಕಾಡುತ್ತದೆ. ವಿಶೇಷಜ್ಞಾನದಿಂದ ಯಾರನ್ನಾದರೂ ಆಳಬಹುದು.

ಆದರೆ ಸತ್ಯವನ್ನು ಆಳುವುದು ಕಷ್ಟ. ಕಾರಣ ಸತ್ಯವೇ ದೇವರು. ದೇವರು ಒಳಗಿದ್ದಾನೆ. ವಿಶೇಷಜ್ಞಾನ ಹೊರಗಿನಿಂದ ಒಳಗೆ ಸೇರಿದೆ. ಒಳಗೇ ಇದ್ದ ಸತ್ಯವನ್ನು ಬಿಟ್ಟು ಮುಂದೆ ನಡೆದವರಿಗೆ ಸತ್ಯ ಹಿಂದುಳಿದಿರುವ ವಿಚಾರ ತಿಳಿದರೂತಿರುಗಿ ಬರಲಾಗದೆ

ರಾಜಕೀಯದಿಂದ ಜನರನ್ನು ಆಳಲು ಹೊರಟಿದ್ದಾರೆನ್ನಬಹುದು. ಇದು ಎಲ್ಲಾ ಕ್ಷೇತ್ರದಲ್ಲಿಯೂ ಕಾಣುತ್ತಿರುವ ಮಹಾಸತ್ಯ. ಹೊರಗಿನ ನಾನು ಶಾಶ್ವತವಲ್ಲ. ದೇವರು ಎಲ್ಲರೊಳಗೂ ಇದ್ದರೂ ದೇವರನ್ನು ಮಾನವರು ಆಳೋದು ಕೆಲವರಷ್ಟೆ. ಮಾನವ ಕಾರಣಮಾತ್ರದವನಾದರೂ ಹಿಂದಿನ ಜನ್ಮದ ಋಣ ಕರ್ಮದ ಫಲಾಫಲವನ್ನು ಅನುಭವಿಸುವುದು ಜೀವಾತ್ಮನೆ ಪರಮಾತ್ಮನಲ್ಲ ಎಂದು.

- Advertisement -

ಜೀವನದ ಸತ್ಯ ತಿಳಿಯಲು ಬಂದ ಜೀವನಿಗೆ ಮಾಯೆ ಆವರಿಸಿ ರಾಜಕೀಯದೆಡೆಗೆ ನಡೆಸುತ್ತಾ ಜನರನ್ನು ತನ್ನೆಡೆಗೆ ಸೆಳೆಯಲು ದೇವರು,ಧರ್ಮ, ದೇಶ..ಮಧ್ಯೆ ನಿಂತು ಮುಂದೆ ಹೋದರೆ ಸದ್ಗತಿ ಹಿಂದೆ ನಿಂತರೆ ಹಿಂದುಳಿದವರಾಗೇ ಇರಬೇಕಾಯಿತು. ಇದನ್ನು ಸಾಮಾನ್ಯ ಜ್ಞಾನದಿಂದ ಅರ್ಥ ಮಾಡಿಕೊಂಡವರು ಹೊರಗಿನಿಂದ ತಮ್ಮ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ತಂತ್ರಗಾರಿಕೆಯಿಂದ ಜನರನ್ನು ದಾರಿ ತಪ್ಪಿಸಿ ಅಡ್ಡದಾರಿಯಲ್ಲಿ ನಡೆಸಿಕೊಂಡರು.

ಎಲ್ಲಾ ಒಂದೇ ದಾರಿಯಲ್ಲಿದ್ದರೆ ಸಮಾನತೆ, ಬೇರೆ ಬೇರೆ ಆದರೆ ಅಸಮಾನತೆ. ಅಸಮಾನತೆ ದೇವರಲ್ಲಿಲ್ಲ. ಮಾನವನಲ್ಲಿ ಮಾತ್ರ ಇರೋದಕ್ಕೆ ಕಾರಣ ಅಜ್ಞಾನ. ಅಜ್ಞಾನ ಹೋಗಲಾಡಿಸೋ ಜ್ಞಾನದ ಶಿಕ್ಷಣ ನೀಡುವಾಗ ರಾಜಕೀಯತೆ ಇರಲೇಬಾರದು. ಗುರುವಾದವರಿಗೆ ಶಿಷ್ಯರ ಆಂತರಿಕ ಶಕ್ತಿಯನ್ನು ತಿಳಿದು ತಕ್ಕ ವಿದ್ಯೆ ನೀಡಿ ಸ್ವತಂತ್ರವಾಗಿ ಜೀವನ ನಡೆಸಲು ಅಧಿಕಾರವಿದೆ. ಕಾಲಕ್ರಮೇಣ. ಶಿಕ್ಷಣವೇ ಪರರ ಸ್ವತ್ತಾಗಿ ಪರಕೀಯರ ಶಿಕ್ಷಣವನ್ನು ನಮ್ಮದೆನ್ನುವ ಪ್ರೀತಿ,ವಿಶ್ವಾಸ,ಗೌರವ ಬೆಳೆದಂತೆಲ್ಲಾ ಮೂಲದ ಶಿಕ್ಷಣದಲ್ಲಿ ಸತ್ವವಿಲ್ಲದೆ ಸತ್ಯವಿಲ್ಲದೆ ಕೇವಲ ವ್ಯವಹಾರಕ್ಕೆ ಬಳಸುವಂತೆ ಶಿಕ್ಷಕರಾದವರೆ ಮಕ್ಕಳಿಗೆ ಶಿಕ್ಷೆ ನೀಡಿ ಕಲಿಸಿದರೆ ಆತ್ಮವಂಚನೆಗೆ ತಕ್ಕ ಪ್ರತಿಫಲ ಅನುಭವಿಸಲೇಬೇಕು.

ಭಾರತದ ಜ್ಞಾನವನ್ನು ದಾನ ಮಾಡುವ ಮಹಾತ್ಮರುಗಳಿದ್ದರು.ಈಗ ಹೆಚ್ಚಿನವರಿಗೆ ಇದು ತಮ್ಮ ಸಂಸಾರವನ್ನು ಸಾಗಿಸಲು ಬೇಕಾದ ಒಂದು ಸಣ್ಣ ಕೆಲಸವಷ್ಟೆ ದೇಶದ ಭವಿಷ್ಯವಿರೋದೆ ಶಿಕ್ಷಣದಲ್ಲಿ.ಈಗಿದು ವಿದೇಶಿಗಳ ಪರವಾಗಿ ಶಿಕ್ಷಣವು ವ್ಯಾಪಾರದಂತಾಗಿದೆ. ಈ ವಿಚಾರವು ಎಲ್ಲಾ ಪೋಷಕರಿಗೂ ಶಿಕ್ಷಕರಿಗೂ,ಮಾದ್ಯಮಗಳಿಗೂ, ಸರ್ಕಾರಕ್ಕೂ ತಿಳಿದೇ ಇಷ್ಟು ವರ್ಷ ಮುಂದೆ ಬಂದಿದೆ. ಕೆಲವು ಮಹಾಬುದ್ದಿವಂತರು ಸರಿಯಿಲ್ಲವೆನ್ನುವ‌ ವಾದವಿವಾದ ಮಾಡಿದರೂ ಬದಲಾವಣೆಗೆ ಸಹಕರಿಸುವವರಿಲ್ಲದೆ ವ್ಯವಸ್ಥೆ ಹಾಗೇ ಇದೆ.

ಬದಲಾವಣೆ ಶಿಕ್ಷಣದಲ್ಲಿ ಆಗಬೇಕು.ಆದರೆ ಇದು ಮನೆಯೊಳಗಿನಿಂದಲೇ ಮೊದಲ ಗುರುವಿನಿಂದ ಪ್ರಾರಂಭ ವಾಗೋದಕ್ಕೂ ವಿದ್ಯಾವಂತ ಸ್ತ್ರೀ ಯರಿಗೆ ಹಿಂದಿನ ವಿಚಾರಗಳ ಪರಿಚಯವಿರೋದಿಲ್ಲ. ತಮ್ಮ ಶಿಕ್ಷಣದ ವಿಚಾರಗಳನ್ನು ಮಕ್ಕಳಿಗೆ ಕಲಿಸಿ ಸುಮ್ಮನಾಗುತ್ತಾರೆ. ಧಾರ್ಮಿಕ ವಿಚಾರ ತಿಳಿದವರಿಗೆ ಪುರುಷರ ಸಹಕಾರದ ಅಗತ್ಯವಿದೆ.

ಹೀಗೇ ಮನೆಯೊಳಗೆ ಒಗ್ಗಟ್ಟು ಇಲ್ಲವಾದರೆ ಮಕ್ಕಳ ಜ್ಞಾನ ಬೆಳೆಯುವುದಕ್ಕೆ ಕಷ್ಟ. ಸಾಮಾನ್ಯರ  ಸತ್ಯ ವಿಶೇಷ ವ್ಯಕ್ತಿಗಳಿಗೆ ರುಚಿಸುವುದಿಲ್ಲ. ಹೊರಗಿನಿಂದ ಓದಿದ ವಿಚಾರಗಳೇ ವಿಶೇಷವಾಗಿ ಒಳಗೆ ಸೇರಿಕೊಂಡು ನಮ್ಮ ದೇಹವನ್ನು ಆವರಿಸಿರುವಾಗ ಇದನ್ನು ಬಿಟ್ಟು ಸತ್ಯ ತಿಳಿಯಲು ಹಿಂದಿರುಗಿ ನೋಡಬೇಕಷ್ಟೆ. ಒಟ್ಟಿನಲ್ಲಿ ಯಾರೇ ಆಗಲಿ ಒಂದೇ ತರಹ ಇರಲಾಗೋದಿಲ್ಲ. ಒಂದೇ ಸತ್ಯ ಎಲ್ಲಾ ಒಂದೇ ರೀತಿಯಲ್ಲಿ ವಿವರಿಸೋದಿಲ್ಲ.

ಆದರೆ ಎಲ್ಲಾ ಇರೋದು ಒಂದೇ ಭೂಮಿಯಲ್ಲಿ, ದೇಶದಲ್ಲಿ,ದೇವರಲ್ಲಿ ಅವರವರ ಹಿಂದಿನ ಜನ್ಮ ಧರ್ಮ ಕರ್ಮಕ್ಕೆ ತಕ್ಕಂತೆ ಜೀವನ ಸತ್ಯ ಅರ್ಥ ಆಗಬಹುದು.ಒಂದೇ ರೀತಿಯ ಶಿಕ್ಷಣವಿದ್ದರೂ ತಿಳಿದುಕೊಳ್ಳಲು ಒಂದೇ ಜ್ಞಾನವಿರಬೇಕು. ಅದು ಸಾಮಾನ್ಯ ಜ್ಞಾನ. ಮಾನವಧರ್ಮದಿಂದ ದೈವದೆಡೆಗೂ ನಡೆಯಬಹುದು

ಅಸುರರೆಡೆಗೂ ಹೋಗಬಹುದು.ರಾಜಕೀಯತೆಯಲ್ಲಿ ದೈವ
ಶಕ್ತಿ ಕುಸಿದರೆ ಕಷ್ಟ ನಷ್ಟ ಹೆಚ್ಚಾಗುತ್ತದೆ. ಹೀಗಾಗಿ ಮಹಾತ್ಮರು ರಾಜಕೀಯ ಬಿಟ್ಟು ಮುಂದೆ ನಡೆ ಎಂದಿದ್ದಾರೆ.

ಕೊರೊನ ರೋಗವೂ ಹೆಚ್ಚು ಹರಡುತ್ತಿರುವುದು ಸಾಮಾನ್ಯರಿಗೆ ಮಾತ್ರ. ಕಾರಣವಿಷ್ಟೆ ನಮ್ಮ ಮನಸ್ಸು ಕ್ಷೀಣ ಆಗಿದ್ದು ನಕಾರಾತ್ಮಕ ಶಕ್ತಿ ಹೆಚ್ಚಿದಂತೆಲ್ಲಾ ರೋಗ ಕಾಣಿಸುತ್ತದೆ. ಹಾಗಂತ ದೊಡ್ಡವರಿಗೆ ವಿಶೇಷಜ್ಞಾನವಿದ್ದರೂ ಸೋಂಕು ಹರಡಿದೆ ಇಲ್ಲಿ ಅವರಲ್ಲಿ ದೈವಶಕ್ತಿಯ ಕೊರತೆಯ ಕಾರಣವಿರಬಹುದು. ಒಟ್ಟಿನಲ್ಲಿ ರೋಗಕ್ಕೆ ಯಾವುದೇ ಜಾತಿ,ಧರ್ಮ,ದೇಶ,ಭಾಷೆ,ಸಂಸ್ಕೃತಿ ಯ ವ್ಯವಹಾರದ ಅಗತ್ಯವಿಲ್ಲ.

ವ್ಯವಹಾರಕ್ಕೆ ಬಳಸಿದರೆ ಹಣ ಸಿಗಬಹುದು. ಇದಕ್ಕೆ ತಕ್ಕಂತೆ ರೋಗವೂ ಹೆಚ್ಚಾಗಬಹುದು.ಕೊರೊನ ಜಪ ಬಿಟ್ಟು ದೇವರ ನಾಮಜಪ ಮಾಡುತ್ತಾ ನಿತ್ಯಕರ್ಮವನ್ನು ಧರ್ಮದಿಂದ. ನಡೆಸಿದರೆ ಸಾಮಾಜಿಕ ಪರಿಸ್ಥಿತಿ  ನಿಧಾನವಾಗಿ ಸುಧಾರಿಸಬಹುದು. ಇದು ಮನೆ ಮನೆಯೊಳಗಿದ್ದೇ ಪ್ರಜೆಗಳೇ ಸಾಮಾನ್ಯಜ್ಞಾನದಿಂದ ಬೆಳೆಸಿ ಮಕ್ಕಳಿಗೂ ಕಲಿಸಲು ತಾತ್ಕಾಲಿಕವಾಗಿಯಾದರೂ ಸಣ್ಣ ಮಕ್ಕಳ ಹೊರಗಿನ ವಿದ್ಯೆಗಿಂತ ಆಂತರಿಕ ಶಕ್ತಿ ಹೆಚ್ಚಿಸುವ ಸಾತ್ವಿಕ ವಿದ್ಯೆ ಹೆಚ್ಚಿಸುವುದು ಭಾರತೀಯ ಪ್ರಜಾಧರ್ಮ.

ಮಾತೃಭಾಷೆ ಮರೆತು ಎಷ್ಟೇ ಸಾಧನೆ ಮಾಡಿದರೂ ವ್ಯರ್ಥ. ಜೀವ ಬಂದಿರೋದು ಮಾತೃವಿನಿಂದ ತಿರುಗಿ ಹೋಗೋದೂ ಅಲ್ಲಿಗೇ ಎಂದರೆ ತಾಯಿಯೇ ಇದನ್ನು ವಿರೋಧಿಸಿದರೆ ಮಕ್ಕಳನ್ನು ತಾನೇ ದೂರ ಕಳಿಸಿದಂತೆ. “ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ” ಹೋಗೋ ಮೊದಲು ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!