spot_img
spot_img

ಯೋಗಿಯ ಹೆಸರಲ್ಲಿ ಭೋಗ ನಡೆಸುವುದು ರೋಗವೇ…

Must Read

- Advertisement -

ಶುಕ್ರವಾರದಲ್ಲಿ ಲಕ್ಮಿಪೂಜೆ ಮಾಡಿ ಸಿರಿಸಂಪತ್ತನ್ನು ಮಾನವರು ಗಳಿಸಬಹುದು. ಆದರೆ,ಗುರುವಾರದಲ್ಲಿ ಗುರುವನ್ನ ಬೇಡುವವರ. ಸಂಖ್ಯೆ ಕಡಿಮೆಯಾಗಿದೆ. ಅದಕ್ಕೆ ಶನಿವಾರ. ಶನಿಮಹಾತ್ಮ ಬಂದು ಸರಿದಾರಿಗೆ ಎಳೆದೊಯ್ಯುವುದು.ಗುರುಗಳಲ್ಲಿ ದೇವಗುರು, ಅಸುರರ ಗುರುಗಳಿದ್ದಾರೆ.

ನಮಗೆ ಹೊರಪ್ರಪಂಚದಲ್ಲಿ ಶ್ರೀಮಂತರನ್ನಾಗಿಸೋ ಗುರು ಅಸುರಗುರು, ಹಾಗೆ ಒಳಪ್ರಪಂಚದ ಜ್ಞಾನದ ಶ್ರೀಮಂತರಾಗಿಸೋರೇ ದೇವಗುರು. ಇಂದು ಹೊರಪ್ರಪಂಚದ ಗುರುಗಳು ಹೆಚ್ಚು ಶ್ರೀಮಂತರು. ಅವರ ಹಿಂದೆ ನಡೆಯುವ ಶಿಷ್ಯರ ಸಂಖ್ಯೆ ದೊಡ್ಡದು.

ಹೀಗಾಗಿ ಮಾನವನೊಳಗೇ ಅಸುರೀ ಶಕ್ತಿ ಬೆಳೆದಿದೆ. ಸತ್ಯ,ಧರ್ಮದ ಹೆಸರಲ್ಲಿ ಶಿಕ್ಷಣದ ಹೆಸರಲ್ಲಿ ಈ ಶಕ್ತಿ ಮಕ್ಕಳನ್ನ ಆಟವಾಡಿಸಿ ಜೀವನದಲ್ಲೇ ಸೋಲಿಸಿದೆ. ಈ ಒಳ ಸತ್ಯ ತಿಳಿಯದ ಮಾನವ ತನ್ನ ಜೀವಕ್ಕೆ
ತಾನೇ ಅಪಚಾರ ಮಾಡಿಕೊಂಡು ನೋವಿನಲ್ಲಿ ನರಳುವಂತಾಗಿದೆ.

- Advertisement -

ಆಸೆಯೇ ದು:ಖಕ್ಕೆ ಮೂಲ.ಅತಿಆಸೆಯೇ ಅಜ್ಞಾನದ
ಸಂಕೇತ. ಒಟ್ಟಿನಲ್ಲಿ ನಮ್ಮ ಗ್ರಹಚಾರಕ್ಕೆ ಗ್ರಹಗಳನ್ನ ಸರಿಯಾಗಿ ತಿಳಿಯದೆ ನಡೆದಿರೋದೇ ಕಾರಣ. ವಿಜ್ಞಾನದ ಪ್ರಕಾರ ಗ್ರಹಗಳ ಚಲನವಲನದಿಂದ ಭೂಮಿಯ ಮೇಲೆ ಆಗೋ ವ್ಯತ್ಯಾಸ ತಿಳಿಯಬಹುದು.

ಆದರೆ,ಭೂಮಿಯ ಮೇಲಿದ್ದು ತನ್ನ ರಾಜಕೀಯದಲ್ಲಿ ಮಾನವ ಯಾವ ರೀತಿ ನಡೆದರೆ ಗ್ರಹಗಳು ಯಾವ ಪರಿಣಾಮ ಬೀರುವುದೆಂಬ. ಒಳಸತ್ಯ ತಿಳಿಸುವವರೇ ಜ್ಞಾನಿಗಳು. ಭಾರತ ಜ್ಞಾನಿಗಳ‌ ದೇಶವಾಗಿತ್ತು.ವಿದೇಶದ ವಿಜ್ಞಾನ ಹೆಚ್ಚಾದ. ಕಾರಣ ಇಂದಿನ ಭಾರತ ಹಿಂದುಳಿದವರ ಪಾಲಾಗಿದೆ.

ಆಡಳಿತ ನಡೆಸೋರಿಗೆ ಹಣ,ಅಧಿಕಾರ ಬೇಕು.ಜ್ಞಾನದ ಸತ್ಯ ತಿಳಿಯದೆ, ಗ್ರಹಚಾರವನ್ನ ದೇಶಕ್ಕೆ ಅಂಟಿಸಿಕೊಂಡು ಗ್ರಹಗಳಂತೆ ಜನರಿಗೆ ಆಚಾರ, ವಿಚಾರ, ಪ್ರಚಾರ ಮಾಡೋರಿಗೆ ಗ್ರಹಚಾರ ಇಲ್ಲವೆ? ಇದ್ದರೂ ಯಾರ ಕಣ್ಣಿಗೆ ಕಾಣದೆ, ಅದಕ್ಕೂ ಸರ್ಕಾರ ಕಾರಣವೆಂದು ಪ್ರಚಾರಮಾಡಬಹುದು. ಇದು ಸತ್ಯ. ಇಲ್ಲಿ ಸರ್ಕಾರ. ಎಂದರೆ ಸಹಕಾರ.

- Advertisement -

ಎಲ್ಲಿಯವರೆಗೆ ಮಾನವ ಸತ್ಕರ್ಮದಿಂದ,ಸ್ವಾಭಿಮಾನ, ಸ್ವಾವಲಂಬನೆಯ ಜೀವನ ನಡೆಸದೆ, ಪರಾವಲಂಬನೆಯಲ್ಲಿ ಸರ್ಕಾರದ ಹಿಂದೆ ನಡೆದು ದುಡಿಯದೆ ಸಾಲ ಮಾಡುತ್ತಾನೋಅಲ್ಲಿಯ ವರೆಗೆ ಹಣವೇನೂ ಸಿಗುತ್ತದೆ. ಅದರಿಂದಜ್ಞಾನ ಕುಸಿದು ಸಾಲ ಬೆಳೆದು ಆತ್ಮಹತ್ಯೆಗೆ ಶರಣಾಗುತ್ತಾನೆ.

ಸ್ವಲ್ಪ ಜ್ಞಾನವಿರೋರಿಗೆ ಸತ್ಯದರ್ಶನ ಮಾಡಿಸಲು ಶನಿಮಹಾತ್ಮ ತನ್ನದಾರಿಗೆಳೆದು ಜೀವನದ ಸತ್ಯದರ್ಶನ ಮಾಡಿಸುತ್ತಾನೆ. ಅಂದರೆ ಗ್ರಹಗಳನ್ನು ಸೂಕ್ಷ್ಮವಾಗಿ ತಿಳಿದು‌ ಮಾನವ ಬದುಕಿದರೆ,ಗ್ರಹಚಾರದ ಪ್ರಭಾವ ತೀರ್ವವಾಗಿರೋಲ್ಲ. ಮಾನವನ ಧರ್ಮಕರ್ಮಕ್ಕನುಗುಣವಾಗಿ ಭೂಮಿ ನಡೆದಿದೆ.

ಭೂತಾಯಿಯನ್ನೇ ಅಗೆದು ಬದುಕಿದರೆ ಗ್ರಹಚಾರ ಹೆಚ್ಚು. ಭೂಮಿಯನ್ನು ಸರಿಯಾಗಿ ತಿಳಿದು ಆಕಾಶಕ್ಕೆ ಹಾರಬಹುದು. ಆದರೂ ಮಾನವನ ಜನ್ಮ ಭೂಮಿಯಲ್ಲೇ ಮರಣವೂ ಇಲ್ಲೇ.ಇದನ್ನ ತಪ್ಪಿಸಲು, ತಡೆಯಲು ಮಾನವನಿಗೆ ಅಸಾಧ್ಯ. ಯೋಗಿಗಳಂತೆ ಬದುಕಿದರೆ ರೋಗ ಬರುವುದಿಲ್ಲ.

ಯೋಗಿಯ ಹೆಸರಲ್ಲಿ ಭೋಗ ಜೀವನ ನಡೆಸುವುದು ರೋಗವೆ.

  • ಯೋಗಾ + ಯೋಗ = ನಿರೋಗದಯೋಗ
  • ಯೋಗ+ಭೋಗ= ರೋಗ
  • ಭೋಗ+ಭೋಗ=ಭವರೋಗ.

ಜ್ಞಾನದಿಂದ ಯೋಗ, ಭಕ್ತಿ ಯಿಂದ ಯೋಗ,ಕರ್ಮದಿಂದ ಯೋಗ ದೊರೆಯಲು ಮಾನವ ಮೈ ಮನಸ್ಸನ್ನ ಒಂದಾಗಿಸಿ ಬದುಕಬೇಕು. ಇದು ಕಾಯಕವೇ ಕೈಲಾಸವಾದರೆ ಕರ್ಮಯೋಗಿ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group