ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ರಾಜಕೀಯದಿಂದ ದೇಶ ಮಾತ್ರ ಹಾಳಾಗೋದಿಲ್ಲ ದೇಹವೇ ಹಾಳಾಗುತ್ತದೆ. ಹಿಂದಿನ ಪುರಾಣ ಕಥೆಗಳ ಮಹಾತ್ಮರ ಹೆಸರಲ್ಲಿ ತಾವೇ ಮಹಾತ್ಮರೆನ್ನುವಂತೆ ರಾಜಕೀಯ ನಡೆಸಿದರೆ ಪಾಪವೇ ಸುತ್ತಿಕೊಂಡು ಜೀವ ನರಕಕ್ಕೆ ಹೋಗುತ್ತದೆ.

ಅಂದಿನ  ಧರ್ಮ ಶಿಕ್ಷಣ ಇಂದಿಲ್ಲ. ರಾಜಕೀಯದಲ್ಲಿ ಧರ್ಮ ವೇ ಇಲ್ಲ. ಪ್ರಜೆಗಳನ್ನು ಆಳೋದರಲ್ಲಿ ಅರ್ಥ ವೇ ಇಲ್ಲ.ಇನ್ನು ಅಧರ್ಮಕ್ಕೆ ಸಹಕರಿಸುವ ಪ್ರಜೆಗಳಿಗೆ ಸತ್ಯ ಧರ್ಮದ ಅರಿವಿಲ್ಲವಾದರೆ ಇದರಿಂದ ದೇಶ ರಕ್ಷಣೆ ಆಗುವುದೆ? ಆತ್ಮನಿರ್ಭರ ಭಾರತಕ್ಕೆ ಬೇಕಿದೆ ಆತ್ಮ ಸಾಕ್ಷಿಯ ಜೀವನ. ರಾಜಕೀಯದಲ್ಲಿದೆಯೆ? ರಾಜಕಾರಣಿಗಳು ಬದಲಾದರೂ ಜನಸಾಮಾನ್ಯರ ಅಜ್ಞಾನ ಬದಲಾಗದಿದ್ದರೆ ಯಾವ ಬದಲಾವಣೆಯೂ ರಾಜಕೀಯದಲ್ಲಿ ಆಗೋದಿಲ್ಲ.

ರಾಜಕಾರಣಿಗಳು ಜನರ ಬೇಡಿಕೆಗಳಿಗೆ ತಕ್ಕಂತೆ ನಡರಯುತ್ತಾರೆ. ಬೇಡಿಕೆಗಳೇ ಅಜ್ಞಾನದ ಜೀವನವನ್ನು ಬೆಳೆಸುತ್ತಿದ್ದರೆ ಆರೋಗ್ಯಕರ ಸಮಾಜವಿರುವುದೆ? ಇದಕ್ಕೆ ಧಾರ್ಮಿಕ ವರ್ಗದವರೆ ಕಾರಣ.

- Advertisement -

ರಾಜಕಾರಣಿಗಳ ನಡೆ ನುಡಿ ಪಾರದರ್ಶಕ ವಾಗಿರುತ್ತದೆ. ಆದರೆ ಹಿಂದಿನಿಂದ ಅವರನ್ನು ಬೆಳೆಸುತ್ತಿರುವವರು ಯಾರು? ಅಜ್ಞಾನದ, ಅಧರ್ಮದ ರಾಜಕೀಯತೆ ಬೆಳೆದಿರೋದೆ ಶಿಕ್ಷಣ ದಿಂದ. ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನದ ಶಿಕ್ಷಣದ ಅಗತ್ಯವಿದೆಯೇ ಹೊರತು ರಾಜಕೀಯದ ಅಗತ್ಯವಿಲ್ಲ.

ಇದನ್ನು ಮಾಧ್ಯಮಗಳು ಚರ್ಚೆ ನಡೆಸದೆ,ಬೌತಿಕದಲ್ಲಿ ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತಾ ರಾಜಕಾರಣಿಗಳ ಧೋಷ ಮಾತ್ರ ತೋರಿಸುತ್ತಾ ಜನರನ್ನು ಅವರ ವಿರುದ್ದ ನಡೆಸುತ್ತಾ ಎಲ್ಲೆಂದರಲ್ಲಿ ಭ್ರಷ್ಟಾಚಾರವನ್ನು ಹರಡುತ್ತಿದ್ದರೆ ಬೆಳೆಯೋದು ಭ್ರಷ್ಟರೆ. ಇದು ಜನಸಾಮಾನ್ಯರನ್ನೇ ಆಳುತ್ತಿರುವಾಗ ಇದು ಆತ್ಮನಿರ್ಭರ ಭಾರತವೆ? ವಿದೇಶಿಗಳನ್ನು ಒಳಗೆಳೆದುಕೊಂಡು ಅವರ ಶಿಕ್ಷಣವನ್ನು ಒಳಗೆ ಹಾಕಿಕೊಂಡು, ವ್ಯವಹಾರದಲ್ಲಿ ಅವರ ಕೈ ಕೆಳಗಿದ್ದು ದೇಶದ ಸಾಲ ತೀರಿಸಲಾಗುವುದೆ?

ಇದರಿಂದಾಗಿ ಪ್ರಜಾಪ್ರಭುತ್ವ ಹಾಳಾಗಿ ಹೋಗುತ್ತಿದ್ದರೂ ಯಾರೊಬ್ಬರೂ ನಮಗೇನೂ ನಷ್ಟವಿಲ್ಲವೆನ್ನುವಂತೆ ಮನರಂಜನೆಯಲ್ಲಿ ಮೈ ಮರೆತಿರುವುದು ಆತ್ಮಸಾಕ್ಷಿಗೆ ವಿರುದ್ದವಾಗಿದೆ. ಸತ್ಯವೆ ದೇವರು ಎನ್ನುವವರೆ ಅಸತ್ಯದ ರಾಜಕೀಯ ನಡೆಸುತ್ತಿರುವಾಗ ದೇಶದೊಳಗೆ ದೇವರಿದ್ದಾರೆಯೆ? ದೇವಸ್ಥಾನ ಗಳು‌ ಕೊರೊನ ದ ಕಾರಣ ಮುಚ್ಚಲು ದೇವರೆ ಕಾರಣವೆ? ಪರಮಾತ್ಮ ಪ್ರತಿಯೊಬ್ಬರೊಳಗಿದ್ದರೂ ಕೇವಲ ಹಣವಂತರ ಸತ್ಯ ಮಾತ್ರ ಯಾಕೆ ಸತ್ಯವಾಗುತ್ತಿದೆ? ಇವೆಲ್ಲದರ ಮಧ್ಯೆ ಜೀವನ ನಡೆಸಿರುವ ಎಲ್ಲಾ ಪ್ರಜೆಗಳು ಎಚ್ಚೆತ್ತುಕೊಳ್ಳದೆ ತಮ್ಮಲ್ಲೇ ಅಡಗಿರುವ ರಾಜಕೀಯತೆಯನ್ನು ಬಿಟ್ಟು ಸತ್ಯದೆಡೆಗೆ ನಡೆಯದಿದ್ದರೆ ಆತ್ಮಹತ್ಯೆಯಾಗುತ್ತದೆ.

ಇದಕ್ಕೆ ಜೀವ ಶಾಶ್ವತವಲ್ಲ.ಆತ್ಮಶಾಶ್ವತ.ಆತ್ಮನಿರ್ಭರ ಭಾರತ ಆಗೋದಕ್ಕೆ ಆತ್ಮಾನುಸಾರ ನಡೆದು ರಾಜಯೋಗ ಪಡೆದರೆ ಉತ್ತಮ. ಮಕ್ಕಳೂ ಪೋಷಕರ ದಾರಿಯಲ್ಲಿ ನಡೆಯುತ್ತಿರುವಾಗ ನಮ್ಮ ನಮ್ಮ ದಾರಿ ಸ್ವಚ್ಚಗೊಳಿಸಿ ಕೊಳ್ಳುವುದು ಪ್ರಜಾಧರ್ಮ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಎಲ್ಲಾ ಸಮಸ್ಯೆಗಳಿಗೆ ಕಾರಣ.ಸಮಸ್ಯೆಗಳ ಮೂಲವೇ ಶಿಕ್ಷಣ ಶಿಕ್ಷಣದಲ್ಲಿಯೇ ರಾಜಕೀಯವಿದ್ದರೆ ಮಕ್ಕಳ ಸಾಮಾನ್ಯಜ್ಞಾನ ಬೆಳೆಯದೆ ಪರರ ಜ್ಞಾನವೇ ಆಳೋದಾಗುತ್ತದೆ.

ಮೊದಲು ಮಾನವನಾದರೆ ನಂತರ ಮಹಾತ್ಮನಾಗಬಹುದು. ಆಧ್ಯಾತ್ಮ ಗುರುವಾಗಲು ಮೊದಲು ನಮ್ಮನ್ನು ನಾವು ತಿಳಿದು ನಡೆಯಬೇಕಷ್ಟೆ. ಯಾರೋ ಹೇಳಿದ್ದಾರೆ ,ಮಾಡಿದ್ದಾರೆ,ತಿಳಿಸಿದ್ದಾರೆಂದು ಸತ್ಯ ಅರ್ಥ ಮಾಡಿಕೊಳ್ಳದೆ ,ಪರಿಸ್ಥಿತಿಯನ್ನರಿಯದೆ,ವಾಸ್ತವತೆಯಿಂದ ದೂರ ನಿಂತು ರಾಜಕೀಯತೆ ಬೆಳೆಸುವುದೆ ಅಧರ್ಮ.

ತತ್ವಗಳನ್ನು ಪ್ರಚಾರ ಮಾಡಬಹುದು.ಅಳವಡಿಸಿಕೊಳ್ಳಲು ಕಷ್ಟ. ಕಷ್ಟಪಡದೆ ತಂತ್ರಜ್ಞಾನವನ್ನು ಬೆಳೆಸಿದರೆ ಧರ್ಮ ವೆ? ಈ ವಿಚಾರವನ್ನು ಜನಸಾಮಾನ್ಯರು ಅರ್ಥ ಮಾಡಿಕೊಂಡರೆ ಸತ್ಯದರ್ಶನ ಸಾಧ್ಯವಿದೆ. ನಮ್ಮ ಹಣ, ಸಹಕಾರ, ಸಹಾಯ ಪಡೆದವರು ಇಂದು ಎತ್ತರದ ಸ್ಥಾನಮಾನದಲ್ಲಿದ್ದಾರೆ.

ಆದರೆ ಜನಸಾಮಾನ್ಯರ ಮಾನ ಮರ್ಯಾದೆ ಉಳಿಸುವುದಕ್ಕೆ ಕಷ್ಟ ಮೇಲೇರಿದವರಿಗೆ ಕೆಳಗಿನ‌ಕಷ್ಟ ಕಾಣೋದಿಲ್ಲ.ಕಂಡರೂ ತಿರುಗಿ ಕೆಳಗಿಳಿದು ಬರುವುದು ಕಷ್ಟ. ಹೀಗಾಗಿ ಅವರವರ ಸ್ಥಾನದಲ್ಲಿದ್ದೇ ಅವರೊಳಗಿರುವ‌ಸತ್ಯವನ್ನರಿತು ಆ ಪರಮಾತ್ಮನಿಗೆ ಶರಣಾದರೆ ಒಳಗಿನ‌ ಮಾನ ಉಳಿಸಬಹುದು. ಇಲ್ಲಿ ಯಾರನ್ನೂ ಯಾರೋ ಆಳೋ ರಾಜಕೀಯಕ್ಕೆ ಬದಲಾಗಿ ನಮ್ಮನ್ನು ನಾವೇ ಆಳೋದಕ್ಕೆ ಬೇಕಾದ ರಾಜಯೋಗವನ್ನು ಅಳವಡಿಸಿಕೊಳ್ಳಲು ನಮ್ಮಲ್ಲಿ ಒಗ್ಗಟ್ಟು ಅಗತ್ಯವಿದೆ.

ಮಧ್ಯವರ್ತಿಗಳು, ಮಧ್ಯಮವರ್ಗ, ಮಾಧ್ಯಮ, ಮಹಿಳೆಕ್ಕಳಿಂದಲೇ ಮನುಕುಲದ ಅಳಿವು ಉಳಿವಿದೆ. ಮುಂದೆ ನಡೆಯುವ ದಾರಿ ಆಧ್ಯಾತ್ಮದ ಕಡೆ ಇದ್ದರೆ ಸದ್ಗತಿ. ಇಲ್ಲವಾದರೆ ಅಧೋಗತಿ.ಇದನ್ನು ಸರ್ಕಾರ ತಪ್ಪಿಸಲಾಗದು.ಕಾರಣ ಸರ್ಕಾರ ನಡೆದಿರೋದೆ ನಮ್ಮ ಸಹಕಾರದಿಂದ. ಇದರಲ್ಲಿ ಅವರ ತಪ್ಪಿಗಿಂತ ನಮ್ಮ ತಪ್ಪು ಹೆಚ್ಚಾಗಿದೆ ಎನ್ನಬಹುದಷ್ಟೆ ರಾಜಪ್ರಭುತ್ವದ ರಾಜಕೀಯತೆಗೂ, ಈಗಿನ ರಾಜಕೀಯತೆಗೂ ವ್ಯತ್ಯಾಸವಿದೆ. ಅಂದು ಧರ್ಮಜ್ಞಾನವಿತ್ತು ಇಂದು ಅಧರ್ಮದ ರಾಜಕೀಯವಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!