ದಿನಕ್ಕೊಂದು ಸಾಮಾನ್ಯಜ್ಞಾನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಮಾನವನ ಜೀವನವೇ ಒಂದು ಹೋರಾಟ. ಈ ಹೋರಾಟ ತನ್ನ ಜೀವಕ್ಕೆ ತೃಪ್ತಿ ಕೊಡುವುದೋ ಆತ್ಮಕ್ಕೋ ಎನ್ನುವ ಪ್ರಶ್ನೆ ಹಾಕಿಕೊಳ್ಳುವ ಹೊತ್ತಿಗಾಗಲೆ ಆಯಸ್ಸು ಮುಗಿದು ಜೀವ ಹೋಗಿರುತ್ತದೆ. ಒಟ್ಟಿನಲ್ಲಿ ಜನ್ಮ ಜನ್ಮಗಳವರೆಗೆ ನಡೆಸಿಕೊಂಡು ಬರುವ ಹೋರಾಟದಲ್ಲಿ ಗೆದ್ದವರು ವಿರಳ. ಸತ್ಯ ಧರ್ಮವಿಲ್ಲದ ಹೋರಾಟ ಕೇವಲ ರಾಜಕೀಯವನ್ನಷ್ಟೇ ಬೆಳೆಸಿ ಅಶಾಂತಿ ಸೃಷ್ಟಿಸಬಹುದು.

ಯುಗಯುಗದ ಕೊನೆಯಲ್ಲಿ ನಡೆದ ಧರ್ಮ ರಕ್ಷಣೆಯ ಹೋರಾಟದಲ್ಲಿದ್ದ ‌ಸೂಕ್ಷ್ಮ ಸತ್ಯವನ್ನು ಕಲಿಯುಗ ಮಾನವ ಅರ್ಥ ಮಾಡಿಕೊಳ್ಳದೆ, ತನ್ನೊಳಗೇ ಇದ್ದ ಸತ್ಯ ಧರ್ಮವನ್ನು ಬಿಟ್ಟು ಹೊರಗಿನ ರಾಜಕೀಯದೆಡೆಗೆ ನಡೆದು ಕೊನೆಯಲ್ಲಿ ಕಂಡ ಕಷ್ಟ ನಷ್ಟ,ಸಾವು ನೋವುಗಳಿಗೆ ಅಜ್ಞಾನವೆ ಕಾರಣ.

ಇದನ್ನು ಜ್ಞಾನದ ಶಿಕ್ಷಣದಿಂದ ಸರಿಪಡಿಸುವ ಬದಲಾಗಿ, ಅದನ್ನು ರಾಜಕೀಯವಾಗಿ ಬಳಸಿಕೊಂಡು ಸಾಮಾನ್ಯರನ್ನು ಆಳಲು ಹೋಗಿ ಆತ್ಮಜ್ಞಾನವಿಲ್ಲದೆ ಆತ್ಮಹತ್ಯೆಗಳು ಹೆಚ್ಚಾಗಿದೆ. ರಾಜಪ್ರಭುತ್ವ ದ ಹೋರಾಟದಲ್ಲಿದ್ದ ದೇಶಭಕ್ತಿ,ಧರ್ಮ ಸತ್ಯ ಇಂದಿಲ್ಲ.

- Advertisement -

ಆದರೆ ಹೋರಾಟ,ಹಾರಾಟ,ಮಾರಾಟಗಳಿಗೇನು‌ ಕಡಿಮೆಯಿಲ್ಲ. ಎಲ್ಲಾ ಸರಿಸಮಾನ ಎನ್ನುವವರೆ ಸಾಮಾನ್ಯರ ದಾರಿತಪ್ಪಿಸಿ ಆಳುತ್ತಿರುವುದರಿಂದ ಪ್ರಜಾಪ್ರಭುತ್ವ ಹದಗೆಟ್ಟಿದೆ. ಹೀಗಿರುವಾಗ. ಇಲ್ಲಿ ಯಾರು ಸರಿ ಯಾರು ತಪ್ಪು? ಎನ್ನುವ ಪ್ರಶ್ನೆ ಬರೋದಿಲ್ಲ.

ಮಾಧ್ಯಮಗಳಲ್ಲಿ ಇದರ ಬಗ್ಗೆ ಚರ್ಚೆ ನಡೆಸೋರಿಗೆ ಮಧ್ಯವರ್ತಿಗಳು ಎನ್ನಬಹುದು. ಜನರಪರ ನಿಲ್ಲಬೇಕೋ ರಾಜಕಾರಣಿಗಳ ಪರವೋ? ಇಷ್ಟಕ್ಕೂ ‌ನಾವೀಗ ಜೀವನ ನಡೆಸಿರೋದು ಪ್ರಜಾಪ್ರಭುತ್ವ ಸರ್ಕಾರದಲ್ಲಿ. ಸರ್ಕಾರ ನಡೆದಿರೋದೆ ಪ್ರಜೆಗಳಿಂದ. ಇಲ್ಲಿ ಜನಸಾಮಾನ್ಯರ ಬೇಡಿಕೆಗಳು ಶೀಘ್ರವಾಗಿ ಈಡೇರದ ಕಾರಣ ಹೋರಾಟಗಳು ಹೆಚ್ಚಾಗುತ್ತಿದೆ.

ರಾಜಕಾರಣಿಗಳ ಇನ್ನಿತರ ಪ್ರತಿಷ್ಠಿತರ ಒಂದು ಸಮಸ್ಯೆ ನಮಗೆ ಕಾಣುತ್ತಿಲ್ಲ. ಇದ್ದರೂ ತಕ್ಷಣ ಸ್ಪಂಧಿಸುವವರ ಅಧಿಕಾರದಲ್ಲಿ ನಷ್ಟಕಷ್ಟ ಅನುಭವಿಸುವವರು ಜನಸಾಮಾನ್ಯರೆ. ಸಹಕಾರ ಕೊಟ್ಟು ಬೆಳೆಸಿರುವುವಾಗ ಬೇಡಿಕೆಗಳೂ ಬೆಳೆಯುತ್ತದೆ. ಕೊರೊನ ಸಮಯದಲ್ಲಿ ನಾವು ಕಂಡ ಹಾಗೆ ದೇಶದ ಶಿಕ್ಷಣ ಹಾಳಾಗಿದೆ,ಮಂದಿರಗಳು, ಧರ್ಮ ಕಾರ್ಯಕ್ರಮ ನಿಲ್ಲುತ್ತಿದೆ.

ಜನಸಾಮಾನ್ಯರನ್ನು ತಡೆದು ನಿಲ್ಲಿಸಿ ಕೆಲವರು ತಮ್ಮ ವಸೂಲಿ ನಿರಾಯಾಸವಾಗಿ ಮಾಡಿಕೊಳ್ಳಲಾಗುತ್ತಿದೆ. ಗುಂಪು ಸೇರಬಾರದೆಂಬ ಕಡ್ಡಾಯ ಇದ್ದರೂ,ರಾಜಕೀಯ ಚುನಾವಣಾಪ್ರಚಾರದಲ್ಲಿ ಗುಂಪುಗಳಾಗುತ್ತಿದೆ. ಚಲನಚಿತ್ರ ಇನ್ನಿತರ ಮನರಂಜನೆಯಲ್ಲಿ ಜನಸಂದಣಿ ಇದ್ದರೂ ಕೇಳದೆ ವ್ಯವಹಾರಕ್ಕಷ್ಟೇ ಅವಕಾಶವಿದೆ ಎಂದರೆ ಹಣಕ್ಕಾಗಿ ,ಹಣದಿಂದ, ಹಣವೇ‌ ಜೀವಕ್ಕಿಂತ ಮುಖ್ಯ.

ಇದು ರಾಜಕೀಯವಾಗಿ ಬೆಳೆದು,ಜನರ ಜೀವನಕ್ಕೆ ಬೆಲೆಯಿಲ್ಲ ಎಂದರೆ‌, ಇದೊಂದು ಅಧರ್ಮವೆನ್ನಬೇಕೋ,ಧರ್ಮ ಎನ್ನಬೇಕೋ? ಒಟ್ಟಿನಲ್ಲಿ ರೋಗವನ್ನು ಇಟ್ಟುಕೊಂಡು ತಮ್ಮ ಸ್ವಾರ್ಥ ಬೆಳೆಸಿಕೊಳ್ಳಲು ಕೊರೊನ ಭ್ರಷ್ಟರಿಗೆ,ದುಷ್ಟರಿಗೆ ಸಹಕಾರ ನೀಡಿದೆ. ಸ್ವತಂತ್ರವಾಗಿ ತಿರುಗಿಕೊಂಡಿರುವ ಹಲವು ಮಂದಿಗೆ ಕೊರೊನ ಬಂದಿಲ್ಲ. ಮನೆಯೊಳಗಿರುವವರಿಗೆ ಬರುತ್ತಿದೆ ಎಂದರೆ ಒಂದು ವಿಶೇಷವಾದ ರೋಗ ಹೆಚ್ಚಾಗಲು ಕಾರಣ ಮಾನವನಲ್ಲಿ ಸಕಾರಾತ್ಮಕ ಶಕ್ತಿ ಕುಸಿಯುತ್ತಿರುವುದು.

ಇದನ್ನು ಹೆಚ್ಚಿಸುವ ಬದಲಾಗಿ ಇನ್ನಷ್ಟು ನಕಾರಾತ್ಮಕ ಶಕ್ತಿಯನ್ನು ಬೆಳೆಸುತ್ತಾ ಜನಸಾಮಾನ್ಯರ ಜೀವನ ಹಾಳು ಮಾಡಿದರೆ ಪ್ರಜೆಗಳಾದವರು ಸುಮ್ಮನಿರಲು ಸಾಧ್ಯವೆ? ಇದೊಂದು ಮಧ್ಯವರ್ತಿಗಳು ಮಾಡುತ್ತಿರುವ ಕುತಂತ್ರವೆ ಅಥವಾ ಜನಸಾಮಾನ್ಯರ ಸ್ವತಂತ್ರವೆ?
ನಮ್ಮಲ್ಲೇ ಇದ್ದ ಸ್ವತಂತ್ರ ಜ್ಞಾನ ಬಿಟ್ಟು ಮುಂದೆ ಬಂದ ಭಾರತ ಇಂದು ಪರತಂತ್ರದ ದವಡೆಗೆ ಸಿಲುಕಿ ಅತಂತ್ರಸ್ಥಿತಿಗೆ ತಲುಪಿದೆ. ಜ್ಞಾನ ಒಳಗಿದೆ.ವಿಜ್ಞಾನ ಹೊರಗಿದೆ.ಜೀವ ಒಳಗಿದೆ ಜೀವನ ಹೊರಗಿದೆ. ಆತ್ಮಜ್ಞಾನ ಒಳಗಿದೆ ವಿಜ್ಞಾನ ಹೊರಗಿದೆ.ಅನಾವಶ್ಯಕವಾದ ನಕಾರಾತ್ಮಕ ವಿಚಾರಗಳನ್ನು ತಲೆಗೆ ತುಂಬಿಕೊಂಡು ಮಕ್ಕಳು,ಮಹಿಳೆಯರೆನ್ನದೆ ಮನೆಯಲ್ಲಿ ಕಾಲಕಳೆಯುತ್ತಿರುವವರ ಸಂಖ್ಯೆ ಕೊರೊನ ದಿಂದ ಬೆಳೆಯುತ್ತಿದೆ.

ಆದರೆ ಕಷ್ಟಪಟ್ಟು ದುಡಿಯುತ್ತಿರುವ ಕೂಲಿ ಕಾರ್ಮಿಕರಿಗೆ ಸರಿಯಾದ ವೇತನ‌ ನೀಡದೆ ,ತಮ್ಮ ತಮ್ಮ ಮನರಂಜನೆಯಲ್ಲಿರುವವರ ಬೇಡಿಕೆಗಳು ತಕ್ಷಣ ಸರ್ಕಾರ ಈಡೇರಿಸುತ್ತದೆ ಎಂದರೆ ತಪ್ಪಿರುವುದು ಯಾರು? ತಪ್ಪಿಸುತ್ತಿರುವವರು ಯಾರು? ಜೀವ ಶಾಶ್ವತವಲ್ಲ. ಸಮಯ ನಿಲ್ಲೋದಿಲ್ಲ. ಆಯಸ್ಸು ಹೆಚ್ಚೋದಿಲ್ಲ. ಆತ್ಮರಕ್ಷಣೆಗಾಗಿ ಮಾನವ ಸತ್ಯವನ್ನರಿತರೆ ಜೀವನ ಸಾರ್ಥಕ.

ಸ್ವಾತಂತ್ರ್ಯ ಹೋರಾಟದಲ್ಲಿ ದೇಶವನ್ನು ಬ್ರಿಟಿಷ್ ರಿಂದ ಬಿಡಿಸಿಕೊಳ್ಳಲು ಭಾರತೀಯರು ಜೀವಭಯಬಿಟ್ಟು ಅಸಹಕಾರ ಚಳುವಳಿ ನಡೆಸಿದ್ದರು. ಇಂದು ಅದೇ ದೊಡ್ಡಸ್ಥಿಕೆ ನಮ್ಮಲ್ಲೇ ಇದ್ದು ಜನಸಾಮಾನ್ಯರ ಜೀವನದಲ್ಲಿ ಆಟವಾಡುತ್ತಾ ,ದೇಶದಲ್ಲಿ ಹೋರಾಟ,ಮುಷ್ಕರ ಹೊಡೆದಾಟ, ಬಿಡಿದಾಟದ ರಾಜಕೀಯದ‌ ಹಿಂದೆ ನಿಂತು ದೇಶದೊಳಗೆ ವಿದೇಶಿಗಳನ್ನು ಕರೆದು ಕೂರಿಸಿ ಭೂಮಿ ಕೊಟ್ಟು ಸನ್ಮಾನ ಮಾಡುತ್ತಿದೆ.

ಪ್ರಜೆಗಳ ಸಾಲ ಮುಗಿಲುಮುಟ್ಟಿ ತೀರಿಸಲಾಗದೆ ಆರೋಗ್ಯ ಹಾಳಾಗಿರುವಾಗ ಕೆಲಸಗಾರರಿಗೆ ಸರಿಯಾದ ವೇತನ ನೀಡದೆ ಅಸಹಕಾರ ತೋರಿಸಿದರೆ,ಇದು ಬ್ರಿಟಿಷ್ ಕಾಲವೆ? ತಮ್ಮ ವೈಭವಯುತ ಜೀವನಕ್ಕೆ ತಡೆ ಆಗಿಲ್ಲ. ಸಾಮಾನ್ಯರ ಜೀವಕ್ಕೆ ತೊಂದರೆ ಇರೋವಾಗ ಈಗಿನ ಪರಿಸ್ಥಿತಿಗೆ ಏನು ಮಾಡಬೇಕೋ ಮಾಡಿದರೆ ಉತ್ತಮ.ಕೊಳೆತು ನಾರುತ್ತಿರುವ ಸಂಪತ್ತು ಒಂದೆಡೆ, ಸಂಸಾರ ಸಾಗಿಸಲಾಗದೆ ಕೊರಗುತ್ತಿರುವವರ ಆಪತ್ತಿಗೆ ಸಹಕಾರ ನೀಡದವರು ಮಾನವರೆ?ಇದರ ಮಧ್ಯೆ ತಮ್ಮ ಸ್ವಾರ್ಥ ಸುಖಕ್ಕಾಗಿ ಜನರನ್ನು ಬಳಸಿಕೊಳ್ಳುವ ಮಧ್ಯವರ್ತಿಗಳು ಬೇರೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!