ದಿನಕ್ಕೊಂದು ಸಾಮಾನ್ಯ ಜ್ಞಾನ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಪ್ರಯತ್ನ ನಮ್ಮದು ಫಲ ಭಗವಂತನದು. ಇದು ಸತ್ಯ.ನಮ್ಮ ಪ್ರಯತ್ನಕ್ಕೆ ತಕ್ಕಂತೆ ಫಲ ಕೊಡುವುದು ಭಗವಂತ ಭಗವಂತ ಇರೋದು ಎಲ್ಲಿ? ಎಲ್ಲೆಡೆಯೂ ಇರುವ ಈ ಶಕ್ತಿ ಕಣ್ಣಿಗೆ ಕಾಣೋದಿಲ್ಲ. ಕಣ್ಣಿಗೆ ಕಾಣೋದು ಹೆಚ್ಚು ದಿನ ಇರೋದಿಲ್ಲ. ಭೂಮಿ ಮೇಲಿರುವ ಮಾನವನಿಗೆ ಕಣ್ಣಿಗೆ ಕಾಣೋ ಶಕ್ತಿಯ ಹಿಂದೆ ನಡೆಯೋದು ಸುಲಭ.

ಹೀಗಾಗಿ ಅದರ ಹಿಂದೆ ನಡೆಯುತ್ತಾ ಕೊನೆಯಲ್ಲಿ ಅದು ಮರೆಯಾದಾಗಲೇ ತಿಳಿಯೋದು ಇದು ಶಾಶ್ವತವಲ್ಲ ಎಂದು.ಆದರೂ ಎಲ್ಲರೂ ಅದರ ಹಿಂದೆ ನಡೆಯುತ್ತಾರೆ. ಈ ಕಾರಣಕ್ಕಾಗಿಯೇ ಇಂದು ಮಾನವನಿಗೆ ಕಣ್ಣಿಗೆ ಕಾಣದ ವೈರಸ್ ಬಂದು ಸವಾಲು ಹಾಕಿರೋದು.

ಇಲ್ಲಿ ಕಣ್ಣಿಗೆ ಕಾಣದ ಜೀವ ಒಳಗಿದೆ ಹಾಗೆ ಕಣ್ಣಿಗೆ ಕಾಣದ ವೈರಸ್ ಹೊರಗಿದೆ. ಹೊರಗೆ ನಡೆದರೆ ಒಳಗಿನ ಜೀವಕ್ಕೆ ಅಪಾಯ. ಹಾಗಂತ ಒಳಗೇ ಕೂತರೆ ಜೀವನ ಕಷ್ಟ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಭಗವಂತನಿಗೆ ಶರಣಾಗುವುದರಿಂದ ಪರಿಹಾರ ಕಾಣಬಹುದಷ್ಟೆ.

- Advertisement -

ಇಲ್ಲಿ ಭಗವಂತ ಕಣ್ಣಿಗೆ ಕಾಣೋದಿಲ್ಲ. ಮಹಾಮಾರಿಯ ಉಗ್ರ
ರೂಪಕ್ಕೆ ಭಗವಂತನೂ ಸುಮ್ಮನಿರಬೇಕಾಗಿದೆ. ಭೂಮಿ ಮೇಲಿರುವ ಮನುಕುಲಕ್ಕೆ ಬೇಕಾದಂತೆ ನೀಡಿ ಎಲ್ಲಾ ಸ್ವಾತಂತ್ರ್ಯ ಕೊಟ್ಟು ನಡೆಸುತ್ತಿದ್ದ ಭಗವಂತನಿಗೇ ವಿರುದ್ದ ನಿಂತು ನಾನೇ ದೇವರು ಎನ್ನುವಂತೆ ಮಧ್ಯೆ ನಿಂತು ಸತ್ಯ,ಧರ್ಮ ತಡೆದು ಭೂಮಿಯನ್ನು ಆಳೋರಿಗೆ ಹಿಂದೆ ನಿಂತು ನೋಡುತ್ತಿದ್ದ ಶಕ್ತಿಯ ಪರಿಚಯವಿರಲಿಲ್ಲ.

ಈಗ ಭೂಮಿಯ ಒಂದು ಸಣ್ಣ ವೈರಸ್ ರೋಗದ ಮೂಲಕ ನಾನಾ ನೀನಾ ಎನ್ನುವ ಸವಾಲು ಹಾಕಿದರೂ ಕೆಲವರಿಗೆ ರಾಜಕೀಯ ಬಿಡೋ ಮನಸ್ಸಿಲ್ಲದೆ ಇನ್ನಷ್ಟು ಮುಂದೆ ನಡೆದು ವೈಜ್ಞಾನಿಕ ಸಂಶೋಧನೆಯಿಂದ ರೋಗ ತಡೆಯಲು ಪ್ರಯತ್ನ ನಡೆದಿದೆ. ಪ್ರಯತ್ನಕ್ಕೆ ಫಲ ಇದೆ ಆದರೆ, ಪ್ರಯತ್ನ ಸಾತ್ವಿಕ ರೂಪದಲ್ಲಿ ನಡೆಸಿದರೆ ಪ್ರಕೃತಿ ಶಾಂತವಾಗಬಹುದು.

ರಾಜಕೀಯವಾಗಿದ್ದರೆ ಮತ್ತೆ ಮರುಕಳಿಸುತ್ತದೆನ್ನುವುದು ಸತ್ಯ.
ಮಾನವನಿಂದ ಸಾಧ್ಯವಾಗದ್ದು ಇಲ್ಲಿ ಯಾವುದೂ ಇಲ್ಲ. ಇದರಲ್ಲಿ ಮಹಾತ್ಮರುಗಳ ಪ್ರಯತ್ನದಿಂದ ಭೂಮಿಯಲ್ಲಿ ಧರ್ಮ ಉಳಿದರೆ, ಪಾಪಿಷ್ಟರಿಂದ‌ ನಡೆಸೋ ಪ್ರಯತ್ನದಿಂದ ಭೂಮಿಯಲ್ಲಿ ಅಧರ್ಮವೇ ಹೆಚ್ಚಾಗುತ್ತದೆ. ಪಾಪ ಪುಣ್ಯಗಳ ನಡುವೆ ಜೀವನ ನಡೆಸೋ ಮಾನವರಿಗೆ ಸತ್ಯಜ್ಞಾನದ ಅಗತ್ಯವಿದೆ.ಮಿಥ್ಯ ಜ್ಞಾನದ ಬದಲಾವಣೆಗಳಿಂದ ಯಾವುದೂ ಶಾಶ್ವತವಲ್ಲ. ಶಾಶ್ವತವಾದದ್ದು ಕಾಣೋದಿಲ್ಲ.

ದೇಹ ಶಾಶ್ವತವಲ್ಲ, ಜೀವ ಶಾಶ್ವತವಲ್ಲ,ಆತ್ಮ ಶಾಶ್ವತ. ಹಾಗೆಯೇ ಭೂಮಿ, ದೇಶ,ಧರ್ಮ,ಸಂಸ್ಕೃತಿ, ಭಾಷೆ ನಮ್ಮ ಜನ್ಮದ ಆಧಾರದ ಮೇಲಿದೆ. ಮೂಲವನ್ನು ಬಿಟ್ಟು ಹೊರ ನಡೆದವರಿಗೆ ಹೊರಗಿನ ರಾಜಕೀಯ ಆಳುತ್ತದೆ.

ಒಳಗಿನ ರಾಜಯೋಗ ಸಿಗದೆ ಜೀವ ಅತಂತ್ರಸ್ಥಿತಿಗೆ ತಲುಪಿದಾಗ ಏನೇ ಪ್ರಯತ್ನಪಟ್ಟರೂ ಕಷ್ಟ ನಷ್ಟಗಳೇ ಹೆಚ್ಚಾಗುತ್ತದೆ. ಆಗೋದನ್ನು ತಪ್ಪಿಸಲಾಗದು. ಆಗೋದೆಲ್ಲಾ ಒಳ್ಳೆಯದಕ್ಕೆ, ಯಾಕೆ ಆಗಿದೆ,ಆಗುತ್ತಿದೆ‌ ಎನ್ನುವ ಸತ್ಯ ತಿಳಿಯೋ ಪ್ರಯತ್ನಪಟ್ಟರೆ ಭಗವಂತನ ಸಹಕಾರವಿರುತ್ತದೆ. ಪ್ರಯತ್ನಪಡದೆ ಸುಮ್ಮನಿದ್ದರೆ ಸತ್ಯ ತಿಳಿಯದೆ ಮತ್ತೆ ಮತ್ತೆ ಮಾಡಿದ ತಪ್ಪು ಪುನರಾವರ್ತನೆ ಆಗುತ್ತದೆ.

ಇಲ್ಲಿ ತಪ್ಪು ನಡೆದಿರೋದು ಮೂಲವನ್ನು ಅರ್ಥ ಮಾಡಿಕೊಳ್ಳದೆ ಪರರನ್ನು ಆಶ್ರಯಿಸಿ ರಾಜಕೀಯ ನಡೆಸಿರೋದಷ್ಟೆ. ಇದಕ್ಕೆ ಕಾರಣವೆ ಮೂಲ ಶಿಕ್ಷಣದಲ್ಲಿ ಸತ್ವವಿಲ್ಲದಿರೋದು. ಸತ್ವಹೀನ ಶಿಕ್ಷಣದಿಂದ ಸತ್ಯಜ್ಞಾನ ಹೇಗಿರುತ್ತದೆ? ಎಲ್ಲಾ ಕಾಲಪ್ರಭಾವ.

ನಾವು ಕಾರಣಮಾತ್ರರಾದರೂ ನಮಗೂ ಸ್ವಾತಂತ್ರ್ಯ ನೀಡಿ, ಚಿಂತನೆ ನಡೆಸೋ ಜ್ಞಾನವಿರೋವಾಗ ಪ್ರಯತ್ನಪಡದೆ ಯಾರೋ ಹೇಳಿದ್ದಾರೆ ಎಂದು ಪರರ ಹಿಂದೆ ನಡೆದರೆ ಪರಾವಲಂಬನೆ ಹೆಚ್ಚಾಗುತ್ತದೆ. ಆತ್ಮನಿರ್ಭರ ಭಾರತಕ್ಕೆ ಬೇಕಿದೆ ಸ್ವಾವಲಂಬನೆ ,ಸ್ವಾತಂತ್ರ್ಯ, ಸ್ವಾಭಿಮಾನ, ಸತ್ಯ ಧರ್ಮದ ಕಡೆಗೆ ನಡೆಯೋ ಪ್ರಯತ್ನ.

ಈಗಿದು ವಿದೇಶಿ ರೋಗದೆಡೆಗೆ ಸಾಗಿ ಅವರ ವ್ಯವಹಾರಕ್ಕೆ ಜೋತುಬಿದ್ದು
ಅವರ ಶಿಕ್ಷಣವನ್ನು ಒಳಗೆ ಹಾಕಿಕೊಂಡು ಜನರನ್ನು ರಾಜಕೀಯದಿಂದ ಆಳಲು ಹೊರಟಿರುವುದು ನಮ್ಮ ಸಹಕಾರದ ಫಲ.

ನಮ್ಮ ಪ್ರಯತ್ನಗಳು ವಿಜ್ಞಾನದ ಕಡೆ ಹೆಚ್ಚಾದ ಕಾರಣ ಭಗವಂತ ಅದಕ್ಕೆ ತಕ್ಕಂತೆ ಫಲ ನೀಡಿದ್ದಾನೆ. ಆದರೆ ಭೂಮಿ ಶಕ್ತಿಗಾದ ಅನ್ಯಾಯಕ್ಕೆ,ಅಧರ್ಮಕ್ಕೆ ಭೂಮಿ ಸುಮ್ಮನಿರುವಳೆ? ಜೀವ ಇರೋದುಭೂಮಿಮೇಲೆ ಎನ್ನುವ ಸತ್ಯ ತಿಳಿದು ಜೀವವನ್ನು ಸತ್ಕರ್ಮದಿಂದ ನಡೆಸೋದಕ್ಕೆ ಪ್ರಯತ್ನ ಪಟ್ಟರೆ ಆರೋಗ್ಯ.

ಮನೆಯಲ್ಲಿದ್ದರೆ ಸಾಲದು.ಆತ್ಮಾವಲೋಕನ ಮಾಡಿಕೊಂಡು ಮುಂದಿನ‌ಜೀವನವನ್ನು ಸ್ವಚ್ಚವಾಗಿ ನಡೆಸಲು ತಯಾರಿ ಮನೆಯೊಳಗೆ ಮಕ್ಕಳು ಮಹಿಳೆಯರು ಪ್ರಯತ್ನಪಟ್ಟರೆ ಆತ್ಮನಿರ್ಭರ ಭಾರತಕ್ಕೆ
ಜಯ.ವಿಜ್ಞಾನಿಗಳ ಪ್ರಯತ್ನ ದ ಜೊತೆಗೆ ಆತ್ಮಜ್ಞಾನಿಗಳ ಪ್ರಯತ್ನ ಇದ್ದರೆ ಪೂರ್ಣ ಫಲ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!