ಧಾರ್ಮಿಕ ಸಂಬಂಧ ರಾಜಕೀಯಕ್ಕಿಳಿದು, ಸ್ವಾರ್ಥದ ವ್ಯವಹಾರಕ್ಕೆ ಬಳಸಿಕೊಂಡರೆ ಸಮಾಜ ಸುಧಾರಣೆ ಆಗೋದಿಲ್ಲ. ಸ್ತ್ರೀ ಪುರುಷ ಸಂಬಂಧ ಎಷ್ಟು ಪವಿತ್ರವಾಗಿರಬೇಕೆಂದರೆ ಅಲ್ಲಿ ಕೇವಲ ಧರ್ಮ ರಕ್ಷಣೆಗೆ ಮಾತ್ರ ಅವಕಾಶಕೊಡುವ ಕಾಲವಿತ್ತು.ಇದನ್ನು ದೇವತೆಗಳ ಕಾಲವೆಂದರು.
ಸೃಷ್ಟಿ ಗೆ ತಕ್ಕಂತೆ ಜ್ಞಾನ ನೀಡುವ ಕೆಲಸ , ಜ್ಞಾನಕ್ಕೆ ತಕ್ಕಂತೆ ಶಿಕ್ಷಣ, ಶಿಕ್ಷಣದಿಂದ ಧರ್ಮ ಕರ್ಮ, ಕರ್ಮಕ್ಕೆ ತಕ್ಕಂತೆ ಮುಕ್ತಿ ಮೋಕ್ಷ. ಕಾಲ ಕಳೆದಂತೆಲ್ಲಾ ಇದರಲ್ಲಿ ರಾಜಕೀಯ ಹೆಚ್ಚುತ್ತಾ ಭೂಮಿಯಲ್ಲಿ ವ್ಯವಹಾರ ಹೆಚ್ಚಾಯಿತು.
ಸ್ತ್ರೀ ಶಕ್ತಿಯ ಜ್ಞಾನ ಮರೆತು ರಾಜಕೀಯಕ್ಕೆ ಬಳಸಿ ವ್ಯವಹಾರದಿಂದ ಹಣ,ಅಧಿಕಾರ ಪಡೆಯುತ್ತಾ ಮುಂದೆ ನಡೆದ ಮನುಕುಲಕ್ಕೆ ತನ್ನ ಭೂಮಿಯ ಮೇಲೆ ಬೆಳೆಯುತ್ತಿರುವ ಸಾಲದ ಪರಿವಿಲ್ಲದೆ ಇನ್ನಷ್ಟು ಮತ್ತಷ್ಟು ಭೂಮಿಯನ್ನೇ ಆಳೋದಕ್ಕೆ ಅಧರ್ಮ, ಅನ್ಯಾಯ, ಅಸತ್ಯವನ್ನು ಬೆಳೆಸಿಕೊಂಡು ಕಲಿಗಾಲದವರೆಗೆ ಜೀವ ಬಂದಿದೆ.
ಇಲ್ಲಿ ಅಧರ್ಮಕ್ಕೆ ಹೆಚ್ಚು ಸಹಕರಿಸುವ ಸ್ತ್ರೀ ಯರಿಗೆ ಹಣ, ಹೆಸರು, ಅಧಿಕಾರವೇ ಮುಖ್ಯವಾದರೆ ಪುರುಷರನ್ನು ತಡೆಯುವವರು ಇರೋದಿಲ್ಲ. ಎಲ್ಲದ್ದಕ್ಕೂ ಸ್ತ್ರೀ ಕಾರಣ ಎನ್ನುವುದಕ್ಕೆ ಕಾರಣವಿದೆ.
ಸ್ತ್ರೀ ಶಕ್ತಿ ಪುರುಷ ಶಕ್ತಿ ಒಂದಾದರೆ ಮಾತ್ರ ಭೂಮಿ ನಡೆಯೋದು. ಇದು ಧರ್ಮದ ಕಡೆ ಇರದೆ ಅಧರ್ಮದ ಕಡೆ ನಡೆದರೆ ಅದಕ್ಕೆ ತಕ್ಕಂತೆ ಅನುಭವಿಸೋದು ಸ್ತ್ರೀ ಯೆ. ಸ್ತ್ರೀ ಯರಲ್ಲಿ ಸತ್ಯ ನಿಲ್ಲೋದಿಲ್ಲವೆನ್ನುವ ಕಾರಣಕ್ಕಾಗಿಯೇ ಹಿಂದಿನ ಎಷ್ಟೋ ಸತ್ಯ ತಿಳಿಸದೆ ಅಧರ್ಮ ಬೆಳೆಯಿತು.
ಈಗಿದು ಮನೆಮನೆಯ ಕಥೆಯಾಗಿ ಭೌತಿಕ ಸತ್ಯವನ್ನಷ್ಟೇ ಎತ್ತಿ ಹಿಡಿದು ಧಾರ್ಮಿಕ ಸತ್ಯವನ್ನು ಪ್ರಚಾರಕ್ಕಾಗಿ ಬಳಸಿಕೊಂಡು ಹಣ, ಅಧಿಕಾರವಿದ್ದವರ ಅಸತ್ಯವೂ ಸತ್ಯವೆನ್ನುವ ಮಟ್ಟಿಗೆ ಬೆಳೆದು ನಿಂತಿದೆ.
ಆದರೆ ಹಣದಿಂದ ಸಂಬಂಧ ಗಟ್ಟಿಯಾಗದೆ ಜ್ಞಾನದಿಂದ ಸಂಬಂಧ ಗಟ್ಟಿಮಾಡಿಕೊಳ್ಳಲು ಜ್ಞಾನದ ಶಿಕ್ಷಣ ಇಬ್ಬರಿಗೂ ನೀಡದೆ ರಾಜಕೀಯ ನಡೆಸಿದರೆ ಸಂಸಾರದಲ್ಲಿ ನೆಮ್ಮದಿ, ಶಾಂತಿ, ತೃಪ್ತಿ, ಮುಕ್ತಿ ಎಲ್ಲಿರಬೇಕು? ಇದನ್ನು ಧಾರ್ಮಿಕ ಕ್ಷೇತ್ರದವರು ತಿಳಿಯಬೇಕಿದೆ.
ಜ್ಞಾನವುಳ್ಳ ಹೆಣ್ಣನ್ನು ಮನೆಗೆ ತರಬೇಕೆಂಬುದರ ಹಿಂದಿನ ಉದ್ದೇಶ ಪವಿತ್ರವಾಗಿತ್ತು. ಅವಳನ್ನು ಹಣದಿಂದ ಆಳಬಹುದೆಂದು ಅಜ್ಞಾನಿಗಳು ಅರ್ಥ ಮಾಡಿಕೊಂಡು ಸ್ತ್ರೀ ಶೋಷಣೆ ನಡೆಸಿ ಭೂಮಿಯನ್ನೇ ಆಳಲು ಹೊರಟ ಪರಿಣಾಮ ಇಂದಿಗೂ ಸ್ತ್ರೀ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂದು ಹೊರಗೆ ಹೋರಾಟ ನಡೆಸುವಂತಾಗಿದೆ.
ಆದರೆ, ಹೋರಾಟದಲ್ಲಿ ಧರ್ಮವಿದ್ದರೂ ಸತ್ಯಜ್ಞಾನ ಇಲ್ಲದ ಕಾರಣ ಯಶಸ್ಸು ಸಿಗುವುದು ಕಷ್ಟವಾಗಿದೆ. ಭೂಮಿಯ ಸತ್ಯ ಸತ್ವ ಉಳಿಸೋ ಶಕ್ತಿ ಸ್ತ್ರೀ ಜ್ಞಾನದಲ್ಲಿದೆ. ವಿಜ್ಞಾನ ಜಗತ್ತಿನಲ್ಲಿ ಸ್ತ್ರೀ ಗೆ ಭೌತಿಕ ಸ್ವಾತಂತ್ರ್ಯ ವಿದ್ದರೂ ಅಧ್ಯಾತ್ಮ ಸತ್ಯ ತಿಳಿಯದೆ ಮನೆಯಿಂದ ಹೊರಗೆ ನಡೆಯುತ್ತಾ ಭೂಮಿಯನ್ನೇ ದುರ್ಬಳಕೆ ಮಾಡಿಕೊಳ್ಳುವ ವ್ಯವಹಾರಕ್ಕೆ ಕೈ ಜೋಡಿಸಿದರೆ ಭ್ರಷ್ಟಾಚಾರ ವಾಗುತ್ತದೆ.
ಇದರಿಂದಾಗಿ ಹಣ,ಹೆಸರು,ಆಸ್ತಿ ಅಂತಸ್ತು ಎಲ್ಲಾ ಸಿಗಬಹುದು.ಆದರೆ ಇದರಿಂದಾಗಿ ಜೀವಕ್ಕೆ ಮುಕ್ತಿ ಸಿಗದೆ ಸಾಲವಾಗಿರುವ ಇದನ್ನು ತಿರುಗಿ ಕೊಡುವವರೆಗೆ ಜನ್ಮ ಜನ್ಮದ ಋಣ ತೀರಿಸಲು ಭೂಮಿಯಲ್ಲಿ ಕಷ್ಟಪಟ್ಟು ದುಡಿಯಲೇಬೇಕೆನ್ನುವುದೇ ಕರ್ಮ ಸಿದ್ದಾಂತ.
ಹೀಗಾಗಿ ಕಣ್ಣಿಗೆ ಕಾಣೋ ಸಂಬಂಧಗಳಲ್ಲಿ ಸಮಾನತೆ ಮೂಡದೆ ನಿರಂತರ ಹೋರಾಟ,ಹಾರಾಟ, ಮಾರಾಟದೊಳಗೆ ಮುಳುಗಿ ಹೋಗಿದೆ. ಕೆಲವು ಸಂಬಂಧ ಗಟ್ಟಿಯಾಗಿದ್ದರೂ ಸಮಾಜದ ಮಧ್ಯೆ ಬಂದು ಹಾಳಾಗುತ್ತಿದೆ.
ಒಟ್ಟಿನಲ್ಲಿ ಮನುಕುಲಕ್ಕೆ ಸ್ತ್ರೀ ಶಕ್ತಿಯ ಜ್ಞಾನ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಹೆತ್ತವರಲ್ಲಿಯೆ ಆಸ್ತಿ ಹೆಚ್ಚಾಗಿದ್ದು ಪುರುಷರನ್ನು ಆಳೋವಷ್ಟು ಶಕ್ತಿಯಿರೋವಾಗ ಭೂಮಿಯನ್ನು ಆಳೋದರಲ್ಲಿ ಅರ್ಥವಿಲ್ಲ.
ಹಾಗೆಯೇ ಸ್ತ್ರೀ ಪುರುಷನನ್ನು ಅಧರ್ಮದಿಂದ ಆಳೋದರಿಂದ ಅನರ್ಥಕ್ಕೆ ದಾರಿಯಾಗುತ್ತದೆ. ಭೂಮಿಯಲ್ಲಿ ಧರ್ಮ ಹಾಗು ಸತ್ಯದಿಂದ ನಡೆಯುವುದಷ್ಟೆ ಜನ್ಮಕ್ಕೆ ಕಾರಣ. ಇದಕ್ಕೆ ವಿರುದ್ದ ನಡೆದರೆ ಭೂಮಿ ನರಕವಾಗುತ್ತದೆನ್ನುತ್ತಾರೆ ಮಹಾತ್ಮರುಗಳು. ಯಾರೋ ಕೆಲವರು ತಮ್ಮ ದೈಹಿಕ ಸ್ವಾರ್ಥ ಸುಖಕ್ಕಾಗಿ ಮಾಡಿಕೊಂಡ ಆಚರಣೆಗಳಲ್ಲಿ ಅಡಗಿದ್ದ ಅಸತ್ಯ ಅಧರ್ಮವನ್ನು ಹಲವರು ಬೆಳೆಸಿದರು.
ಇದೀಗ ಎಲ್ಲರಿಗೂ ಸಮಸ್ಯೆ,ದು:ಖ,ಸಂಕಟ, ಆತ್ಮಹತ್ಯೆಯ ಕಡೆಗೆ ನಡೆಸಿರುವಾಗ ಆತ್ಮಾವಲೋಕನ ಮಾಡಿಕೊಳ್ಳಲೂ ಆತ್ಮಜ್ಞಾನವಿರಬೇಕು. ವಿಜ್ಞಾನ ಜಗತ್ತು ಮನಸ್ಸನ್ನು ಹೊರಗೆ ಹರಿಬಿಟ್ಟು ಸ್ವಾತಂತ್ರ್ಯ ವನ್ನು ದುರ್ಭಳಕೆ ಮಾಡಿಕೊಂಡರೆ ಒಳಗಿನ ಮಹಾಶಕ್ತಿಗಾದ ಅನ್ಯಾಯಕ್ಕೆ ಜೀವವೆ ಹೋಗುತ್ತದೆ.
ಜೀವ ಹೋದ ಮೇಲೆ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯವೆ? ಅವರು ಬಿಟ್ಟು ಹೋದ ಭೌತಿಕ ಆಸ್ತಿಯನ್ನು ಹಂಚಿಕೊಳ್ಳಲು ಎಲ್ಲಾ ಮುಂದೆ ಬರುತ್ತಾರೆ. ಆದರೆ ಆಸ್ತಿ ಯಾವ ಮಾರ್ಗದಲ್ಲಿ ಸಂಪಾಧಿಸಲಾಗಿದೆ ಎನ್ನುವ ಜ್ಞಾನವಿಲ್ಲದೆ ಬಳಸಿದರೆ ರೋಗ ಕಟ್ಟಿಟ್ಟ ಬುತ್ತಿ.
ಗುರುಹಿರಿಯರ ಸ್ತ್ರೀ ಯರ ಆಸ್ತಿ ಬೇಕು. ಅವರ ಜ್ಞಾನಶಕ್ತಿ ಧರ್ಮ ಕರ್ಮ ಬೇಡವೆಂದರೆ ಬಿಡುವುದೆ? ಅಗೋಚರ ಶಕ್ತಿ ತಿಳಿಯಲು ಆಧ್ಯಾತ್ಮ ದಿಂದ ಮಾತ್ರ ಸಾಧ್ಯ. ಆಧ್ಯಾತ್ಮದಲ್ಲಿ ಆತ್ಮ ಶಾಶ್ವತ,ಸತ್ಯ ಶಾಶ್ವತ. ಹೀಗಿರುವಾಗ ನಮ್ಮೊಳಗೇ ಇರುವ ಈ ಶಕ್ತಿ ಬೆಳೆಸಿಕೊಂಡು ಜೀವನ ನಡೆಸಿದರೆ ಸ್ತ್ರೀ ಪುರುಷ ಸಂಬಂಧ ಉತ್ತಮವಾಗಿರುತ್ತದೆ.
ಎಷ್ಟೋ ಜನ್ಮದ ಋಣಸಂದಾಯ ಮಾಡೋದಕ್ಕೆ ಕೂಡಿಬರುವ ಸಂಬಂಧ ಗಳನ್ನು ಹಣದಿಂದ ಆಳೋದಕ್ಕೆ ಬದಲಾಗಿ ಜ್ಞಾನದಿಂದ ಬಾಳಿದರೆ ಸಂಸಾರದ ಸಮಸ್ಯೆಗಳಿಗೆ ಕಾರಣ ತಿಳಿದು ಪರಿಹಾರವೂ ಒಳಗೇ ಕಾಣಬಹುದು.ಇದಕ್ಕೆ ಮಧ್ಯವರ್ತಿಗಳು, ಮಾಧ್ಯಮಗಳು, ರಾಜಕೀಯ, ಸರ್ಕಾರದ ಸಹಕಾರ, ಸಾಲದ ಅಗತ್ಯವಿರೋದಿಲ್ಲ.
ಋಣ ಹಾಗು ಕರ್ಮವೇ ಮಾನವನ ಸಮಸ್ಯೆಗೆ ಕಾರಣ.ಇದು ಋಷಿಋಣ,ಪಿತೃಋಣ, ದೈವ ಋಣ ದ ಜೊತೆಗೆ ಭೂಮಿ ಋಣ ತೀರಿಸಲು ಸ್ತ್ರೀ ಶಕ್ತಿಗೆ ಜ್ಞಾನದ ಶಿಕ್ಷಣ ಅಗತ್ಯವಿತ್ತು. ಅದರಿಂದ ದೂರವಿಟ್ಟು ಸಂಸಾರ ನಡೆಸಿದರೆ ಮತ್ತಷ್ಟು ಅಜ್ಞಾನ ಬೆಳೆದು ಸಾಲ ಹೆಚ್ಚುವುದು. ಅತಿಆಸೆ ಆಕಾಂಕ್ಷೆಗಳನ್ನು ಬೌತಿಕ ವಿಜ್ಞಾನ ಬೆಳೆಸುತ್ತದೆ.
ಅದನ್ನು ತೀರಿಸಲು ಹಣಸಂಪಾದನೆಯಲ್ಲಿ ಅಧರ್ಮ,ಅನ್ಯಾಯ, ಅಸತ್ಯ, ಭ್ರಷ್ಟಾಚಾರದ ರಾಜಕೀಯ ಪ್ರೋತ್ಸಾಹ ನೀಡುತ್ತದೆ. ಇದರಿಂದಾಗಿ ಆತ್ಮಪರಮಾತ್ಮನಿಂದ ದೂರವಾಗಿ ತಿರುಗಿ ಬರೋದಕ್ಕೆ ಕಷ್ಟವಾದಾಗ ಹೋರಾಟ ನಡೆಸೋದಾಗತ್ತೆ.
ಎಷ್ಟೇ ಹೋರಾಟ ನಡೆಸಿದರೂ ಧರ್ಮವೆ ಇಲ್ಲವಾದರೆ ವ್ಯರ್ಥ ಪ್ರಯತ್ನ. ಹಿಂದಿನಿಂದಲೂ ಸಮಾಜ ಸುಧಾರಣೆಗಾಗಿ ಮಹಾತ್ಮರುಗಳು ಮಾಡಿದ ಪ್ರಯತ್ನಗಳು ಇಂದಿಗೂ ಪ್ರಶ್ನಾರ್ಹವಾಗಿದೆ. ಕೊರೊನ ಮಹಾಮಾರಿಗೆ ಬಲಿ ಆಗಿದ್ದಕ್ಕೆ ಸರ್ಕಾರ ಕಾರಣವೆನ್ನುವ.
ಹಾಗೆಯೇ ನಮ್ಮ ತಪ್ಪಿಗೆ ನಮ್ಮ ಅಧರ್ಮದ ಜೀವನವೆ ಕಾರಣವೆನ್ನುವವರು ಇದ್ದಾರೆಯೆ? ಸಂಬಂಧ ಗಳು ಮುರಿಯಲು ನಮ್ಮ ವ್ಯವಹಾರಜ್ಞಾನವೇ ಕಾರಣ. ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆದರೆ ಹಣ. ನಷ್ಟವಾದರೆ ಜ್ಞಾನ. ಇದು ಧರ್ಮದ ಪರ ಇದ್ದರೆ ಮಾತ್ರ ಮೊದಲು ಕಷ್ಟ ನಂತರ ಸುಖ. ಅಧರ್ಮದ ಪರವಿದ್ದರೆ ಮೊದಲು ಸುಖ ನಂತರ ದು:ಖ.
ಈ ಕಾರಣಕ್ಕಾಗಿಯೇ ಸಂಸಾರದಿಂದ ದೂರವಿದ್ದು ಆಧ್ಯಾತ್ಮ ಸಾಧನೆ ಒಂಟಿಯಾಗಿ ಮಾಡುತ್ತಿದ್ದರು.ಈಗ ಸಂನ್ಯಾಸಿಗಳಿಗೂ ಇದು ಸಾಧ್ಯವಾಗದ ಧರ್ಮ ಸಂಕಟವಿದೆ. ಪ್ರಜಾಪ್ರಭುತ್ವದಲ್ಲಿ ಜನಬಲ, ಹಣಬಲವಿಲ್ಲದೆ ಸಾಧನೆಯಿಲ್ಲ ಅಧಿಕಾರ, ಹಣವಿಲ್ಲದೆ ಜೀವನವಿಲ್ಲ.
ಹೀಗಿರುವಾಗ ಜನರ ಋಣ ತೀರಿಸದೆ ವಿಧಿಯಿಲ್ಲ.ಸಂಸಾರದ ಋಣ ತೀರಿಸಲು ಸುಲಭ. ಸಮಾಜದ ಋಣ ತೀರಿಸುವುದು ಕಷ್ಟ. ಹೀಗಾಗಿ ಕೊರೊನ ಮಧ್ಯೆ ಪ್ರವೇಶ ಮಾಡಿ ಜ್ಞಾನದ ಕಡೆಗೆ ನಡೆಯಲು ಅವಕಾಶ ನೀಡಿದ್ದರೂ ಅಜ್ಞಾನದ ರಾಜಕೀಯಕ್ಕೆ ಸಹಕಾರ ನೀಡಿದರೆ ಅಜ್ಞಾನಕ್ಕೆ ಮದ್ದಿಲ್ಲ. ರೋಗವನ್ನು ತಡೆಯಲಾಗದು. ಇದಕ್ಕೆ ಮದ್ದು ಜ್ಞಾನದ ಶಿಕ್ಷಣದಲ್ಲಿದೆ. ಇದು ವ್ಯವಹಾರವಾಗದೆ ಧರ್ಮವಾಗಬೇಕಿದೆ. ಸಾಧ್ಯವೆ?
ಗುರುಗಳು,ಶಿಕ್ಷಕರಾದವರೆ ವ್ಯವಹಾರಕ್ಕೆ ಧರ್ಮಬಿಟ್ಟು ನಡೆದರೆ ಉತ್ತಮ ಶಿಷ್ಯರು ವಿದ್ಯಾರ್ಥಿಗಳು ಹುಟ್ಟುವರೆ? ಧರ್ಮಶಿಕ್ಷಣ ನೀಡಿ, ದೇಶದ ಧರ್ಮ ಉಳಿಸಲು ಕರ್ಮ ಅಥವಾ ಕೆಲಸ ಮಾಡಿ ಹಣಗಳಿಸಿ ಸಮಾಜದ ಋಣ ತೀರಿಸಲು ಬೇಕಾದ ಸೇವಾಕಾರ್ಯವನ್ನು ಕಲಿಸಿ ಬೆಳೆಸುವುದೆ ನಿಜವಾದ ಶಿಕ್ಷಣ. “ಕೆರೆಯನೀರನು ಕೆರೆಗೆ ಚೆಲ್ಲಿ” ಇದಕ್ಕೆ ಬದಲಾಗಿ ಕೆರೆಯ ನೀರನು ಕೊಳಚೆಗೆ ಬಿಟ್ಟರೆ ಅಧರ್ಮ.
- ಪ್ರಕೃತಿ ಕೂಡ ಎಂಥ ವಿಚಿತ್ರ ಸನ್ನಿವೇಶ ಸೃಷ್ಟಿಸಿದೆ ಎಂದರೆ ರೋಗ ಬಂದಿರೋನು ಒಂಟಿಯಾಗಿರಬೇಕು ಒಬ್ಬಂಟಿಯಾಗಿರೋನಿಗೆ ರೋಗ ಬರಲ್ಲ.
- ಒಬ್ಬ ವ್ಯಕ್ತಿಯನ್ನು ನೋಡಿದಾಗ ಇರುವ ಸ್ಥಿತಿಯೇ ಅವನ ಖಾಯಂ ಆಗಿರುವ ಸ್ಥಿತಿಯಾಗಿರಲಿಕ್ಕಿಲ್ಲ ಯೋಚಿಸಿ ತೀರ್ಮಾನಿಸಬೇಕು.
- ಸ್ನೇಹಿತರೆ ಒಬ್ಬರನ್ನೊಬ್ಬರು ಹೊಡೆಯುವುದರಿಂದ ಯಾರು ದೊಡ್ದವರಾಗುವುದಿಲ್ಲ, ಸ್ನೇಹ, ಪ್ರೀತಿ, ವಿಶ್ವಾಸದಿಂದ ಸಂಪಾದಿಸಬೇಕು ನಿಜವಾಗಿ ಅವರೇ ದೊಡ್ಡವರು.
- ಮನುಷ್ಯ ಎಷ್ಟೇ ಕೆಂಪಾಗಿದ್ದರು ಅವನ ನೆರಳು ಕಪ್ಪು. ನಾನು ಶ್ರೇಷ್ಠ ಅನ್ನುವುದು ಆತ್ಮವಿಶ್ವಾಸ. ನಾನೇ ಶ್ರೇಷ್ಠ ಅನ್ನುವುದು ಅಹಂಕಾರ.
- ಹೃದಯ ಹತ್ತಿರವಿದ್ದಾಗ ಜೋಪಾನ ಮಾಡಿಕೊಳ್ಳಿ. ಮನಸ್ಸು ಹತ್ತಿರವಿದ್ದಾಗ ಅರ್ಥ ಮಾಡಿಕೊಳ್ಳಿ. ಏಕೆಂದರೆ ಬಿಟ್ಟು ಹೋದ ಹೃದಯ, ದೂರವಾದ ಮನಸ್ಸು ಬೇಕು ಎಂದಾಗ ಮತ್ತೆ ಸಿಗುವುದು ತುಂಬಾ ಕಷ್ಟ.
- ಜ್ಞಾನದ,ವಿದ್ಯೆಯ,ಕಲಿಕೆಯ,ಹಾಗೂ ಹೊಟ್ಟೆಯ,ಹಸಿವಿದ್ದವನು ಮಾತ್ರ ಜಯವನ್ನು, ಹಾಗೂ ಗುರಿಯನ್ನು ಮುಟ್ಟುತ್ತಾನೆ.
- ಹಿಂದಿನ ಗುರು ಶಿಷ್ಯ ಸಂಬಂಧ ದಲ್ಲಿ ವ್ಯವಹಾರ ಜ್ಞಾನಕ್ಕೆ ಬೆಲೆಯಿರದೆ ಧಾರ್ಮಿಕ ಶಕ್ತಿ ಇತ್ತು.ಹೀಗಾಗಿ ಸಂಸಾರ ಹಾಗು ಸಮಾಜದಲ್ಲಿ ಶಾಂತಿಯಿತ್ತು
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು