ಮೂಡಲಗಿ – ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು ಅಗತ್ಯ ಇ ಆಸ್ತಿ ದಾಖಲೆಗಳನ್ನು ನೀಡಿ ತಮ್ಮ ಸ್ವತ್ತನ್ನು ದಾಖಲಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಹೇಳಿದರು.
ಅವರು ಪಟ್ಟಣದ ಲಕ್ಷ್ಮಿ ನಗರದ ಬಡಾವಣೆಯಲ್ಲಿ ಮನೆಮನೆಗೆ ತೆರಳಿ ಇ ಆಸ್ತಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಎಚ್.ಬಿ. ಚಿಕೂನ, ಸಿ.ಬಿ.ಪಾಟೀಲ, ಎಸ್.ಎಚ್. ಬೆಳ್ಳಿಕಟ್ಟಿ, ಸುಭಾಸ ಸಾಯನ್ನವರ, ಪ್ರೀತಮ ಬೋವಿ, ಗಿರೀಶ ನಾಯ್ಕ, ಎನ್.ಪಿ.ಬುರುಡ, ರೇಶ್ಮಾ ಪೂಜೇರಿ, ಸಾಗರ ಇತಾಪಿ, ಸುನೀಲ ಹಂಜಿ, ಮಲ್ಲಿಕರ್ಜುನ ಯರನಾಳ, ಸಂಜಯ ಕಲಬಾಂವಿ, ಶಿವಾನಂದ ಪೂಜೇರಿ, ಶಿವಪ್ಪ ಢವಳೇಶ್ವರ, ದುಂಡಪ್ಪ ಮುಕ್ಕನ್ನವರ, ಗೀತಾ ಬೂದಿಹಾಳ, ಪುರಸಭೆ ಸದಸ್ಯ ಗಫಾರ ಡಾಂಗೆ, ಅನ್ವರ ನದಾಫ ಉಪಸ್ಥಿತರಿದ್ದರು.