ಮೂಡಲಗಿ: ಕೊರೋನಾ ಮುನ್ನೆಚ್ಚರಿಕೆಗಾಗಿ ಪ್ರತಿಯೊಬ್ಬರೂ ಮಾಸ್ಕ ಧರಿಸುವುದರ ಜೊತೆಗೆ ಕೋವಿಡ್ ಲಸಿಕೆ ಪಡೆಯುವುದು ಕೂಡ ಅಷ್ಟೇ ಮಹತ್ವವಾಗಿದೆ ಎಂದು ಸಮಾಜ ಸೇವಕ ಈರಪ್ಪ ಢವಳೇಶ್ವರ ಹೇಳಿದರು.
ಶನಿವಾರದಂದು ಇಲ್ಲಿನ ವಾರ್ಡ ನಂ 3ರ ಅಂಬೇಡ್ಕರ ಭವನದಲ್ಲಿ ಕೋವಿಡ್ ಲಸಿಕಾ ಶಿಬೀರದಲ್ಲಿ ಲಸಿಕೆ ಪಡೆಯಲು ಬಂದ ಸಾರ್ವಜನಿಕರಿಗೆ 250 ಮಾಸ್ಕ ವಿತರಿಸಿ ಮಾತನಾಡಿದ ಅವರು, ಎಲ್ಲರೂ ಲಸಿಕೆ ಪಡೆದು ಕೊರೋನಾ ಮುಕ್ತ ದೇಶವಾಗಲು ಸಹಕರಿಸಿ, ಇಲ್ಲಿನ ಜನತೆಗೆ ಲಸಿಕೆ ಪಡೆಯಲು ಈ ಅವಕಾಶ ಕಲ್ಪಿಸಲಾಗಿದೆ ಹೆದರದೆ ಲಸಿಕೆ ಪಡೆಯಬೇಕೆಂದು ಸಲಹೆ ನೀಡಿದರು.
ಆರೋಗ್ಯ ಸಿಬ್ಬಂದಿಗಳಾದ ಶಿವಲಿಂಗ ಪಾಟೀಲ, ವಿಠ್ಠಲ ಪಾಟೀಲ, ಚೇತನ ನಿಶಾನಿಮಠ, ರೂಪಾ ಹಲಸಪ್ಪಗೋಳ, ಎನ್ ಆರ್ ಯಮಕನಮರ್ಡಿ, ಹಾಗೂ ಆಶಾ ಕಾರ್ಯಕರ್ತೆಯರಾದ ನಿರ್ಮಲ ದರೂರ, ಶೋಭಾ ಶಾಬನ್ನವರ, ಎಲ್ ಎಸ್ ಕುದರಿ ಕಾರ್ಯ ನಿರ್ವಹಿಸಿದರು.
ಮುಖಂಡರಾದ ಮರೆಪ್ಪ ಮರೆಪ್ಪಗೋಳ, ಶಿವಪ್ಪ ಚಂಡಕಿ, ಗುರು ಗಂಗನ್ನವರ, ಚಂದ್ರಕಾಂತ ದರೂರ ಇದ್ದರು.
ಈ ಶಿಬಿರದಲ್ಲಿ 250 ಜನತೆ ಕೋವಿಡ್ ಲಸಿಕೆ ಪಡೆದರು.