ಸಿಂದಗಿ: ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರೀತ್ಯ ಕಾಣುತ್ತಿದ್ದೇವೆ ಎಂದು ಮಹಿಳಾ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಹೈಯಾಳಕರ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಘಟಕ, ಅನುಗ್ರಹ ವಿಜನ್ ಪೌಂಡೇಶನ್ ಟ್ರಸ್ಟ್ ಹಾಗೂ ಶ್ರೀಪದ್ಮರಾಜ ಮಹಿಳಾ ಪದವಿ ಮತ್ತ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಿಂಗಳಿಗೆ ಒಂದು ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.
ಈ ವೇಳೆ 300ಕ್ಕೂ ಅಧಿಕ ವಿದ್ಯಾರ್ಥಿಗಳು ನೇತ್ರ ತಪಾಸಣೆ ಮಾಡಿಕೊಂಡರು. ಡಾ.ಪ್ರಿಯಾಂಕ, ನೇತ್ರಾಧಿಕಾರಿಗಳಾದ ಸಂಗಮೇಶ ಪಾಟೀಲ, ವಿನಾಯಕ ಪವಾರ, ಬಾಪುರಾಯ, ಶಿವರಾಜ ಹೂಗಾರ, ನಜೀಬ್ ನಾಲಬಂದ ಹಾಗೂ ಸಹಾಯಕ ಸಿಬ್ಬಂದಿಗಳಾದ ಕೌಶಲ್ಯ ನಾವಿ, ಅಶ್ವೀನಿ ಗದ್ಯಾಳ, ಸುಚಿತ್ರಾ, ಪ್ರತೀಕ್ಷಾ, ಲಕ್ಷ್ಮೀ ಸುಧಾ ನೇತ್ರ ತಪಾಸಣೆ ನಡೆಸಿದರು.
ಸಮಾರಂಭದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಪೂಜಾರಿ, ಉಪನ್ಯಾಸಕರಾದ ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ರೇವಣಸಿದ್ದ ಹಾಲಕೇರಿ, ಎಸ್.ಸಿ.ದುದ್ದಗಿ,ಎ.ಆರ್.ರಜಪೂತ, ಮಹಾಂತೇಶ ನೂಲಾನವರ, ಯು.ಸಿ.ಪೂಜೇರಿ, ಸತೀಶ ಕಕ್ಕಸಗೇರಿ, ಡಿ.ಎಂ.ಪಾಟೀಲ, ಎ.ಎ.ಕೋಕಣಿ, ಶಿವರಾಜ ಕುಂದಗೋಳ, ಎಸ್.ಎಸ್.ಸಜ್ಜನ, ವರ್ಷಾ ಪಾಟೀಲ, ಹೇಮಾ ಹಿರೇಮಠ, ಶೃತಿ ಹೂಗಾರ, ಪ್ರಿಯಾಂಕ ಬ್ಯಾಕೋಡ, ಎಂ.ಕೆ.ಬಿರಾದಾರ, ನೀಲಮ್ಮ ಬಿರಾದಾರ, ಲಕ್ಷ್ಮೀ ಮಾರ್ಸನಳ್ಳಿ, ಮಂಗಳಾ ಈಳಗೇರ, ಹೇಮಾ ಕಾಸರ, ಮಮತಾ ಹರನಾಳ, ವಿಜಯಲಕ್ಷ್ಮೀ ಭಜಂತ್ರಿ, ಶಂಕರ ಕುಂಬಾರ ಉಪಸ್ಥಿತರಿದ್ದರು.