ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕು ಎಂದು ಪುರಸಭೆಯ ಅಧ್ಯಕ್ಷ ಡಾ|| ಶಾಂತವೀರ ಮನಗೂಳಿ ಸಲಹೆ ನೀಡಿದರು.

ಪಟ್ಟಣದ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಕೋವಿಡ್-19 ಲಸಿಕಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಲಸಿಕೆ ಪಡೆದವರು ಮಾಸ್ಕ ಧರಿಸುವದು ಕೈತೊಳೆಯುವದು ಸಾಮಾಜಿಕ ಅಂತರ ಕಾಪಾಡುವದು ಅತಿ ಅವಶ್ಯಕವಾಗಿದೆ ಎಂದು ಹೇಳಿದರು.

ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಕೋವಿಡ್ ಸಾಂಕ್ರಾಂಮಿಕ ರೋಗವನ್ನು ಸಮರ್ಥವಾಗಿ ಎದುರಿಸಿ ಸುರಕ್ಷಿತವಾಗಿರಬೇಕಾದರೆ, ಲಸಿಕೆಯನ್ನು ಪಡೆಯುವದು ಅತ್ಯವಶ್ಯಕವಾಗಿದೆ ಕೋವಿಡ್ ಲಸಿಕೆಯನ್ನು ಜನೇವರಿ-21 ರಲ್ಲಿ ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ಆರೋಗ್ಯ ಕಾರ್ಯಕರ್ತರು ಮುಂಚೂಣಿಯ ಕಾರ್ಯಕರ್ತರು ಹೀಗೆ ಆದ್ಯತಾ ಗುಂಪು ಹಾಗೂ 45 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಬೇಕಾದರೆ ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕು ಎಂದರು.

- Advertisement -

ತಾಲೂಕಾ ಆರೋಗ್ಯ ಅಧಿಕಾರಿ ಡಾ, ರಾಮಕೃಷ್ಣ ಇಂಗಳೆ ಮಾತನಾಡಿ, ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಉಪಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡುತ್ತಿದ್ದು, ಸಾರ್ವಜನಿಕರು ಲಸಿಕೆ ಪಡೆದು ಸುರಕ್ಷಿತವಾಗಿರಬೇಕೆಂದು ಕೋರಿದರು. ಲಸಿಕೆ ಪಡೆಯುವದರಿಂದ ಯಾವುದೇ ತೊಂದರೆ ಉಂಟಾಗುವದಿಲ್ಲ, 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನವರು ಲಸಿಕೆ ಪಡೆದು ಕೋವಿಡ್-19 ರೋಗವನ್ನು ತಡೆಗಟ್ಟ ಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ, ವೃತ್ತ ನಿರೀಕ್ಷಕ ಎಂ. ಎಚ್. ಪಾಟೀಲ, ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಕೋರವಾರ, ಹಾಗೂ ಆಯುಷ್ಯ ವೈದ್ಯಾಧಿಕಾರಿ ಡಾ, ಮಹಾಂತೇಶ ಹಿರೇಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಕುಲಕರ್ಣಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯ ನಿರೀಕ್ಷಣಾಧಿಕಾರಿ ಪಿ. ವಾಯ್. ಚೌಡಕಿ, ಮಲೇರಿಯಾ ತಾಂತ್ರಿಕ ಅಧಿಕಾರಿ ಪ್ರಭು ಜಂಗಿನಮಠ, ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಂದ್ರ ಪವಾಡೆ, ಜೆ. ಕೆ. ಚಿಕ್ಕರಡ್ಡಿ, ನಾಗರಾಜ, ಮಹಾಲಿಂಗ, ಸಂಜೀವ ಪಾಟೀಲ, ಸುರೇಶ ಬಬಲೇಶ್ವರ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!