spot_img
spot_img

ಜೈಂಟ್ಸ ಗ್ರುಪ್ ಹಾಗೂ ರಾಣಿ ಚನ್ನಮ್ಮ ಸಹೇಲಿ ಗ್ರುಪ್ ಅಧಿಕಾರ ಪ್ರಧಾನ ಸಮಾರಂಭ

Must Read

ಮುನವಳ್ಳಿ: ಪಟ್ಟಣದ ಜೈಂಟ್ಸ ಗ್ರುಪ್ ಆಫ್ ಮುನವಳ್ಳಿ ಹಾಗೂ ಜೈಂಟ್ಸ ಗ್ರುಪ್ ಆಫ್ ರಾಣಿ ಚನ್ನಮ್ಮ ಸಹೇಲಿ ಎರಡೂ ಗ್ರುಪ್ ಗಳ ೨೦೨೨-೨೩ ನೇ ಸಾಲಿನ ೧೭ ನೇ ವರ್ಷದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಪ್ರಧಾನ ಸಮಾರಂಭವನ್ನು ಸ್ಥಳೀಯ ಶಂಕರಲಿಂಗ ದೇವಸ್ಥಾನದಲ್ಲಿ ಶನಿವಾರ ಜೂನ್ 4 ರಂದು ಸಂಜೆ ೫.೩೦ ಕ್ಕೆ ಜರುಗಿಸಲಾಗುತ್ತಿದ್ದು ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುನವಳ್ಳಿ-ಭಂಡಾರಹಳ್ಳಿ ಶ್ರೀ ಸೋಮಶೇಖರಮಠದ ಶ್ರೀ.ಮ.ನಿ.ಪ್ರ.ಸ್ವ. ಮುರುಘೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ಫೆಡರೇಶನ್ ೬ ರ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ವಾಲಿ ಆಗಮಿಸಲಿದ್ದಾರೆ.

ಅತಿಥಿಗಳಾಗಿ ಮುಖ್ಯ ಮಂತ್ರಿ ಪದಕ ವಿಜೇತ ಬೆಳಗಾವಿಯ ಸಿ.ಪಿ.ಐ. ಅಡಿವೇಶ ಗುದಿಗೊಪ್ಪ. ಧಾರವಾಡ ಎ.ಪಿ.ಎಂ.ಸಿ ಅಧ್ಯಕ್ಷರಾದ ಕೃಷ್ಣಾ.ಡಿ.ಕೊಳ್ಳಾನಟ್ಟಿ. ನವಲಗುಂದದ ಅಬಕಾರಿ ಇಲಾಖೆಯ ಇನಸ್ಪೆಕ್ಟರ್ ಶ್ರೀಮತಿ ಗೀತಾ ತೆಗ್ಗಿಹಾಳ ಉಪಸ್ಥಿತರಿರುವರು. ಜೈಂಟ್ಸ ಗ್ರುಪ್ ಅಧ್ಯಕ್ಷರಾಗಿ ೨೦೨೨-೨೩ ನೇ ಸಾಲಿಗೆ ಆಯ್ಕೆಯಾದ ಯಲ್ಲಪ್ಪ ಪೂಜೇರ ಹಾಗೂ ಜೈಂಟ್ಸ ಗ್ರುಪ್ ಆಫ್ ರಾಣಿ ಚನ್ನಮ್ಮ ಸಹೇಲಿ ಮುನವಳ್ಳಿಯ ನೂತನ ಅಧ್ಯಕ್ಷರಾದ ಜ್ಯೋತಿ ಯಲಬುರ್ಗಿಯವರಿಗೆ ಜೈಂಟ್ಸ ವೆಲ್‌ಫೇರ್ ಫೌಂಡೇಶನ್ ದ ಯೂನಿಟ್ ೧ ರ ನಿರ್ದೇಶಕರು ಹಾಗೂ ಫೇಡರೇಶನ್ ೬ ರ ಶಿವಕುಮಾರ ಕರೀಕಟ್ಟಿ ಅಧಿಕಾರ ಪ್ರಧಾನ ಮಾಡುವರು ಎಂದು ಜೈಂಟ್ಸ ಗ್ರುಪ್ ನ ಪ್ರಕಟಣೆಯಲ್ಲಿ ತಿಳಿಸಿರುವರು.

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!