ಮೂಡಲಗಿ: ‘೧೨ನೇ ಶತಮಾನದಲ್ಲಿ ನಿರ್ಲಕ್ಷಕ್ಕೆ ಒಳಗಾದ ಎಲ್ಲ ಜಾತಿಯ ಶರಣ ಜೀವಿಗಳು ದಲಿತರೆನಿಸಿಕೊಂಡಿದ್ದರು’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಸೋಮವಾರ ಆಚರಿಸಿದ ಕಾಯಕಜೀವಿ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ನಿರ್ಲಕ್ಷಕ್ಕೆ ಒಳಗಾಗಿದ್ದ ಎಲ್ಲ ತಳಸಮುದಾಯವರನ್ನೆಲ್ಲರನ್ನು ಸೇರಿಸಿ ಸಮಾನತೆಯನ್ನು ಸಾರಿದ್ದರು ಎಂದರು.
ಜಾತಿ ವ್ಯವಸ್ಥೆಯಲ್ಲಿ ಮತ್ತು ಅವರು ಮಾಡುವ ಕಾಯಕಗಳಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಉರಿಲಿಂಗ ಪೆದ್ದಿ ಸೇರಿದಂತೆ ಅನೇಕರಿಗೆ ಬಸವೇಶ್ವರರು ಲಿಂಗಧೀಕ್ಷೆಯನ್ನು ನೀಡಿ ಅವರನ್ನು ಮುನ್ನೆಲೆ ತಂದರು. ಅಂಥ ಶರಣರು ಅನೇಕ ವಚನಗಳನ್ನು ರಚಿಸಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಶರಣರ ಜೀವನ ಚರಿತ್ರೆ ಮತ್ತು ಅವರ ವಚನಗಳನ್ನು ಓದುವುದರ ಮೂಲಕ ಬದುಕಿನಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಿದ್ದು, ವಚನಗಳನ್ನು ಓದುವ ಪ್ರವತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಶರಣ ಕೃಷ್ಣಾ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಶಿವಾನಂದ ಬಬಲಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದಲಿತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ಮಹನೀಯರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಅದಿಕಾರಿ ಯಲ್ಲಪ್ಪ ಗದಾಡಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐ ರಾಜು ಪೂಜೇರಿ,
ಮರಿಯಪ್ಪ ಮರೆಪ್ಪಗೋಳ, ಸತ್ಯೆಪ್ಪ ಕರವಾಡಿ, ರಮೇಶ ಮಾದರ, ಲಕ್ಷ್ಮಣ ಕೆಳಗಡೆ, ಈರಪ್ಪ ಢವಳೇಶ್ವರ,
ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅದೀಕ್ಷಕ ಎಂ.ಎಸ್. ಪಾಟೀಲ ಸ್ವಾಗತಿಸಿದರು, ಯಲ್ಲಪ್ಪ ಭಜಂತ್ರಿ ನಿರೂಪಿಸಿದರು.