ಮೂಡಲಗಿ- ಪಟ್ಟಣದ 5 ವರ್ಷದ ಬಾಲಕಿಯ ಮೇಲೆ 14 ವರ್ಷದ ಅಪ್ರಾಪ್ತ ಬಾಲಕನಿಂದ ಲೈಂಗಿಕ ಕಿರುಕುಳ ನಡೆದ ಬಗ್ಗೆ ವರದಿಯಾಗಿದೆ.
ಬಾಲಕಿ ಬಹಳ ಹೊತ್ತಾದರೂ ಮನೆಗೆ ಬಾರದೆ ಇರುವಾಗ ಪೋಷಕರು ಹುಡುಕಾಟ ನಡೆಸಿದಾಗ,ಎದುರುಗಡೆ ವಾಸಿಸುವ ಬಾಲಕನು,5 ವರ್ಷದ ಬಾಲಕಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ್ದು ಗೊತ್ತಾಗಿದೆ.ಬಾಗಿಲು ಮುರಿದು ನೋಡಿದಾಗ ಬಾಲಕಿ ಮತ್ತು ಅಪ್ರಾಪ್ತ ಬಾಲಕ ಇಬ್ವರು ಪತ್ತೆಯಾದರು.
ಕೂಡಲೇ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಬಾಲಕ ಹಾಗೂ ಪೋಷಕರ ಮೇಲೆ ಸಹ ದೂರು ದಾಖಲಿಸಲಾಗಿದೆ.