- Advertisement -
ಧಾರವಾಡ. ಮಂಡ್ಯ ದಲ್ಲಿ ಜರುಗುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವ ಡಾ. ಗೋ ರು ಚನ್ನಬಸಪ್ಪ ಅವರನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಗೋರುಚ ಸಾಹಿತ್ಯ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ, ಎಲ್ಲರೂ ಮಾತೃಭಾಷೆಯನ್ನು ಗೌರವಿಸಬೇಕೆಂದು ತಿಳಿಸಿದರು.
ಡಾ. ಲಿಂಗರಾಜ ಅಂಗಡಿ, ಪ್ರೊ. ಕೆ ಎಸ್ ಕೌಜಲಗಿ, ಡಾ . ಎಸ್ ಎಸ್ ದೊಡಮನಿ, ಮಹಾದೇವ ಹೊರಟ್ಟಿ, ಮಹಾಂತೇಶ ನರೇಗಲ್, ವಿದ್ಯಾ ವಂಟಮುರಿ, ಡಾ . ವೀಣಾ ಬಿರಾದಾರ, ಸುಧಾ ಕಬ್ಬೂರ,ಸಿದ್ದಮ್ಮ ಅಡವೆನ್ನವರ, ಮಾರ್ತಾಂಡಪ್ಪ ಕತ್ತಿ, ಎಸ್ ಎಮ್ ದಾನಪ್ಪಗೌಡರ, ಬಿ ಜಿ ಬಾರ್ಕಿ, ಎಫ್ ಬಿ ಕಣವಿ, ಡಾ. ಶರಣಮ್ಮ ಗೋರೆಬಾಳ, ಎಚ್ ಎಸ್ ಪ್ರತಾಪ್, ಶ್ರೀಮತಿ ವಿಜಯಲಕ್ಷ್ಮೀ ಕಲ್ಯಾಣ ಶೆಟ್ಟರ್ , ಶ್ರೀಮತಿ ಪ್ರಮಿಳಾ ಜಕ್ಕನ್ನವರ ಮುಂತಾದವರು ಉಪಸ್ಥಿತರಿದ್ದರು.