ಈ ನಾಡಿನಲ್ಲಿ ದೇವರ ಕುರಿತು ಜನರಿಗೆ ಬಹಳಷ್ಟು ಗೊಂದಲವಿದೆ. ಭೀತಿಯಿಂದ ಸಮಾಜದಲ್ಲಿ ಮೌಢ್ಯ ನೆಲೆಯೂರಿದೆ. ಊರ ದೇವರು, ನಾಡ ದೇವರು ಮತ್ತು ರಾಷ್ಟ್ರ ದೇವರು ಎಂಬ ಮೂರು ವಿಧದ ದೇವರುಗಳನ್ನು ನಾವು ಆರಾಧಿಸುತ್ತೇವೆ. ಆದರೆ ಈ ದೇವರುಗಳು ತಂದೆ-ತಾಯಿಯಿಂದ ಜನಿಸಿದವರು. ಅದಕ್ಕೆ ಈ ದೇವರುಗಳಿಗೆ ಸಾವು, ಅಂತ್ಯವಿದೆ. ಆದರೆ ಶರಣರ ದೇವರು ಎಂದರೆ ಹುಟ್ಟು-ಸಾವಿಲ್ಲದ ಕೇಡಿಲ್ಲದ ದೇವರು. ಅದು ವಿಶ್ವಚೈತನ್ಯ. ಆ ದೇವರು ಜಗದಗಲ, ಮುಗಿಲಗಲ, ಮಿಗೆಯಗಲವಾಗಿದ್ದು, ಇಡೀ ಬ್ರಹ್ಮಾಂಡವೇ ಆ ದೇವರು. ಆ ಬ್ರಹ್ಮಾಂಡದ ಅಂಶವಾದ ಈ ಮಾನವ ಪಿಂಡಾಂಡವೂ ಸಹ ದೇವರು. ಇಷ್ಟಲಿಂಗವು ಈ ಸಮಸ್ತ ಆ ಪರಾಪರ ಶಕ್ತಿಯ ಕುರುಹು ಎಂದು ಶರಣ ಬಾಳೇಶ ಬಸರ್ಗಿ ಅನುಭಾವ ನೀಡಿದರು.
ಲಿಂಗಾಯತ ಸಂಘಟನೆ ಬೆಳಗಾವಿ (ರಿ) ಇವರಿಂದ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ 26-1-2025 ಬೆಳಿಗ್ಗೆ 8 ಘಂಟೆಗೆ ಸಾಮೂಹಿಕ ವಚನ ಪ್ರಾರ್ಥನೆ ಮತ್ತು ಈ ತಿಂಗಳಲ್ಲಿ ಜನಿಸಿದವರ ಹುಟ್ಟುಹಬ್ಬ,ಮದುವೆ ವಾರ್ಷಿಕೋತ್ಸವ ಸಾಮೂಹಿಕ ಆಚರಣೆ ಜರುಗಿತು.
ಆರಂಭದಲ್ಲಿ ಶರಣ ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು ಬಿ.ಪಿ.ಜೇವಣಿ, ಆನಂದ ಕರ್ಕಿ, ಜಯಶ್ರೀ ಚಾವಲಗಿ, ಮಂಗಳಾ ಕಾಕತಿಕರ, ಶ್ರೀದೇವಿ ನರಗುಂದ, ಬಸವರಾಜ ಬಿಜ್ಜರಗಿ, ವಿ.ಕೆ.ಪಾಟೀಲ, ವಚನ ಗಾಯನ ಮಾಡಿದರು. ಶರಣ ಈರಣ್ಣ ದೇಯನ್ನವರ ಅಧ್ಯಕ್ಷರು ಲಿoಗಾಯತ ಸಂಘಟನೆ ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು. ಸುರೇಶ ನರಗುಂದ ನಿರೂಪಿಸಿದರು.
ಬಸವರಾಜ ಬಿಜ್ಜರಗಿ, ಸದಾಶಿವ ದೇವರಮನಿ, ಸುನೀಲ ಸಾಣಿಕೂಪ್ಪ, ಸಿದ್ದಪ್ಪ ಸಾರಾಪುರಿ, ವಿದ್ಯಾ ಕಕಿ೯, ಮ೦ಜುಳಾ ದೇಯಣವರ, ಶಿವಾನಂದ ಲಾಳಸಂಗಿ, ಸಿದ್ದಲಿ೦ಗಪ್ಪ ರೇವಣ್ಣವರ, ಅನೀಲ ರಘಶೆಟ್ಟಿ, ಶೇಖರ ವಾಲಿ ಇಟಗಿ, ಸಿದ್ದಪ್ಪ ಸಾರಾಪೂರಿ, ಶರಣ ಶರಣೆಯರು ಉಪಸ್ಥಿತರಿದ್ದರು.