ಗೋಕಾಕ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ ಚಟುವಟಿಕೆಯ ಬೋಧನೆ ಅವಶ್ಯಕವಾಗಿದೆ ಎಂದು ಮಂಗಳೂರು ಕೆಮಿಕಲ್ಸ್ & ಪರ್ಟಿಲೈಜರ್ಸ್ ಲಿ. ಹುಬ್ಬಳಿ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಆರ್ ನಾರಾಯಣ ಸ್ವಾಮಿ ಹೇಳಿದರು.
ಗೋಕಾಕ ನಗರದ ಡಾಲರ್ಸ್ ಕಾಲೋನಿಯಲ್ಲಿ ನಡೆದ ಎಂಸಿಎಫ್ ಕಂಪನಿಯ ರಿಟೇಲ್ ವಿತರಕರ ಸಭೆಯನ್ನು ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಗಳೂರು ಕೆಮಿಕಲ್ಸ್ & ಪರ್ಟಿಲೈಜರ್ಸ್ ಲಿ. ಈಗಾಗಲೇ ಸ್ಪರ್ಧಾತ್ಮಕ ದರದಲ್ಲಿ ರೈತರಿಗೆ ಉಪಯುಕ್ತವಾಗುವ ರಸಗೊಬ್ಬರ, ಸಿಂಪರಣೆ, ಹನಿ ನೀರಾವರಿ ಅನುಕೂಲವಾಗುವಂತಹ ಹಲವು ಬಗೆಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಸಾಮಾಜಿಕ, ಶೈಕ್ಷಣಿಕವಾಗಿ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.
ಮಾರಾಟದಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಗೋಕಾಕ ವಲಯವು ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯ. ರೈತರು ಹಾಗೂ ವಿತರಕರು ಮುಂದೆಯೂ ಈ ರೀತಿ ನಮಗೆ ಸಹಕಾರ ನೀಡಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷಯನ್ನು ಕಲ್ಲೋಳಿಯ ಅಲ್ಲಮಪ್ರಭು ಪರ್ಟಿಲೈಜರ್ಸ್ ಪ್ರೊ. ಬಸವರಾಜ ಕಡಾಡಿ ವಹಿಸಿದ್ದರು. ಮಾರಾಟ ವಿಭಾಗ ಮುಖ್ಯ ವ್ಯವಸ್ಥಾಪಕ ನಾಗರಾಜ, ಗೋಕಾಕ ವಲಯ ಮಾರಾಟ ಅಧಿಕಾರಿ ಭರತೇಶ ಸೇರಿದಂತೆ ಗೋಕಾಕ, ಮೂಡಲಗಿ ಹಾಗೂ ಸವದತ್ತಿ ತಾಲೂಕಿನ ರಿಟೇಲ್ ವಿತರಕರು ಉಪಸ್ಥಿತರಿದ್ದರು.