spot_img
spot_img

ಸಿಂದಗಿ ಮಂದಾರ ಶಾಲೆಯಲ್ಲಿ ಗೋಕುಲಾಷ್ಟಮಿ

Must Read

ಸಿಂದಗಿ: ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದೇ ಶ್ರೀಕೃಷ್ಣ ಭೂಮಿಗೆ ಅವತರಿಸಿದ್ದನು ಎಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾಜೀ  ಹೇಳಿದರು.

ಪಟ್ಟಣದ ಜ್ಯೋತಿ ನಗರದ ಲಕ್ಷ್ಮಿ ಮಂಗಲ ಕಾರ್ಯಾಲಯದಲ್ಲಿ ಮಂದಾರ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ  ಗೋಕುಲಾಷ್ಟಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈ ದಿನ ಮಕ್ಕಳದೇ ಹಾವಳಿಯೆನ್ನಬಹುದು ಕೃಷ್ಣನ ರೂಪದ ಚಂದದ ಉಡುಗೆಯಲ್ಲಿ ಅತೀ ಸುಂದರವಾಗಿ ಕಾಣುತ್ತಾರೆ ಒಂದೊಂದು ಪುಟಾಣಿಯ ವಿಭಿನ್ನ  ವೇಷದಲ್ಲಿ ಕಾಣಿಸಿ ನಮ್ಮೆಲ್ಲರ ಮನ ತಣಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಧಾ ಕೃಷ್ಣರ ವೇಷದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ನೀಡಲಾಯಿತು ಮತ್ತು ಅವರ ಪಾಲಕರಿಗೆ ಗೌರವಿಸಲಾಯಿತು. ಪುಟಾಣಿಗಳು ಮೊಸರಿನ ಗಡಿಗೆ ಒಡೆದು ಸಂಭ್ರಮಿಸಿದರು.

ಸಂಸ್ಥೆಯ ಕಾರ್ಯದರ್ಶಿ ಭಾರತಿ ಚೌಧರಿ, ವೇದಿಕೆ ಮೇಲಿದ್ದರು. ಮುಖ್ಯಗುರು ಚಿದಾನಂದ ಹಿಟ್ನಳ್ಳಿ ನಿರೂಪಿಸಿದರು. ಶಿಕ್ಷಕ ಸೋಮಶೇಖರ ಸ್ವಾಗತಿಸಿದರು. ಈರಮ್ಮ ನಂದಿಕೋಲ ವಂದಿಸಿದರು

ಈ ಸಂದರ್ಭದಲ್ಲಿ ಪೂಜಾ ಗಾಯಕವಾಡ, ದಾನಮ್ಮ, ಈರಮ್ಮ ನಂದಿಕೋಲ, ಅಭಿಷೇಕ ಚೌಧರಿ, ಸುಷ್ಮಾ ಚೌಧರಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!