spot_img
spot_img

ಗೊಲ್ಲ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Must Read

ಸಿಂದಗಿ; ಇಂದಿನ ಗೊಲ್ಲ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಕಾರ್ಯಕ್ರಮವು ಎಲ್ಲರೂ ಆಶ್ಚರ್ಯ ಚಕಿತರಾಗುವಂತೆ ಮಾಡಿದೆ ಈ ಸಮುದಾಯ ನ್ಯಾಯಾಂಗ, ಪೋಲಿಸ್, ವೈದ್ಯಕೀಯ, ಇಂಜನಿಯರಿಂಗ್, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ಸಂತಸದ ವಿಷಯ ಇನ್ನು ಈ ಸಮಾಜದ ಎಲ್ಲ ಬಂಧುಗಳು ತಮ್ಮ ತಮ್ಮ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿ.ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನ ಕುಡಿದವರು ಘರ್ಜಿಸಲೇಬೇಕು ಎಂದು  ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗೊಲ್ಲ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗೊಲ್ಲರ ಸಮಾಜದವರು ಶ್ರಮಿಕರಾಗಿದ್ದು ಇಂದು ಮೂಲ ವೃತ್ತಿಗೆ ಪೆಟ್ಟು ಬಿದ್ದಿದ್ದು ಅದರ ಅವಲಂಬಿತರಾಗದೆ ತಮ್ಮ ಮಕ್ಕಳಿಗೆ ಶಿಕ್ಷಣ ಉತ್ತಮ ನೀಡಿದರೆ ಸಮಾಜ ಸುಧಾರಣೆಯಾಗುತ್ತದೆ ಎಂದರು.

ಬಾಗಲಕೋಟ ನಗರಸಭೆಯ ಮಾಜಿ ಸದಸ್ಯ ಯಲ್ಲಪ್ಪ ದೂದಿಗೊಲ್ಲರ ಅವರು ಮಾತನಾಡಿ,  ಇಂತಹ ಕಾರ್ಯಕ್ರಮಗಳು ನಮ್ಮ ಸಮುದಾಯದಲ್ಲಿ ಬಹಳಷ್ಟು ವಿರಳ ಸಿಂದಗಿ ಭಾಗದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯ ಆದರೆ ನಾವು ಮೀಸಲಾತಿ ವಿಷಯದಲ್ಲಿ ಸಾಕಷ್ಟು ಹಿಂದುಳಿದ್ದೇವೆ ನಾವು ಹೋರಾಟದ ಮೂಲಕ ಮಾತ್ರ ಮೀಸಲಾತಿ ಪಡೆಯಲು ಸಾಧ್ಯ ಎಂದು ಹೇಳಿದರು.

ಸಮುದಾಯದ ಶಾಸಕಿ ಪೂರ್ಣಿಮಾ ಶೀನಿವಾಸ ಅವರು ಮಾತನಾಡಿ, ಯಾವುದೇ ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧಿಸದೇ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾದಂತವರು ಅವರ ಸಾಧನೆ ಕೂಡ ಅಪಾರವಾದದು ಎಂದು ಅಭಿಮತ ವ್ಯಕ್ತ ಪಡಿಸಿದರು.

ಪುರಸಭೆಯ ಅದ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ,  ಪುರಸಭೆಯಿಂದ ಈ ಸಮುದಾಯಕ್ಕೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಯಾವಾಗಲೂ ನಿಮ್ಮ ಬೆನ್ನೆಲುಬಾಗಿ ಇರುತ್ತೇನೆ ಎಂದರು.

ಜೆಡಿಸ್ ಮುಖಂಡ ಶಿವಾನಂದ ಪಾಟೀಲ ಅವರು ಮಾತನಾಡಿ, ಈ ಸಮಾಜ ತೀರಾ ಹಿಂದುಳಿದಿದ್ದು ಈ ಸಮುದಾಯವನ್ನ ಪರಿಶಿಷ್ಠ ಜಾತಿ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಸದಾ ಬೆನ್ನೆಲುಬಾಗಿ ಇರುತ್ತೇನೆ ಎಂಬ ದೃಢ ವಿಶ್ವಾಸವನ್ನ ನೀಡಿದರು.

ಈ ಸಮುದಾಯದ ಪುರಸಭೆಯ ನಾಮನಿರ್ದೇಶಿತ ಸದಸ್ಯ ರಾಮು ಮೋರಟಗಿ  ಮಾತನಾಡಿ, ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ನನ್ನ 3-4 ವರ್ಷದ ಕನಸಾಗಿತ್ತು ಇಂದು ನೇರವೇರಿದಂತಾಗಿದೆ ನನ್ನ ಸಮಾಜದ ಬಂಧುಗಳು ತಮ್ಮ ತಮ್ಮ ಮಕ್ಕಳನ್ನ ದಯವಿಟ್ಟು ವಿದ್ಯಾವಂತರನ್ನಾಗಿ ಮಾಡಿ ಅಂದಾಗ ಮಾತ್ರ ನಮ್ಮ ಸಮುದಾಯದ ಏಳಿಗೆ ಸಾದ್ಯ. ಸಮುದಾಯದ ಎಲ್ಲ ನಾಯಕರು ಸಮಾಜದ ಏಳಿಗೆಗಾಗಿ ಒಗ್ಗಟ್ಟಾಗಿ ನಿಲ್ಲಬೇಕಿದೆ ನಾವು ಅಂತರ್ ಕಲಹಗಳನ್ನ ಮರೆತು ಸಮಾಜದ ಏಳ್ಗೆ ಬಯಸಿ ಸಮುದಾಯದೊಳಗೆ ರಾಜಕೀಯ ಮಾಡುವ ಬದಲು ಸಮುದಾಯಕ್ಕಾಗಿ ರಾಜಕೀಯ ಮಾಡಿ ಎಂಬ ಮಾತನ್ನು ಹೇಳಿದ ಡಾ. ಅಂಬೇಡ್ಕರ್ ರವರ ದಾರಿಯಲ್ಲಿ ನಡಿಯೋಣ ಎಂದರು.

ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಮತ್ತು ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮುದಾಯದ  80 ಪ್ರತಿಭಾನ್ವಿತರನ್ನ ಹಾಗೂ ಸರಕಾರಿ ಉದ್ಯೋಗದಲ್ಲಿರುವ ಒಟ್ಟು 15 ಜನರನ್ನು,  ಎಂಬಿಬಿಎಸ್ ಮುಗಿಸಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಮುದ್ದೇಬಿಹಾಳ ಮೂಲದ ರಾಜು ಗೊಲ್ಲರ ಹಾಗೂ ಅಭಿಯಂತರ ಸಾವಿತ್ರಿ ಅಗರಖೇಡ ಹಾಗೂ ವಕೀಲರಾಗಿರುವ ಲೀಲಾವತಿ ಗೊಲ್ಲರ ಹಾಗೂ ಅಕ್ಕಲಕೋಟ ನಗರಸಭೆಯ ಹಾಲಿ ಸದಸ್ಯರಾದ ಜಿತೇಶ ಯಾರೊಳೆ ಹಾಗೂ ಮತ್ತು ವಿಜಯಪುರ ಜಿಲ್ಲಾ ಅಲೆಮಾರಿ ಸಲಹಾ ಸಮಿತಿ ಸದಸ್ಯರಾದ ಗುರಪ್ಪ ಕನ್ನೂರ ಸನ್ಮಾನಿಸಲಾಯಿತು.

ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ರಾಜೇಶ್ವರಿ ತುಂಗಳ, ಪುರಸಭೆ ಸದಸ್ಯರಾದ ರಾಜಣ್ಣಿ ನಾರಾಯಣಕರ, ಶರಣಗೌಡ ಪಾಟೀಲ, ಮಲ್ಲು ಪೂಜಾರಿ, ಬಸವರಾಜ ಸಜ್ಜನ, ಆನಂದ ಡೋಣುರ, ಸೈಪನ ನಾಟೀಕಾರ, ಕಾಜು ಬಂಕಲಗಿ, ರಜಾಕ ಮುಜಾವರ ರೈತ ಸಂಘದ ಪೀರು ಕೆರೂರ ಮಂಜುನಾಥ ಬಿರಾದಾರ ಇನ್ನಿತರರು ಬಾಗವಹಿಸಿದ್ದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!