ಗೋಂಧಳಿ ಸಮಾಜದ ಸಭೆ ಮತ್ತು ಸನ್ಮಾನ ಸಮಾರಂಭ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಸವದತ್ತಿ: “ಗೋಂದಳಿ ಸಮಾಜದವರು ಹಾಗೂ ಹೆಳವ ಸಮಾಜದವರು ತಮ್ಮ ಒಂದು ಹಾಡಿನ ಮೂಲಕ ಬೇರೆ ಸಮಾಜದ ಜನರ ಕುಟುಂಬದ ಮಾಹಿತಿಯನ್ನು ಅವರ ವಂಶಾವಳಿಗಳನ್ನು ಮನೆ ಮನೆಗೆ ಬಂದು ಹೇಳಿ ಸರಕಾರ ಇಡದ ಮಾಹಿತಿ ಈ ಸಮಾಜದವರು ಇಟ್ಟಿರುತ್ತಾರೆ. ಗೋಂದಳಿ ಸಮಾಜದವರು ಎಷ್ಟೇ ಕಷ್ಟ ಬಂದರು ತಮ್ಮ ಕುಲಕಸಬಿನಲ್ಲೇ ಜೀವನ ಸಾಗಿಸುತ್ತಾ ಬಂದಿರುತ್ತಾರೆ ಸ್ವಾತಂತ್ರ್ಯ ಸಿಕ್ಕು 75.ವರ್ಷಗಳಾದರೂ ಈ ಗೋಂದಳಿ ಸಮಾಜದವರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸಿಗದೆ ಇರುವುದು ಖೇದಕರ ಸಂಗತಿಯಾಗಿದೆ. ಆದ್ದರಿಂದ ಈ ಗೋಂದಳಿ ಸಮಾಜ ಸೇರಿದಂತೆ ಉಳಿದ ಒಳ ಪಂಗಡಗಳ ಸಮಾಜದ ಜನರ ಅಭಿವೃದ್ದಿಗೆ ನಾನು ಸದಾ ಸಿದ್ದನಿದ್ದೇನೆ” ಎಂದು ಶಾಸಕ ಹಾಗೂ ಉಪ ಸಭಾದ್ಯಕ್ಷ ಆನಂದ ಮಾಮನಿ ಮಾತನಾಡಿದರು.

ಅವರು ಪಟ್ಟಣದ ಗಿರಿಜನ್ನವರ ಓಣಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗೋಂದಳಿ ಸಮಾಜದ ತಾಲೂಕಾ ಮಟ್ಟದ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು “ಈ ಗೋಂದಳಿ ಸಮಾಜ ಚಿಕ್ಕದಾದರೂ ಇವರು ಮಾಡುವ ಕುಲ ಕಸಬು ದೇವಿಯ ಆರಾಧನೆ ಮಾಡುತ್ತಾ ಜೀವನ ನಡೆಸುತ್ತಿರುವ ಸಮಾಜ ಇವರಿಗೆ ಸರಕಾರದಿಂದ ಬರುವ ಎಲ್ಲ ಸಹಾಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಾನು ಪ್ರಾಮಾಣಿಕವಾದ ಪ್ರಯತ್ನ ಮಾಡುವೆ.” ಎಂದು ಮಾತನಾಡಿದರು.

- Advertisement -

ಕಾರ್ಯಕ್ರಮದ ಪ್ರಾರಂಭದಲ್ಲಿ ಗೋಂದಳಿ ಸಮಾಜದ ರಾಜ್ಯಾದ್ಯಕ್ಷರಾದ ಪುಂಡಲೀಕ ಗಣಾಚಾರಿ ಮಾತನಾಡಿ “ನಮ್ಮ ಗೋಂದಳಿ ಸಮಾಜದವರು ಕುಲ ಕಸಬನ್ನೇ ಮಾಡುತ್ತಾ ಜೀವನ ಸಾಗಿಸುತ್ತಾ ಬಂದಿದ್ದಾರೆ. ಇದಕ್ಕೆ ಕಾರಣ ನಮ್ಮ ಸಮಾಜ ಇದುವರೆಗೂ ಒಗ್ಗಟ್ಟಾಗಿಲ್ಲ ಮತ್ತು ಅರ್ಥಿಕವಾದ ಬಡತನ ಇರುವುದರಿಂದ ಈ ಸಮಾಜ ಅಭಿವೃದ್ದಿಯಾಗಿರುವುದಿಲ್ಲ.

ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ನಮ್ಮ ಸಮಾಜವನ್ನು ಎಸ್ಟಿಗೆ ಸೇರಿಸಲು ಅನುಮೋದನೆ ನೀಡಿದ್ದಾರೆ ಆದ್ದರಿಂದ ನಾವೆಲ್ಲರೂ ಅವರಿಗೆ ಮತ್ತು ಸ್ಥಳೀಯ ಶಾಸಕ ಹಾಗೂ ಉಪಸಭಾದ್ಯಕ್ಷ ಆನಂದ ಮಾಮನಿಯವರಿಗೆ ಅಭಿನಂದಿಸುವೆ” ಎಂದರು . ಇದೇ ವೇದಿಕೆಯ ಮೇಲೆ ಗೋಂದಳಿ ಸಮಾಜದವರು. ಶಾಸಕ ಹಾಗೂ ಉಪಸಭಾದ್ಯಕ್ಷ ಆನಂದ ಮಾಮನಿಯವರಿಗೆ ಮತ್ತು ಕಾಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಮೂಲೀಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳವರಿಗೆ ಮತ್ತು ಬೆಡಸೂರ ಮಠದ ಅಜ್ಜಯ್ಯ ಮಹಾಸ್ವಾಮಿಗಳನ್ನು ರಾಜ್ಯಾಧ್ಯಕ್ಷ ರಾದ ಪುಂಡಲೀಕ ಗಣಾಚಾರಿಯವರನ್ನು ಸನ್ಮಾನಿಸಿ ಗೌರವಿಸಿದರು.

ಅದೇ ರೀತಿಯಾಗಿ ಮುನವಳ್ಳಿ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್ ಎಚ್ ಸುಗತೆಯವರು ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.

ಸಮಾರಂಭದ ವೇದಿಕೆ ಮೇಲೆ ಪುರಸಭೆ ಉಪಾದ್ಯಕ್ಷ ದೀಪಕ ಜಾನ್ವೇಕರ. ಸುಭಾಸ ರಜಪೂತ. ಶಿವಾನಂದ ಹೂಗಾರ. ಸಿ ಎಸ್ ಪಟ್ಟಣಶೆಟ್ಟಿ. ಗೋಂದಳಿ ಸಮಾಜದ ಮುಖಂಡರಾದ ನಾಗಪ್ಪ ವಿ ಮಾಸ್ತರದ .ಮಾರುತಿ ಪಾರಗೆ. ನೇವೃತ್ತಿ ಗೋಂದಳೆ, ಕೃಷ್ಣಾ ಮೋರಕರ. ವಿಠಲ ಪಾಚಂಗಿ.ತುಕಾರಾಮ ಗುರದೆ.ವಾಸು ಗೋಂದಳಿ.ಮಾರುತಿ ವಾಗ್ಮೋಡೆ.ನಾರಾಯಣ ಗೊಂದಳಿ.ಶ್ರೀಕಾಂತ ಗೋಂದಳಿ.ಮಂಜುನಾಥ ಗೋಂದಳಿ. ನಾಮದೇವ ನವಲೆ. ರಮೇಶ ಗೋಂದಳಿ. ಸೇರಿದಂತೆ ಗೋಂದಳಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!