ಸಿಂದಗಿ; ೨೦೨೪-೨೦೨೫ ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-೧ರ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು ೧೨೧ ಜನ ವಿದ್ಯಾರ್ಥಿನಿಯರಲ್ಲಿ ೨೨ ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, ೪೭ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ೧೮ ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ, ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು ೩೫ ವಿದ್ಯಾರ್ಥಿನಿಯರಲ್ಲಿ ೦೭ ಅತ್ಯುನ್ನತ ಶ್ರೇಣಿ, ೧೫ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ೦೭ ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ, ವಿಜ್ಞಾನ ಭಾಗದಿಂದ ಪರೀಕ್ಷೆಗೆ ಹಾಜರಾದ ೩೩ ವಿದ್ಯಾರ್ಥಿನಿಯರಲ್ಲಿ ೦೨ ಅತ್ಯುನ್ನತ ಶ್ರೇಣಿ, ೦೫ ಪ್ರಥಮ ಶ್ರೇಣಿ, ತೆರ್ಗಡೆಯಾಗಿದ್ದಾರೆ.
ಕಾಲೇಜಿನ ಒಟ್ಟು ಫಲಿತಾಂಶ ೬೭.೫೫% ರಷ್ಟಾಗಿರುತ್ತದೆ. ಪ್ರೀತಿ ಪಾಟೀಲ ಎಂಬ ವಿದ್ಯಾರ್ಥಿನಿಯು ೫೭೩/೬೦೦ ಅಂಕಗಳನ್ನು ಪಡೆದು ಜಿಲ್ಲೆಗೆ ೧೮ನೇ ಸ್ಥಾನ ಪಡೆದಿರುತ್ತಾಳೆ. ಕನ್ನಡ ವಿಷಯದಲ್ಲಿ ನಾಲ್ಕು ವಿದ್ಯಾರ್ಥಿನಿಯರು, ಭೂಗೋಳಶಾಸ್ತ್ರ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಶಿಕ್ಷಣಶಾಸ್ತ್ರ ವಿಷಯದಲ್ಲಿ ಮೂರು ಜನ ವಿದ್ಯಾರ್ಥಿನಿಯರು, ಇತಿಹಾಸ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಮನಶಾಸ್ತ್ರ ವಿಷಯದಲ್ಲಿ ಓರ್ವ ವಿದ್ಯಾರ್ಥಿನಿ, ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿರುತ್ತಾರೆ. ಹೀಗೆ ಕಾಲೇಜಿನ ಒಟ್ಟು ಫಲಿತಾಂಶ ೬೭.೫೫% ರಷ್ಟಾಗಿರುತ್ತದೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಚೇರಮನ್ನರು ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪ್ರೀತಿ ಪಾಟೀಲ ೫೭೩/೬೦೦ ಅಂಕಗಳು, ದ್ವಿತೀಯ ಸ್ಥಾನ ಪುಷ್ಪಾ ೫೬೩/೬೦೦ ಅಂಕಗಳು, ತಯ್ಯಾಬ ಮುಲ್ಲಾ ೫೬೩/೬೦೦ ಅಂಕಗಳು, ತೃತೀಯ ಸ್ಥಾನ ತಬಸುಮ ಮುಲ್ಲಾ ೫೬೧/೬೦೦ ಅಂಕಗಳು, ವಾಣಿಜ್ಯ ವಿಭಾಗದಲ್ಲಿ ಸಲ್ಮಾ ಬೈರಾವಡಗಿ ಪ್ರಥಮ ಸ್ಥಾನ ೫೬೬/೬೦೦ ಅಂಕಗಳು, ದ್ವಿತೀಯ ಸ್ಥಾನ ವೈಷ್ಣವಿ ಶಾಸ್ತಿç ೫೫೪/೬೦೦ ಅಂಕಗಳು, ಸವಿತಾ ಯಂಕAಚಿ ೫೫೪/೬೦೦ ಅಂಕಗಳು, ತೃತೀಯ ಸ್ಥಾನ ಸಿದ್ದಮ್ಮ ತಳವಾರ ೫೪೫/೬೦೦ ಅಂಕಗಳು, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಕಾವೇರಿ ಬಮ್ಮನಹಳ್ಳಿ ೫೨೦/೬೦೦ ಅಂಕಗಳು, ದ್ವಿತೀಯ ಸ್ಥಾನ ಲಕ್ಕವ್ವ ಬಬಲಾದ ೫೧೩/೬೦೦ ಅಂಕಗಳು, ತೃತೀಯ ಸ್ಥಾನ ಚೈತ್ರಾ ಪಾಣಿಗಾಂವ ೪೫೧/೬೦೦ ಅಂಕಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.