ಮುನವಳ್ಳಿ– ” ಮಕ್ಕಳಿಗೆ ಉತ್ತಮ ಕಲಿಕಾ ಸಾಮರ್ಥ್ಯವನ್ನು ಬೆಳೆಸುವ ದೃಷ್ಟಿಯಿಂದ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮವು ಶಿಕ್ಷಕರಿಗೆ ಪ್ರಯೋಜನಕಾರಿ.
ಕೋವಿಡ್ನಿಂದ ಉಂಟಾಗಿರುವ ಕಲಿಕಾ ಹಿನ್ನಡೆಯನ್ನು ಹೊರತು ಪಡಿಸಿ ವಿಮರ್ಶಾತ್ಮಕ ಚಿಂತನೆ, ಆವಿಷ್ಕಾರ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲು ಪ್ರತಿ ವಿಷಯದಲ್ಲಿ ಪಠ್ಯಕ್ರಮದ ವಿಷಯವಸ್ತುವನ್ನು ಅದರಲ್ಲಿನ ಪ್ರಮುಖ ಅಂಶಗಳಿಗೆ ವಿಷಯವಾರು ತರಗತಿವಾರು ಪರಿಷ್ಕೃತ ಕಲಿಕಾ ಫಲಗಳನ್ನು ಒಳಗೊಂಡ ಕಲಿಕಾ ಸಾಮಗ್ರಿಗಳನ್ನು ಸಿದ್ದಪಡಿಸಿ ಕಲಿಕಾ ಚೇತರಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ನಿರಂತರ ತರಬೇತಿ ಮತ್ತು ವಿಷಯ ಅರಿತಂತೆ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಕಲಿಕಾ ಚೇತರಿಕೆ ಅನುಕೂಲವಾಗುತ್ತದೆ.
ಇದು ಎಲ್ಲ ತರಗತಿಗಳ ಶಿಕ್ಷಕರಿಗೆ ಜರುಗುತ್ತಿದ್ದು ಇದರ ಸದುಪಯೋಗ ತರಗತಿಯ ಕೊಠಡಿಗಳಲ್ಲಿ ಜರುಗಲಿ”ಎಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ೪ ಮತ್ತು ೫ ನೆಯ ತರಗತಿ ಪರಿಸರ ಅಧ್ಯಯನ ಮತ್ತು ಇಂಗ್ಲೀಷ ವಿಷಯಗಳ ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಫ್.ಜಿ.ನವಲಗುಂದೆ. ಎಸ್.ವೈ.ನಿಪ್ಪಾಣಿ, ಎನ್.ಎ.ಹೊನ್ನಳ್ಳಿ, ರಫೀಕ ಮುರಗೋಡ, ರತ್ನಾ ಸೇತಸನದಿ ಮಹಾದೇವಿ ಕುಂಬಾರ, ಶಿವನಾಯ್ಕರ ಸೇರಿದಂತೆ ತರಬೇತಿಯಲ್ಲಿ ಸವದತ್ತಿ ತಾಲೂಕಿನ ಮುನವಳ್ಳಿ ಹೂಲಿಕಟ್ಟಿ, ಅರಟಗಲ್ ಸಿಂದೋಗಿ, ಹೂಲಿ, ಕರೀಕಟ್ಟಿ ಯಕ್ಕುಂಡಿ, ಮುರಗೋಡ, ಹೊಸೂರ, ಚಚಡಿ ಸವದತ್ತಿ ವಲಯದ ವಿವಿಧ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ಶಿಕ್ಷಕ ಶಿಕ್ಷಕಿಯರಾದ ಶಶಿಕಾಂತ ಜೋಶಿ.ಎಪ್.ಎನ್.ಹೂಲಿ.ಶ್ರೀಮತಿ ಎಸ್.ವ್ಹಿ.ದೇಶಪಾಂಡೆ.ಎಚ್.ಜಿ.ಗದಿಗೆನ್ನವರ.ನಾಗನೂರ.ಎಚ್.ಜಿ.ಬಾಳೇಕುಂದರಗಿ, ಹಿರೇಮಠ, ಅಬಚಿ, ಬಂಡಿವಡ್ಡರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮೂಲಿಮನಿ, ಡಿ.ಎ.ಮೇಟಿ, ನಿರಂಜನ ಮೆಳವಂಕಿ. ಕಿರಣ ಕುರಿ ಶಿಕ್ಷಕ ಪತ್ತಿನ ಸಂಘದ ನಿರ್ದೇಶಕರಾದ ಸಿ.ಬಿ.ಮೇಟ್ಯಾಲ.ಸ್ಕೌಟ ಮತ್ತು ಗೈಡ್ಸನ ಜನಕಟ್ಟಿ. ಪ್ರಶಾಂತ ಹಂಪಣ್ಣವರ.ವೈ.,ಎಸ್.ಬಳಿಗಾರ.ವಿಠ್ಠಲ ಮುನವಳ್ಳಿ.ಶ್ರೀಮತಿ ಕೆ.ಟಿ.ಸುಭಾಷಿಣಿ, ನರಸಿಂಗನ್ನವರ, ಎಂ.ಕೆ.ತಳವಾರ, ಎ.ಜಿ.ಜನಕಟ್ಟಿ, ಜೆ.ಬಿ.ತಳವಾರ, ಎಲ್.ಎಚ್.ಪಾಟೀಲ ಸೇರಿದಂತೆ ಶಿಕ್ಷಕ ಶಿಕ್ಷಕರಿಯರು ಎರಡು ದಿನಗಳ ಕಾಲ ತರಬೇತಿ ಪಡೆದುಕೊಂಡರು.
ಎಫ್.ಜಿ.ನವಲಗುಂದ ಸ್ವಾಗತಿಸಿದರು. ಎನ್.ಎ.ಹೊನ್ನಳ್ಳಿ ನಿರೂಪಿಸಿದರು. ಎಸ್.ವೈ.ನಿಪ್ಪಾಣಿ ವಂದಿಸಿದರು.