ಬೀದರ: ಬೀದರ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಯಲ್ಲಿ ಮುನಿಸಿಕೊಂಡಿರುವ ಸೂರ್ಯಕಾಂತ್ ನಾಗಮಾರಪಳ್ಳಿ ಜೆಡಿಎಸ್ ಸೇರುವುದು ಬಹುತೇಕ ಫಿಕ್ಸ್ ಆದಂತಾಗಿದೆ.
ದಳಪತಿಗಳ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಮಾಡಿದ ಸೂರ್ಯಕಾಂತ್ ಇಂದು ಬೆಂಗಳೂರಿನಲ್ಲಿ ಸೂರ್ಯಕಾಂತ್ ಜೆಡಿಎಸ್ ಸೇರುತ್ತಾರೆಯೇ ಎಂಬ ಊಹಾಪೋಹಗಳು ಶುರುವಾಗಿವೆ.
ಸಾಮಾಜಿಕ ಜಾಲತಾಣದಲ್ಲಿ ಸೂರ್ಯಕಾಂತ್ ಪೋಟೋ ಇರುವ ಜೆಡಿಎಸ್ ಬ್ಯಾನರ್ ಪೋಟೋಗಳು ವೈರಲ್ ಆಗಿವೆ.
ಇತ್ತ ನಾಗಮಾರಪಳ್ಳಿ ಬೆಂಬಲಿಗರು ಜೆಡಿಎಸ್ ಪೋಟೋಗಳನ್ನು ವೈರಲ್ ಮಾಡುತ್ತಿದ್ದರೆ ಸೂರ್ಯಕಾಂತ್ ನಾಗಮಾರಪ್ಪಳ್ಳಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ರಾಜ್ಯ ಬಿಜೆಪಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಜೇನುಗೂಡಿಗೆ ಕಲ್ಲೆಸೆದಂತೆ ಆಗಿದ್ದು ಅತೃಪ್ತರ ಸಂಖ್ಯೆ ಹಾಗೂ ಪಕ್ಷ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಸೂರ್ಯಕಾಂತ್ ಅವರು ಕೂಡ ಟಿಕೆಟ್ ಸಿಗದೆ ನಿರಾಶರಾಗಿದ್ದು ಬಿಜಪಿಗೆ ಗುಡ್ ಬೈ ಹೇಳಿ ಜೆಡಿಎಸ ಸೇರಲಿದ್ದಾರೆ ಎಂಬ ಗುಮಾನಿಯಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಗರಿಗೆದರಿದೆ.
ವರದಿ: ನಂದಕುಮಾರ ಕರಂಜೆ, ಬೀದರ