ಹೊಸದಿಲ್ಲಿ – ಭಾರತದಲ್ಲಿ ಮುಸಲ್ಮಾನರು ಸುರಕ್ಷಿತವಾಗಿದ್ದರೂ ಕೂಡ ಅವರು ಸುರಕ್ಷಿತವಾಗಿಲ್ಲ ಎಂಬ ಅಪಪ್ರಚಾರ ಮಾಡುತ್ತಿರುವ ಎಡಚರು, ದೇಶ ವಿರೋಧಿಗಳಿಗೆ ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನವೊಂದರ ಮೇಲೆ ಮುಸ್ಲಿಮ್ ಗೂಂಡಾಗಳು ದಾಳಿ ಮಾಡಿ ಧ್ವಂಸ ಮಾಡುತ್ತಿರುವ ವೀಡಿಯೋ ಒಂದು ಇವರ ನಿಜ ಬಣ್ಣ ಬಯಲು ಮಾಡುವಂತಿದೆ.
ಕೃಷ್ಣ ಹಾಗೂ ಶಿವನ ಮೂರ್ತಿಗಳನ್ನು ಧ್ವಂಸ ಮಾಡಿ ಗೂಂಡಾಗಳು ಕೇಕೆ ಹಾಕುತ್ತ ಘೋಷಣೆಗಳನ್ನು ಕೂಗುತ್ತ ಇಡೀ ದೇವಾಲಯವನ್ನೇ ನಾಶ ಮಾಡುತ್ತಿರುವುದು ಪಾಕಿಸ್ತಾನದಲ್ಲಿ ಹಿಂದೂಗಳ ಜೀವನ ಭೀಕರವಾಗಿರುವುದನ್ನು ಸ್ಪಷ್ಟಪಡಿಸುತ್ತದೆ.
ಮೊದಲು ಸುಂದರ ವಿಶಾಲ ದ್ವಾರವನ್ನು ನಾಶ ಮಾಡಿದ ದುರುಳರು ಒಳ ಹೊಕ್ಕು ಮೂರ್ತಿಗಳ ಮುಖಕ್ಕೆ ಕಬ್ಬಿಣದ ರಾಡಿನಿಂದ ಹೊಡೆಯುತ್ತ ಅಟ್ಟಹಾಸ ಮೆರೆಯುತ್ತಿರುವುದು ಪರಿಸ್ಥಿತಿ ಭೀಕರತೆಯನ್ನು ಸಾರುತ್ತದೆ.
ಮುಸ್ಲಿಮರು ತಮ್ಮ ಸಹೋದರರು ಎನ್ನುವ ಕರ್ನಾಟಕದ ಡಿಕೆ ಶಿವಕುಮಾರ, ಸಿದ್ದರಾಮಯ್ಯ, ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ದೀದಿ, ದಿಗ್ವಿಜಯ್ ಸಿಂಗ್, ಸೋ ಕಾಲ್ಡ್ ಕಮ್ಮಿನಿಷ್ಠರು, ಬುದ್ಧಿಜೀವಿಗಳು ಇದನ್ನು ನೋಡಬೇಕು. ಹಿಂದೂಗಳ ಪರಿಸ್ಥಿತಿ ಪಾಕಿಸ್ಥಾನದಲ್ಲಿ ಭೀಕರವಾಗಿದೆ ಎಂಬ ಸತ್ಯವನ್ನು ಮನಗಂಡೂ ಕೂಡ ಏನು ಮಾಡಲಾಗದ ಅಸಹಾಯಕತೆ ಇವರಲ್ಲಿ ತುಂಬಿಕೊಂಡಿದ್ದು ಅಧಿಕಾರಕ್ಕಾಗಿ ಏನನ್ನೂ ಇವರು ಮಾಡಲು ಹೇಸುವುದಿಲ್ಲ ಎಂಬುದನ್ನೂ ಸಾರಿ ಹೇಳುತ್ತದೆ.