spot_img
spot_img

ಸರ್ಕಾರಿ ನೌಕರರು ಸಾರ್ವಜನಿಕರಿಗೆ ಅಗತ್ಯ ಸಹಾಯ ಸಹಕಾರ ನೀಡಬೇಕು – ಬಿಇಓ ಮನ್ನಿಕೇರಿ

Must Read

spot_img

ಮೂಡಲಗಿ: ಸರಕಾರಿ ನೌಕರರು ಶೃದ್ಧಾಭಕ್ತಿಯಿಂದ ಸಾರ್ವಜನಿಕ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದಾಗ ಮಾತ್ರ ಜನ ಮನ್ನಣೆ ದೊರೆಯುತ್ತದೆ. ತಳಮಟ್ಟದಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಅಗತ್ಯ ಸಹಕಾರ ಸಹಾಯ ನೀಡಿದಾಗ ಮಾತ್ರ ನಿವೃತ್ತಿ ಸಂದರ್ಭದಲ್ಲಿ ಸನ್ಮಾನಗಳಿಸಲು ಸಾಧ್ಯವಾಗುವದು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.

ಅವರು ಸಮೀಪದ ಕುಲಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ನಿವೃತ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸುಧೀರ್ಘ ಸೇವಾವಧಿಯಲ್ಲಿ ಅನೇಕ ಕಡೆ ಕಾರ್ಯನಿರ್ವಹಿಸುವ ಮಹತ್ತರವಾದ ಕಾರ್ಯವು ಸರಕಾರಿ ನೌಕರರ ಮೇಲಿರುತ್ತದೆ. ಸಾರ್ವಜನಿಕ ಬದುಕಿನೊಂದಿಗೆ ಸರಕಾರಿ ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಿಸಿ ಉಳಿದ ಅವಧಿಯಲ್ಲಿ ಸ್ಥಳೀಯರೊಂದಿಗೆ ಅನ್ಯೋನ್ಯತೆಯಿಂದ ಬಾಳಬೇಕು. ಶಿಕ್ಷಣ ಇಲಾಖೆಯ ರುದ್ರಪ್ಪ ಮಹಾಲಿಂಗಪೂರ, ಜಿ.ಆರ್.ಬಿ.ಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿರುಪಾಕ್ಷ ಪತ್ತಾರ ಅವರುಗಳು ಈ ಭಾಗದಲ್ಲಿ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರ ಸೇವಾಕಾರ್ಯಗಳನ್ನು ಪ್ರಶಂಸನೀಯವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಜನಮನ್ನಣೆ ಪಡೆಯಲು ಸಾಧ್ಯವಾಗಿದೆ. ಪಾರಿಜಾತ ಕುಲಗೋಡ ಗ್ರಾಮವು ಮಾದರಿಯ ಗ್ರಾಮವೆಂದು ರಾಷ್ಟ್ರೀಯ ಮಾನ್ಯತೆ ಹೊಂದಿರುವುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘಟಕ, ಮಾಜಿ ತಾಪಂ ಸದಸ್ಯ ಸುಭಾಸ ವಂಟಗೋಡಿ ಮಾತನಾಡಿ, ನಿವೃತ್ತಿ ಹೊಂದಿದ ಎಲ್ಲರಿಗೂ ನಾಗರಿಕ ಸನ್ಮಾನ ದೊರೆಯುವುದಿಲ್ಲ. ಜನರ ಮನ ಗೆದ್ದವರಿಗೆ ಮಾತ್ರ ನಾಗರಿಕ ಸನ್ಮಾನ ದೊರೆಯುವದು. ಇಬ್ಬರು ಸನ್ಮಾನಿತರು ನಮ್ಮ ಗ್ರಾಮಕ್ಕೆ ವಿವಿಧ ರೀತಿಯಲ್ಲಿ ನೀಡಿರುವ ಕೊಡುಗೆಗಳು ಸ್ಮರಣೀಯವಾಗಿವೆ ಎಂದರು.

ಸಮಾರoಭದಲ್ಲಿ ಬಸನಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘಟನೆಯ ಎಸ್.ಎಮ್ ಲೋಕನ್ನವರ, ಎಮ್.ವಾಯ್ ಸಣ್ಣಕ್ಕಿ, ಎ.ಪಿ ಪರಸನ್ನವರ, ಎಮ್.ಜಿ. ಮಾವಿನಗಿಡದ, ರಾಚಪ್ಪ ಅಂಗಡಿ ಮಾತನಾಡಿ, ನಿವೃತ್ತರ ಸೇವಾ ಕಾರ್ಯವೈಖರಿ ಹಾಗೂ ನಿವೃತ್ತಿಯ ಜೀವನದಲ್ಲಿ ಸಾರ್ವಜನಿಕ ಬದುಕಿನಲ್ಲಿ ಯಶಸ್ವಿ ಹೊಂದುವ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ರುದ್ರಪ್ಪ ಮಹಾಲಿಂಗಪೂರ, ವಿರುಪಾಕ್ಷ ಪತ್ತಾರ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಕುಲಗೋಡ ಗ್ರಾಮಸ್ಥರ ಸಹಾಯ ಸಹಕಾರ ಅತ್ಯಮೂಲ್ಯವಾಗಿತ್ತು. ಸಾರ್ವಜನಿಕ ಬದುಕಿನಲ್ಲಿ ನಮ್ಮಿಂದಾಗುವ ಕಾರ್ಯಗಳನ್ನು ಇನ್ನು ಮುಂದೆಯೂ ಮಾಡುವುದಾಗಿ ಹೇಳಿದರು.

ಕುಲಗೋಡ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳಿoದ ನಾಗರಿಕ ಸನ್ಮಾನ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ಘಟಕದ ಪದಾಧಿಕಾರಿಗಳಿಗೆ ಸದಸ್ಯರಿಗೆ ನಾಗರಿಕ ಸನ್ಮಾನ ನಡೆಯಿತು.

ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವಿಮಲಾ ಸಸಾಲಟ್ಟಿ. ನೀರಾವರಿ ಇಲಾಖೆಯ ಎಇಇ ಕಾಂತು ಜಾಲಿಬೇರಿ, ಪಿಕೆಪಿಎಸ್ ಅಧ್ಯಕ್ಷರಾದ ಅಜ್ಜಪ್ಪ ಗಿರಡ್ಡಿ, ವೆಂಕಣ್ಣಾ ಚನ್ನಾಳ, ತಾಪಂ ಅಕ್ಷರ ದಾಸೋಹ ನಿರ್ದೇಶಕ ಎ.ಬಿ ಮಲಬನ್ನವರ, ಢವಳೇಶ್ವರ ಗ್ರಾಪಂ ಅಧ್ಯಕ್ಷ ರಂಗಪ್ಪ ಕಳ್ಳಿಗುದ್ದಿ, ಬಸು ಯರಗಟ್ಟಿ. ಪಿ.ಡಿ.ಓ ಸದಾಸಿವ ದೇವರ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶಿವಪುತ್ರ ಲಕ್ಷ್ಮೇಶ್ವರ , ಮಲ್ಲಿಕಾರ್ಜುನ ತಿಪ್ಪಿಮನಿ, ಶ್ರೀಪತಿ ಗಣಿ, ದತ್ತು ಕುಲಕರ್ಣಿ, ಮಾರುತಿ ಬಾಗಿಮನಿ, ಪ್ರಶಾಂತ ಒಂಟಗೂಡಿ, ಪ್ರಕಾಶ ಹಿರೆಮೇತ್ರಿ, ಯಮನಪ್ಪ ಸಣ್ಣಮೇತ್ರಿ, ಲಕ್ಷ್ಮಣ ಗುಬ್ಬನ್ನವರ, ಬಸು ಬಿಲಕುಂದಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ತಾಲೂಕಾಧ್ಯಕ್ಷ ಎಲ್.ಎಮ್ ಬಡಕಲ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಪಿ.ಬಿ ಕುಲಕರ್ಣಿ, ಬಿ.ಎ ಡಾಂಗೆ, ಬಿ.ಬಿ ಕೆವಟಿ, ಬಿ.ಎಲ್ ನಾಯಿಕ, ವಾಯ್.ಡಿ ಝಲ್ಲಿ, ಎಲ್.ಎಮ್ ಬೂಮನ್ನವರ, ಶಿವಾನಂದ ಕುರಣಗಿ, ಗೋವಿಂದ ಸಣ್ಣಕ್ಕಿ, ರಮೇಶ ಬುದ್ನಿ, ಸಿಆರ್‌ಪಿಗಳಾದ ವಿ.ಆರ್ ಬರಗಿ, ವ್ಹಿ. ಆಯ್ ಮಿಲ್ಲಾನಟ್ಟಿ, ಹನಮಂತ ಬೆಳಗಲಿ, ಪ್ರಧಾನಗುರಮಾತೆ ಮೀರಾ ಕುಲಕರ್ಣಿ, ಎಫ್.ಡಿ ದೊಡಮನಿ, ಸಂತೋಷ ಪಾಟೀಲ, ಎಸ್.ಎಮ್ ದಬಾಡಿ ಹಾಗೂ ಗ್ರಾಮಸ್ಥರು ಶಾಲಾ ಶಿಕ್ಷಕರು ಇದ್ದರು.

ಸಮಾರಂಭದಲ್ಲಿ ದುಂಡಪ್ಪ ಹರಿಜನ ನಿರೂಪಿಸಿದರು. ಶಂಕರ ಹಾದಿಮನಿ ಸ್ವಾಗತಿಸಿ, ಸುರೇಶ ತಳವಾರ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!