spot_img
spot_img

ಸರ್ಕಾರದ ಸೌಲಭ್ಯ ಬರೀ ಕಾಗದದಲ್ಲಿ – ಅಶೋಕ ಮನಗೂಳಿ

Must Read

spot_img
- Advertisement -

ಸಿಂದಗಿ: ಇಡೀ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ಆವರಿಸಿ ಜನಜೀವನ ಅಸ್ತವ್ಯಸ್ಥಗೊಂಡಿದೆ ಈ ಸಂಕಷ್ಟದ ಸಂದರ್ಭದಲ್ಲಿ ಬಡ ಜನರು ದುಡಿಮೆಯಿಲ್ಲದೆ ಅನೇಕ ತೊಂದರೆಗಳಿಗೆ ಗುರಿಯಾಗಿ ತಮ್ಮ ಉಪಜೀವನವನ್ನು ನಡೆಸಲು ಪರದಾಡುತ್ತಿದ್ದಾರೆ ಆದರೆ ಸರಕಾರ ಬರೀ ದಾಖಲೆಗಳಲ್ಲಿ ಸೌಲಭ್ಯಗಳನ್ನು ನೀಡುತ್ತಿದೆ ಜನರ ಕೈಗಳಿಗೆ ಬರುತ್ತಿಲ್ಲ ಎಂದು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಆರೋಪಿಸಿದರು.

ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಕಾಂಗ್ರೆಸ್ ಸಮಿತಿ ಹಾಗೂ ಮನಗೂಳಿ ಫೌಂಡೇಶನ್ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮೆಡಿಕಲ್ ಕಿಟ್ ಹಾಗೂ ಆಹಾರದ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕಳೆದ ಬಾರಿಯ 1ನೇ ಅಲೆ ಕೋವಿಡ್ ಸಂದರ್ಭದಲ್ಲಿ ಕೆಲವರಿಗೆ ವಿಶೇಷ ಪ್ಯಾಕೆಜ್‍ಗಳನ್ನು ಘೋಷಣೆ ಮಾಡಿತ್ತು ಆದರೆ ಕೆಲವರಿಗೆ ಬಂತು ಇನ್ನೂ ಕೆಲವರ ಕೈ ಸೇರುವ ಮುನ್ನ ಅವಧಿ ಮುಗಿದಿದ್ದರಿಂದ ಬಡ ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗಿದ್ದರು. ಈ ಬಾರಿಯ ಪ್ಯಾಕೇಜ ಘೋಷಣೆ ಮಾಡಿದೆ ನೂರೆಂಟು ನಿಯಮ ಮತ್ತು ದಾಖಲೆಗಳನ್ನು ಕ್ರೂಢೀಕರಣದಲ್ಲಿಯೇ ಅಧಿಕಾರಿಗಳು ಸಮಯಕ್ಕೆ ಬಾರದೇ ಅಲೆದಾಡಿಸುತ್ತಿರುವದರಿಂದ ಬೇಸತ್ತು ದಾಖಲೆ ಕ್ರೂಢೀಕರಣ ಕೈಬಿಡುವ ಪ್ರಸಂಗ ಬಂದೊದಗಿದ್ದು ಇದರಿಂದ ದೇವರು ವರ ಕೊಟ್ಟರೂ ಪೂಜಾರಿ ವರ ನೀಡಿಲ್ಲವೆಂಬಂತಾಗಿದೆ ಕಾರಣ ನಿಯಮಗಳನ್ನು ಸರಳೀಕರಣ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ ಮಾತನಾಡಿ, ಕೋವಿಡ್ ಆವರಿಸಿ ಕೂಲಿಕಾರ್ಮಿಕರಿಗೆ ಕೆಲಸವಿಲ್ಲದೆ ಸೌಲಭ್ಯಗಳಿಗಾಗಿ ದಾಖಲೆಗಳನ್ನು ಪಡೆಯಲು ಆಯಾ ಇಲಾಖೆಗಳಿಗೆ ತೆರಳಿದರೆ ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿಗಳಿಲ್ಲದೆ ಖಾಲಿ ಖಾಲಿಯಾಗಿ ಇರುವುದರಿಂದ ದಾಖಲೆಗಳು ಸಿಗುತ್ತಿಲ್ಲ. ಕಾರಣ ಸರಕಾರ ಅಧಿಕಾರಿಗಳ ಸಮಿತಿ ರಚಿಸಿ ಗ್ರಾಮಗಳಲ್ಲಿ ಬೀಡು ಬಿಟ್ಟು ಸಮೀಕ್ಷೆ ನಡೆಸಿ ಯೋಗ್ಯ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಿಕೊಡಬೇಕು ಮತ್ತು ಕೊರೋನಾ ಸೋಂಕಿಗೆ ಸರಕಾರವೇ ಬೆಚ್ಚಿ ಬಿದ್ದಿದೆ ಇದರಿಂದ ಘೋಷಣೆ ಮಾಡಿದ ಪ್ಯಾಕೇಜ್ ದಾಖಲೆಗಳಲ್ಲಿ ಸೃಷ್ಟಿಸಿ ಹಣ ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ದೂರಿದರು.

- Advertisement -

ಇದೆ ಸಂದರ್ಭದಲ್ಲಿ ಷಣ್ಮುಖಯ್ಯ ಹಿರೇಮಠ,  ಚೇತನಗೌಡ ಪಾಟೀಲ,  ರುದ್ರಗೌಡ ಪಾಟೀಲ,  ಬಸು ನಾಯ್ಕೊಡಿ,  ಶರಣು ತಳಗೇರಿ,  ಬಸವರಾಜ ಮೋರಟಗಿ,  ರಮೇಶ ತಳಗೇರಿ,  ಪಕ್ಕು ಮುಜಾವರ, ಜಗದೀಶ್  ಹೂನಳ್ಳಿ, ಜೀಲಾನಿ ನಾಟಿಕಾರ,  ಯಮನುರ ಸುಂಬಡ ಸೇರಿದಂತೆ ಹಲವರಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group