ಬೀದರ – ಆಕ್ಸಿಜನ್ ಅನ್ನು ಕೇವಲ ನೇತು ಹಾಕಿದರೆ ಪ್ರಯೋಜನವಿಲ್ಲ ರೋಗಿಯ ದೇಹದೊಳಗೆ ಹೋಗಲು ಬಿಟ್ಟರೆ ಬದುಕುತ್ತಾನೆ ಹಾಗೆಯೇ ರಾತ್ರಿ ಹೊತ್ತು ನಾಲ್ಕು ತಾಸು ಕರೆಂಟ್ ಕೊಟ್ಟರೆ ರೈತ ಹೇಗೆ ಬದುಕಲು ಸಾಧ್ಯ ಎಂದು ಶ್ರೀ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಾರಾಂಜಾ ಸಕ್ಕರೆ ಕಾರ್ಖಾನೆ ಯಲ್ಲಿ ಕಬ್ಬು ನುರಿಕೆ ಪ್ರಾರಂಭದ ಪೂಜೆ ಮಾಡುವ ಸಂದರ್ಭದಲ್ಲಿ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಅಲ್ಲಿ ನೆರೆದ ರೈತರನ್ನು ಉದ್ದೇಶಿಸಿ ಮಾತನಾಡಿದರು
ರೈತರಿಗೆ ಸಂಪರ್ಕವಾಗಿ ವಿದ್ಯುತ್ ಪೂರೈಕೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಳಿಗ್ಗೆ ಸಮಯದಲ್ಲಿ ರೈತರಿಗೆ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಿದರೆ ಮಾತ್ರ ರೈತನ ಬದುಕು ಚೆನ್ನಾಗಿ ಆಗುತ್ತದೆ ಎಂದರು.
ರೈತರು ಸರ್ಕಾರದ ಬೆನ್ನೆಲುಬು ಎಂಬುದನ್ನು ಗಮನದಲ್ಲಿಟ್ಟು ಕೊಂಡು ಸರ್ಕಾರ ನಡೆಸಬೇಕು ಎಂದ ಶ್ರೀಗಳು, ನಾನೂ ಕೂಡ ಒಬ್ಬ ರೈತನಾಗಿ ಹೇಳುತ್ತೇನೆ. ಕನಿಷ್ಠ ಹತ್ತು ತಾಸಾದರೂ ರೈತರಿಗೆ ವಿದ್ಯುತ್ ನೀಡಬೇಕು ಆಗಲೇ ತೊಗರಿ, ಜೋಳ, ಕಬ್ಬು ಬೆಳೆಗಳು ಬದುಕುತ್ತವೆ ಇನ್ನಾದರೂ ಸರ್ಕಾರ ಎಚ್ಚತ್ತುಕೊಂಡು ಕೆಲಸ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಶ್ರೀ ಗಳು ಎಚ್ಚರಿಕೆ ನೀಡಿದರು.
ವರದಿ: ನಂದಕುಮಾರ ಕರಂಜೆ, ಬೀದರ