spot_img
spot_img

ಸರ್ಕಾರಿ ನೌಕರಿ ಆಮಿಷ: ಡೋಂಗಿ ಬಾಬಾ ಅಂದರ್

Must Read

spot_img

ಇವ್ಹಿಎಂ ಸ್ವಾಮಿಯ ಕರ್ಮಕಾಂಡ ಬಯಲು

ಮೂಡಲಗಿ: ಸರ್ಕಾರಿ ನೌಕರಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ಅಮಾಯಕರಿಂದ ಕೋಟ್ಯಂತರ ರೂಪಾಯಿ ಟೋಪಿ ಹಾಕಿರುವ ಖತರ್ನಾಕ್ ಸ್ವಾಮಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧನಕ್ಕೀಡಾಗಿರುವ ವಂಚಕ ಸ್ವಾಮಿಯಾಗಿದ್ದು, ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. ಹಣಕಾಸು ವ್ಯವಹಾರ, ಮೋಸ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ತಲೆಮರೆಸಿಕೊಂಡಿದ್ದ  ಈತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳಲ್ಲಿ ನೌಕರಿ ಕೊಡಿಸುವ ನೆಪದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆ, ಮಹಾರಾಷ್ಟ್ರ, ಗೋವಾ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ನಿರುದ್ಯೋಗಿ ಯುವಕರಿಗೆ ಟೋಪಿ ಹಾಕುತ್ತಿದ್ದ ಖತರ್ನಾಕ್ ಸ್ವಾಮಿಯಾದ ಅಲ್ಲಮಪ್ರಭು ಹಿರೇಮಠ ಅವನಿಗೆ ಹಣ ನೀಡಿದವರು ಕೇಳಲು ಹೋದ ನೊಂದ ಯುವಕರು ಹಾಗೂ ಅವರ ಕುಟುಂಬಸ್ಥರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ, ಹಲ್ಲೆ ಮಾಡಿದ ಆರೋಪ ಮೋಸ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಲಗಿ ಪೊಲೀಸರು ಸ್ವಾಮಿಯನ್ನು ಬಂಧಿಸಿ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಮೂಲತಃ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದವನಾದ ಅಲ್ಲಮಪ್ರಭು ಹಿರೇಮಠ  ನೂರಾರು ಯುವಕರಿಗೆ ಪಂಗನಾಮ ಹಾಕುತ್ತಿದ್ದ. ತನಗೆ ಎಲ್ಲ ರಾಜಕೀಯ ನಾಯಕರ ಸಂಪರ್ಕವಿದ್ದು, ನನ್ನ ದೂರವಾಣಿ ಕರೆ ಹೋದ ಕೂಡಲೇ ಗಢಗಢ ನಡುಗುತ್ತಾರೆ. ನಿಮ್ಮ ಕೆಲಸ ಆಗುವುದು ನಿಶ್ಚಿತ. ನಿಮಗೆ ನೀವು ಬಯಸಿದ ಸ್ಥಳದಲ್ಲಿ ನೌಕರಿ ಕೊಡಿಸುತ್ತೇನೆ ಎಂದು ನೊಂದ ನಿರುದ್ಯೋಗಿ ಯುವಕರಿಗೆ ನಂಬಿಕೆ ಬರುವಂತೆಯೇ ಹೇಳುತ್ತಿದ್ದ ವಂಚಕ ಸ್ವಾಮಿಯು ಕೆಲ ದಿನಗಳಿಂದ ಮೂಲ ಸ್ಥಳದಿಂದ ನಾಪತ್ತೆಯಾಗಿದ್ದನೆಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕನ್ನಡ ಖಾಸಗಿ ವಾಹಿನಿಯೊಂದು ನಡೆಸಿದ 47 ನಿಮಿಷಗಳ ಸ್ಟ್ರಿಂಗ್ ಆಪರೇಷನ್‍ದಲ್ಲಿ ಈ ಖತರ್ನಾಕ್ ಸ್ವಾಮಿಯ ಕರ್ಮಕಾಂಡವನ್ನು ಬಯಲು ಮಾಡಿದೆ. ಇವ್ಹಿಎಂ ಬಾಬಾ ಎಂದೇ ಖ್ಯಾತನಾಗಿರುವ ಅಲ್ಲಮಪ್ರಭು ಹಿರೇಮಠ ಅವನನ್ನು ಬಿಬಿಎಂಪಿ ಚುನಾವಣೆಯ ಸಂಬಂಧ ಸ್ಟಿಂಗ್ ಆಪರೇಷನ್‍ಗೆ ಒಳಪಡಿಸಿತ್ತು. ಜೊತೆಗೆ ಇವ್ಹಿಎಂ ಹ್ಯಾಕ್ ಮಾಡತೀವಿ. ಚುನಾವಣೆ ಆಕಾಂಕ್ಷಿಗಳೇ ಈತನ ಟಾರ್ಗೆಟ್ ಆಗಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಯಾರನ್ನೇ ನಿಲ್ಲಿಸಿದರೂ ಅವರನ್ನು ನಾನೇ ಗೆಲ್ಲಿಸಿಕೊಡ್ತೀನಿ. ಅದಕ್ಕಾಗಿ 3 ಕೋಟಿ ರೂ. ನೀಡಬೇಕು. ಮೊದಲಿಗೆ ಅರ್ಧದಷ್ಟು ಹಣವನ್ನು ನೀಡಬೇಕೆಂದು ಚುನಾವಣಾ ಆಕಾಂಕ್ಷಿಗಳಿಗೆ ಹೇಳಿರುವ ಮಾತುಗಳು ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

ಬೇಕಾದವರನ್ನು ಗೆಲ್ಲಿಸಿಕೊಡ್ತಿನಿ. ಬೇಡವಾದವರನ್ನು ಸೋಲಿಸುವ ಶಕ್ತಿ ನನಗಿದೆ. ನನ್ನೊಂದಿಗೆ ಅಭಿಷೇಕ ರಾಜನ್ ಪಾಂಡೆ ಮತ್ತಿತರ ಇವ್ಹಿಎಂ ಹ್ಯಾಕ್ ಮಾಡುವ ತಂಡವೇ ಇದೆ ಎಂದು ಹೇಳಿಕೊಂಡಿದ್ದನೆಂದು ತಿಳಿದುಬಂದಿದೆ.

ಕಳೆದ 4 ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಅಲ್ಲಮಪ್ರಭು ಹಿರೇಮಠನನ್ನು ಅಲ್ಲಿನ ಪೊಲೀಸರು ಬಂಧಿಸಿರುವ ಘಟನೆಯು ಕೂಡ ನಡೆದಿದೆ. ಬೋಗಸ್ ಪಿಎಚ್‍ಡಿ ಪ್ರಮಾಣ ಪತ್ರವನ್ನು ಹೊಂದಿರುವ ಈ ಸ್ವಾಮಿ ಎಲ್ಲ ಕಡೆಗಳಲ್ಲೂ ಅಕ್ರಮ ಚಟುವಟಿಕೆಗಳ ಬೋಗಸ್ ದಂಧಾ ನಡೆಸುತ್ತಿರುವುದು ಕೂಡ ತಿಳಿದುಬಂದಿದೆ.

ಇವ್ಹಿಎಂ ಮಶೀನ್ ಹ್ಯಾಕ್ ಮಾಡುವ ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ನಯವಂಚಕ ಸ್ವಾಮಿಗೆ ದೇಶ ದ್ರೋಹ ಆಧಾರದ ಮೇಲೆ ತಕ್ಕ ಶಿಕ್ಷೆಯಾಗಬೇಕು. ಈಗಾಗಲೇ ಇವ್ಹಿಎಂ ಮಶೀನ್ ಹ್ಯಾಕ್ ಮಾಡುವ ಟೀಮ್ ಒಂದನ್ನು ಕಟ್ಟಿಕೊಂಡು ಚುನಾವಣಾ ಆಕಾಂಕ್ಷಿಗಳಿಂದ ಹಣ ಸುಲಿಗೆ ಮಾಡುತ್ತಿರುವ ಇಂತಹ ಡೋಂಗಿ ಬಾಬಾಗೆ ತಕ್ಕ ಶಿಕ್ಷೆಯಾಗಬೇಕು. ದೊಡ್ಡ ಪ್ರಮಾಣದ ಜಾಲ ಈ ಸ್ವಾಮಿ ಬಳಿ ಇದ್ದು ಇವನನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿರಲಿ. ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!