spot_img
spot_img

ಪದೋನ್ನತಿ ಹೊಂದಿದ ಶಿಕ್ಷಕರಿಗೆ ಗ್ರಾಮಸ್ಥರಿಂದ ಸನ್ಮಾನ

Must Read

ಸಿಂದಗಿ: ಶಿಕ್ಷಕರಾದವರು ಬರೀ ಸರಕಾರಿ ಕೆಲಸವೆಂದು ಭಾವಿಸದೇ ನಿಮ್ಮ ಮನೆ ಕಾರ್ಯ ಎಂದು ಬೆರೆತು ಕಾರ್ಯ ನಿರ್ವಹಿಸಿದ್ದಾಗ ಮಾತ್ರ ಕಾರ್ಯಕ್ರಮಗಳಂತಹ ಸವಿ ಘಟನೆಗಳು ಜರುಗಲು ಸಾಧ್ಯ ಎಂದು ನಿಂಗನಗೌಡ ಬಿರಾದಾರ ಹೇಳಿದರು.

ತಾಲೂಕಿನ ಬಂದಾಳ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಿಂದ ಪದೋನ್ನತಿ ಹೊಂದಿ ಮುರಗಾನೂರ ವಸತಿ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕ ಎನ್.ಎಂ.ಚಪ್ಪರಬಂದ ಅವರಿಗೆ ಕೂಡ್ಲಪ್ಪ ಹೆರಕಲ್ ಮನೆ ಆವರಣದಲ್ಲಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡ ಆತ್ಮೀಯವಾಗಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಂಕರ ಸಾತಿಹಾಳ, ಶ್ರೀಶೈಲ ಕುಂಬಾರ ಮಾತನಾಡಿ, ಸರಕಾರಿ ಸೇವೆಯಲ್ಲಿ ಪದೋನ್ನತಿ ಹಾಗೂ ವರ್ಗಾವಣೆಗಳು ಸಹಜ ಆದರೆ ಪಾಲಕರ ಹಾಗೂ ವಿದ್ಯಾರ್ಥಿಗಳ ಮನಗೆದ್ದು ಸೇವೆ ಸಲ್ಲಿಸಿರುವುದು ಸಾಧನೆಯೇ ಸರಿ ಎಂದರು.

ಸನ್ಮಾನ ಸ್ವೀಕರಿಸಿದ ಶಿಕ್ಷಕ ಎನ್.ಎಂ.ಚಪ್ಪರಬಂಧ ಮಾತನಾಡಿ, ಶಿಕ್ಷಕ ವೃತ್ತಿ ಸಿಗುವುದು ಪೂರ್ವ ಜನ್ಮದ ಪುಣ್ಯವೇ ಸರಿ. ಮಕ್ಕಳಲ್ಲಿ ಬೆರೆತು ಮಕ್ಕಳಾಗಿ ಸೇವೆ ಸಲ್ಲಿಸುವುದು ಶಿಕ್ಷಕನಾದವರ ಮುಖ್ಯ ಉದ್ದೇಶವಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀಶೈಲ ಬಗಲಿ, ಗ್ರಾಪಂ ಸದಸ್ಯ ನಬಿರಸೂಲ ಬೆಕಿನಾಳ, ಅಶೋಕ ತಳವಾರ, ಪದಮಣ್ಣ ದೇವೂರ, ಬಸಣ್ಣ ಯಳಮೇಲಿ, ಲಕ್ಷ್ಮಣ ಯಳಮೇಲಿ, ರಾಜು ಬಡಿಗೇರ, ಮಶಾಕ ಸಿಲೆದಾರ, ಖಾದರಸಾಬ ಬೆಕಿನಾಳ, ಬಸವರಾಜ ದೇವರಮನಿ, ಶ್ರೀಮಂತ ಬಗಲಿ, ಮಲ್ಲಪ್ಪ ಮಾಗಣಗೇರಿ ಸೇರಿದಂತೆ ಅನೇಕ ಶಿಶ್ಯ ಬಳಗ ಭಾಗವಹಿಸಿದ್ದರು.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!