- Advertisement -
ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮತಿ ಹಣಮವ್ವ ಜೈನಾಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಅವರು ಸಮಗ್ರ ಗ್ರಾಮ ಪಂಚಾಯಿತಿ ಅಬಿವೃದ್ದಿಗೆ ಎಲ್ಲರೂ ಸಹಕಾರ ಕೊಡಬೇಕು ಸ್ವಚ್ಚತೆಗೆ ಎಲ್ಲರೂ ಆದ್ಯತೆ ಕೊಡಬೇಕು ಸಮಗ್ರ ಅಭಿವೃದ್ದಿಗೆ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದು ಬುಳ್ಳಾ ಪ್ರಭುಗೌಡ ಪಾಟೀಲ ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ಸಂಗನಗೌಡ ಪಾಟೀಲ, ಮಹಾಂತೇಶ ಸಾತಿಹಾಳ, ಸೖಪನಸಾಬ ಕೋರವಾರ, ಶಶಿಕಾಂತ ನಾಯ್ಕ, ಶಿವಣ್ಣ ನಾಗಣಸೂರ, ಗೋಲ್ಲಾಳಪ್ಪಗೌಡ ನಾಗಣಸೂರ, ಸುನೀಲಗೌಡ ಪಾಟೀಲ ಅಮ್ಮೋಗಿ ಜೈನಾಪುರ ಹಾಜರಿದ್ದರು