spot_img
spot_img

ಅದ್ದೂರಿಯಾಗಿ ಜರುಗುತ್ತಿರುವ ಸುಕ್ಷೇತ್ರ ಇಂಚಲ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವ

Must Read

ಸವದತ್ತಿ ತಾಲೂಕಿನ ಸಾಧು ಸಂತರ ನೆಲೆಬೀಡು, ಐತಿಹಾಸಿಕ ಸಾಧು ಸಂಸ್ಥಾನ ಮಠದ ಪ್ರಖ್ಯಾತಿಯ ಇಂಚಲ (ಬೈಲಹೊಂಗಲ ಬದಿಯ )ಗ್ರಾಮದಲ್ಲಿ ಗ್ರಾಮದೇವಿಯ ಜಾತ್ರೆಯು ಸದ್ಯ ಅತ್ಯಂತ ಭಕ್ತಿ ಯ ವಾತಾವರಣ ದಲ್ಲಿ ಶ್ರದ್ಧೆ, ನಿಷ್ಠೆ,ಧಾರ್ಮಿಕ ಪರಂಪರೆಯ ಉಲ್ಲಾಸಮಯ ವಾತಾವರಣ ದಲ್ಲಿ ಅದ್ದೂರಿ ಯಾಗಿ ನಡೆಯುತ್ತಿದೆ.

ಇದೇ ಮೇ ತಿಂಗಳ 3 ನೆಯ ದಿನಾಂಕ ದಿಂದ ದಿ 11 ರ ವರೆಗೆ ಜರುಗಲಿದೆ, ಜಾತ್ರಾ ಮಹೋತ್ಸವದ ಆರಂಭೋತ್ಸವವನ್ನು ಸುಕ್ಷೇತ್ರ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ದಲ್ಲಿ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಜಾತ್ರೆಗೆ ಚಾಲನೆಯನ್ನು ಕೊಟ್ಟರು.

ಈ ಕಾರ್ಯಕ್ರಮದಲ್ಲಿ ಬೈಲಹೊಂಗಲ ಶಾಸಕರಾದ ಮಹಾoತೇಶ ಕೌಜಲಗಿ ಶಾಸಕರು, ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಲಾ ಸುರೇಶ್ ಅಂಗಡಿಯವರು, ಮಾಜಿ ಶಾಸಕರು ಗಳಾದ ಡಾ,ವ್ಹಿ. ಆಯ್, ಪಾಟೀಲ,ಜಗದೀಶ ಮೆಟಗುಡ್ಡರವರು,ಕೆ ಎಲ್ ಇ ಸಂಸ್ಥೆಯ ನಿರ್ದೇಶಕರಾದ ಡಾ, ವಿ.ಎಸ್.ಸಾಧುಣವರ, ಮಾಜಿ ಜಿಲ್ಲಾ ಪಂಚಾಯತ. ಸದಸ್ಯರಾದ ಶಂಕರ ಮಾಡಲಗಿ. ಬೈಲಹೊಂಗಲ ಪುರಸಭೆ ಅಧ್ಯಕ್ಷರಾದ ಬಸವರಾಜ ಜನ್ಮಟ್ಟಿ ಯವರು, ಇಂಚಲ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸಿದ್ಧವ್ವ. ಶಿ. ಗೋವನಕೊಪ್ಪ ರವರು ಸೇರಿದಂತೆ ಹಲವು ಗಣ್ಯಮಾನ್ಯರ ಉಪಸ್ಥಿತಿಯಲ್ಲಿ ಆರಂಭ ಗೊಂಡಿತು.

ಸವದತ್ತಿ ತಾಲೂಕಿನ ಇoಚಲ ಗ್ರಾಮ ಸಾಧು ಸಂತರು ನೆಲಸಿದ ಪುಣ್ಯಮಯ ಗ್ರಾಮ, ಹಲವು ಶಾಲೆ, ಕಾಲೇಜು ಗಳಿವೆ, ಶೈಕ್ಷಣಿಕ ವಾಗಿ ಸುಧಾರಣೆ ಹೊಂದಿರುವ ಗ್ರಾಮ, ಇಲ್ಲಿ ಸರಕಾರಿ ನೌಕರರ ಸಂಖ್ಯೆ ಹೆಚ್ಚಿದೆ, ಸದ್ಗುರು ಶಿವಾನಂದ ಭಾರತಿ ಮಹಾಸ್ವಾಮಿಗಳಿಂದ ನಾಡಿನ ತುಂಬಾ ಪ್ರಸಿದ್ದಿ ಹೊಂದಿದೆ.

ಅವರು ನಾಡು,ಹೊರನಾಡು ಸೇರಿದಂತೆ ಅಪಾರ ಭಕ್ತ ಸಮೂಹ ಹೊಂದಿರುವರು,*ಇಂಚಲ ಮುತ್ತಿನ ಗೊಂಚಲ* ಎಂಬ ನಾಣ್ಣುಡಿ ಇದೆ, ವಿಶ್ವ ಶಾಂತಿಗಾಗಿ ಪ್ರತಿವರ್ಷ ವೇದಾ0ತ ಪರಿಷತ್ತು ನಡೆಸಿ ನಾಡಿನ ಅಸಂಖ್ಯಾತ ಮಹಾತ್ಮರನ್ನು ಕರೆಸಿ ಭಕ್ತರನ್ನು ಉದ್ದರಿಸುವರು, ನಿರಂತರ ಈ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗುತ್ತವೆ.

ಪೂಜ್ಯ ಶಿವಾನಂದ ಭಾರತಿಯವರು ದೇವಿಯ ಆರಾಧಕರು. ಶ್ರೀಕ್ಷೇತ್ರದಲ್ಲಿ ಶಕ್ತಿ ದೇವತೆ ಗಳನ್ನು ಪ್ರತಿಷ್ಠಾಪನೆ ಮಾಡಿರುವರು.

ಇಂಚಲ ಗ್ರಾಮದಲ್ಲಿ ಅನೇಕ ವರ್ಷಗಳ ಕಾಲ ಗ್ರಾಮದೇವತೆಯರ ಜಾತ್ರೆ ನಡೆಯುವುದನ್ನು ಗಮನಿಸಿ 2007ರಲ್ಲಿ ಶ್ರೀಗಳೇ ಸೂಚನೆ ನೀಡಿ ಜಾತ್ರೆ ಆರಂಭ ಗೊಳಿಸಿದರು, ಪ್ರತಿ ಐದು ವರ್ಷಕ್ಕೊಮ್ಮೆ ಜಾತ್ರೆ ಮಾಡಲು ಹೇಳಿದ ಪ್ರಕಾರ ಅಂದಿನಿಂದ ಈ ಜಾತ್ರೆ ನಡೆಯುತ್ತಾ ಬಂದಿದೆ. ಸದ್ಯ ಜಾತ್ರಾಮಹೋತ್ಸವವು ಅತೀ ಉಲ್ಲಾಸ ಸಂತೋಷ ಸಂಭ್ರಮ ದಿಂದ ಜರಗುತ್ತಿದೆ, ದೇವಿಯ ಹೊನ್ನಾಟ, ಇತರೆ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ಭಕ್ತರ ಧಾರ್ಮಿಕ ಭಾವನೆಗೆ ಖುಷಿ ಇಮ್ಮಡಿ ಗೊಳಿಸಿದೆ. ನಿತ್ಯ ಸಾವಿರಾರು ಜನ ಬಂದು ದೇವಿಯ ದರ್ಶನ ಪಡೆದುಕೊಂಡು ಪುನೀತರಾಗುತ್ತಿರುವರು. ಊರಿಗೆ ಊರೇ ಭಕ್ತಿಯ ಭಾವದಲ್ಲಿ ಮುಳಗಿದೆ. ಸದ್ಯ ನಡೆಯುತ್ತಿರುವ ಜಾತ್ರಾಮಹೋತ್ಸವವು ಇದೇ ದಿನಾಂಕ ಹನ್ನೊಂದರಂದು ಸಂಪನ್ನ ಗೊಳ್ಳಲಿದೆ.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!