spot_img
spot_img

ಮೂಡಲಗಿ ; ಮಡ್ಡಿ ಈರಣ್ಣ ಜಾತ್ರೆ ಸಂಭ್ರಮದ ಆರಂಭ

Must Read

ಐದು ದಿನಗಳವರೆಗೆ  ಅದ್ದೂರಿಯಾಗಿ ನಡೆಯುವ ಮಡ್ಡಿ ವೀರಭದ್ರನ ಜಾತ್ರೆ 
           ಮೂಡಲಗಿ -ಪ್ರತಿ ವರ್ಷದಂತೆ  ಪಟ್ಟಣದಲ್ಲಿ ಶ್ರೀ ಮಡ್ಡಿ ವೀರಭದ್ರೇಶ್ವರ ಜಾತ್ರೆಯು ಶ್ರಾವಣ ಶುಭ ಶುಕ್ರವಾರದಂದು ಸಕಲ ವಾದ್ಯಮೇಳಗಳು ಭಕ್ತರ ಘೋಷಣೆಗಳ ಸಂಭ್ರಮದ ನಡುವೆ ಆರಂಭಗೊಂಡಿತು. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಅನೇಕ ಆಧ್ಯಾತ್ಮಿಕ, ಮನರಂರಂಜನೀಯ ಕಾರ್ಯಕ್ರಮಗಳು ನಡೆಯಲಿವೆ.
     ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮಗಳು ; “ರಾಜಗೋಪುರದ ಕಳಸಾರೋಹಣ”,”ಮಹಾದ್ವಾರ” ಉದ್ಘಾಟನೆ
 ಶುಕ್ರವಾರ ಆಗಷ್ಟ್, 16ರಂದು ಮೂಡಲಗಿಯಲ್ಲಿ ಇರುವ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಿಂದ ಮಧ್ಯಾಹ್ನ 3 ಗಂಟೆಗೆ ಸಕಲ ವಾದ್ಯ,ಮೇಳದೊಂದಿಗೆ, ಮಹಿಳೆಯರಿಂದ ಕುಂಭ ಉತ್ಸವ ಮೆರವಣಿಗೆ ಶ್ರೀ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ವರೆಗೆ   ನಡೆಯಿತು. ಸಂಜೆ 6 ಗಂಟೆಗೆ ಸತ್ಸಂಗ ಹಾಗೂ ರಾತ್ರಿ 9-30ಕ್ಕೆ ಜ್ಯೂ.ಶಿವರಾಜಕುಮಾರರವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
   ಶನಿವಾರ,ಆಗಷ್ಟ್,17-2024 ರಿಂದ ಸಂಜೆ 5ರಿಂದ  6 ಗಂಟೆಯವರೆಗೆ ಎಲ್.ವಾಯ್.ಅಡಿಹುಡಿ ಶಾಲೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುವವು. 6ಗಂಟೆಗೆ ‘ಸತ್ಸಂಗ’ ಕಾರ್ಯಕ್ರಮ ಜರುಗುವುದು.ಸತ್ಸಂಗದ ವಿಷಯ ; ಜಾಣನು ಲೌಕಿಕ ಪರಮಾರ್ಥವೆರಡನು,ಮಾಣದೆ ಕೂಡಿ ನಡೆಸುತಿಹನು
     ರವಿವಾರ ಆಗಷ್ಟ್,18-2024 ರಂದು ಸಂಜೆ 5 ಗಂಟೆಗೆ ‘ಪಲ್ಲಕಿ ಉತ್ಸವ’ ನಡೆಯುವುದು. 5-30 ರಿಂದ  6-30 ಗಂಟೆಯವರೆಗೆ  ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ. 6 ಗಂಟೆಗೆ ‘ಸತ್ಸಂಗ ಸಮ್ಮೇಳನ’ ಕಾರ್ಯಕ್ರಮ ಜರುಗುತ್ತದೆ. ಸತ್ಸಂಗದ ವಿಷಯ-‘ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ’.ರಾತ್ರಿ 10 ಗಂಟೆಗೆ ಶ್ರೀ ಮಡ್ಡಿ ವೀರಭದ್ರೇಶ್ವರ ಭಜನಾ ಮಂಡಳಿ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಕಾರ್ಯಕ್ರಮ.
     ಸೋಮವಾರ 19-2024 ರಂದು  10 ಗಂಟೆಗೆ “ರಾಜಗೋಪುರ ಕಳಸಾರೋಹಣ”ಕಾರ್ಯಕ್ರಮ. ಮುಂಜಾನೆ 11 ರಿಂದ 12 ಗಂಟೆಯವರೆಗೆ ಮೇಘಾ ಕನ್ನಡ ವಸತಿ ಶಾಲೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಮಧ್ಯಾಹ್ನ 12 ಗಂಟೆಗೆ ‘ಪಲ್ಲಕಿ ಉತ್ಸವ’,ಪುರವಂತರಿಂದ ಒಡಪುಗಳು ಹಾಗೂ ‘ಅಗ್ನಿ ಪ್ರವೇಶ’ (ಕಿಚ್ಚ ಹಾಯುವುದು) 5 ರಿಂದ 6 ಗಂಟೆಯವರೆಗೆ ಶ್ರೀನಿವಾಸ ಸಿಬಿಎಸ್ ಸಿ ಶಾಲೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ.ಸಂಜೆ 6 ಗಂಟೆಗೆ ‘ಸತ್ಸಂಗ ಸಮ್ಮೇಳನ’  ಸತ್ಸಂಗದ ವಿಷಯ-“ಪರೋಪಕಾರಿ ಪುಣ್ಯಾಯ,ಪಾಪಾಯ ಪರಪೀಡಣಂ”.
     ಮಂಗಳವಾರ ಆಗಷ್ಟ್,20-2024 ರಂದು ಮಧ್ಯಾಹ್ನ 1-30 ಗಂಟೆಗೆ ‘ಮಹಾದ್ವಾರ ಉದ್ಘಾಟನೆ’ ಕಾರ್ಯಕ್ರಮ. ಮಧ್ಯಾಹ್ನ 1-30 ರಿಂದ  2 ಗಂಟೆಯವರೆಗೆ ವ್ಹಿ.ಬಿ.ಎಸ್.ಎಮ್. ಶಾಲೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಮಧ್ಯಾಹ್ನ2 ಗಂಟೆಗೆ ಸತ್ಸಂಗ ಕಾರ್ಯಕ್ರಮ. ಸತ್ಸಂಗದ ವಿಷಯ- ಸಂಜೆ 5ಗಂಟೆಗೆ ‘ರಥೋತ್ಸವ’ ನಂತರ ಮಂಗಲಗೊಳ್ಳುವುದು.
  ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಲ್ಳುವ ಶ್ರೀ ಗಳು   ಸಿದ್ದ ಸಂಸ್ಥಾನಮಠ, ಮೂಡಲಗಿ ಶ್ರೀ ದತ್ತಾತ್ರೇಯಬೋಧ ಮಹಾಸ್ವಾಮೀಜಿ, ಶ್ರೀ ಜಡಿಸಿದ್ದೇಶ್ವರ ಮಠ, ಸುಣಧೋಳಿ ಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ದಿಗಂಬರೇಶ್ವರ ಮಠ,ಕೋಲಾರ ಶ್ರೀ ಯೋಗಿಕಲ್ಲಿನಾಥ ಮಹಾಸ್ವಾಮಿಗಳು, ವಿರಕ್ತ ಮಠ,ಶೇಗುಣಸಿ  ಶ್ರೀ ಮಹಾಂತ ಪ್ರಭು ಮಹಾಸ್ವಾಮಿಗಳು, ಶ್ರೀ ಸದಾಶಿವಯೋಗೀಶ್ವರ ಮಠ, ಮುನ್ಯಾಳ-ರಂಗಾಪೂರ,ಬಾಗೋಜಿಕೊಪ್ಪ ಶ್ರೀ ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಜ್ಞಾನಮಂದಿರ ಧರ್ಮದರ್ಶಿನಿ,ಗೋಕಾಕ, ಮಾತೋಶ್ರೀ ಸುವರ್ಣ ಹೊಸಮಠ,ಕಂಕಣವಾಡಿ ಶರಣ ಶ್ರೀ ಮಾರುತಿ ಶರಣರು,ಕೆಂಪಯ್ಯ ಸ್ವಾಮಿ ಮಠ,ಗುಬ್ಬಲಗುಡ್ಡ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿರಕ್ತ ಮಠ, ಹಂದಿಗುಂದ ಶ್ರೀ ಶಿವಾನಂದ ಮಹಾಸ್ವಾಮಿಗಳು, ವೀರಭಿಕ್ಷಾವರ್ತಿ ನೀಲಕಂಠ ಮಠ,ಹಳೆ ಹುಬ್ಬಳ್ಳಿ ಶ್ರೀ ಜಗದ್ಗುರು ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಅಡವಿಸಿದ್ದೇಶ್ವರ ಮಠ,ಶಿವಾಪೂರ(ಹ) ಶ್ರೀ ಅಡವಿಸಿದ್ದರಾಮ ಮಹಾಸ್ವಾಮಿಗಳು, ನಾಗನೂರ ಮಾತೋಶ್ರೀ ಕಾವ್ಯಾಮ್ಮನವರು,ಶ್ರೀ ಅಡವಿಸಿದ್ದೇಶ್ವರ ಮಠ,ಅಂಕಲಗಿ-ಕುಂದರಗಿ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಚಿಕ್ಕಮ್ಮದೇವಿ ಹಾಗೂ ಧರಿದೇವರ ಪುಣ್ಯಾಶ್ರಮ, ಕಟಕಭಾವಿ ಶ್ರೀ ಅಭಿನವ ಧರೇಶ್ವರ ಮಹಾಸ್ವಾಮಿಗಳು, ಧರ್ಮರ್ದರ್ಶಿಗಳು ಸಿದ್ದಾರೂಢ ಮಠ, ಹುಬ್ಬಳ್ಳಿ ಶ್ರೀ ಶ್ಯಾಮಾನಂದ ಪೂಜೇರಿ, ಪಂಚಮಸಾಲಿ, ಕೂಡಲ ಸಂಗಮ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳು, ಭಗೀರಥ,ಹೊಸದುರ್ಗ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು, ಶೂನ್ಯ ಸಂಪಾದನ ಮಠ, ಗೋಕಾಕ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು, ಹಿರೇಮಠ ಹುಕ್ಕೇರಿ-ಬೆಳಗಾವಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಮೋಟಗಿಮಠ,ಅಥಣಿ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು, ಜಗದ್ಗುರು ಶ್ರೀ ದುರದುಂಡೇಶ್ವರ ಅರಭಾವಿ ಮಠ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು, ಶ್ರೀ ಸಿದ್ದಲಿಂಗೇಶ್ವರ ಆಶ್ರಮ,ಹುಣಶ್ಯಾಳ ಪಿ ವಾಯ್ ಶ್ರೀ ನಿಜಗುಣ ದೇವರು
   ಈ ಎಲ್ಲ ಪೂಜ್ಯರ ಸಾನ್ನಿದ್ಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ ಎಂದು ಶ್ರೀ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       ಇದಲ್ಲದೆ  ವಿವಿಧ ಮನರಂಜನಾ ಕಾರ್ಯಕ್ರಮಗಳು ಸತತ ಐದು ದಿನಗಳವರೆಗೆ ನಡೆಯುವವು   ಆ-17 ರಂದು ಮುಂಜಾನೆ 9 ಗಂಟೆಗೆ “ಹಾಪ್-ಪಿಚ್ (ಮಿನಿ ಬೌಂಡ್ರಿ) ಕ್ರಿಕೆಟ್ ಪಂದ್ಯಾವಳಿ”ರಾತ್ರಿ 8 ಗಂಟೆಗೆ “ಹೊನಲು ಬೆಳಕಿನ ಮುಕ್ತ ಕಬ್ಬಡ್ಡಿ ಪಂದ್ಯಾವಳಿಗಳು”,ಆ-18 ರಂದು ಮುಂಜಾನೆ 10 ಗಂಟೆಗೆ ನಾಲ್ಕು ‘ಗಾಲಿ ಡಬ್ಬಿ ರಿವರ್ಸ್ ಬಿಡುವ ಸ್ಪರ್ಧೆ’ ಮಧ್ಯಾಹ್ನ 12 ಗಂಟೆಗೆ  “ಟ್ರಾಕ್ಟರ್ ರಿವರ್ಸ್ ಜಗ್ಗುವ ಸ್ಪರ್ಧೆ”, ರಾತ್ರಿ 8 ಗಂಟೆಗೆ ಭಜನಾ ಕಾರ್ಯಕ್ರಮ,ಆ-19 ರಂದು ರಾತ್ರಿ 9 ಗಂಟೆಗೆ ಹಣಮಂತ ಲಮಾನಿ (ಝಿ ಟಿ ವಿ) ಇವರಿಂದ ಹಾಸ್ಯ ರಸಮಂಜರಿ,ಆ-20 ರಂದು ರಾತ್ರಿ 10 ಗಂಟೆಗೆ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ ಇವರಿಂದ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಇವು ಶ್ರೀ ವೀರಭದ್ರೇಶ್ವರ ಜಾತ್ರೆಯಲ್ಲಿ ಪ್ರಯುಕ್ತವಾಗಿ ಅತೀ ವಿಜೃಂಭಣೆಯಿಂದ ನಡೆಯುವ ಕಾರ್ಯಕ್ರಮಗಳು.
- Advertisement -
- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group