ಮೂಡಲಗಿ: ತಾಲೂಕಿನ ವೆಂಕಟಾಪುರ ಗ್ರಾಮದ ಆರಾಧ್ಯ ದೇವನಾದ ಶ್ರೀ ಹನುಮಾನ್ ದೇವರ ಕಾರ್ತಿಕೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದಿಂದ ಜರುಗಿತು.
ವೆಂಕಟಾಪುರದಲ್ಲಿ ದೀಪಾವಳಿ ಪಾಡ್ಯ ದಿನದಂದು ದೀಪೋತ್ಸವ ಪ್ರಾರಂಭಗೊಂಡು ಸತತ ಮೂರು ತಿಂಗಳು ೧೫ ದಿನಗಳವರೆಗೆ ನಡೆದು ಬಂದು ಕಾರ್ತಿಕೋತ್ಸವ ಭಾರತ ಹುಣ್ಣಿಮೆಯ ದಿನದಂದು ಹನುಮಾನ್ ದೇವರ ಪೂಜಾರಿಗಳಾದ ಗ್ರಾಮದ ದಳವಾಯಿ ಬಂಧುಗಳು ಹಾಗೂ ಗ್ರಾಮದ ಮುಖಂಡರು ಸೇರಿ ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ನಾಡಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೀಪ ಹಚ್ಚುವ ಮೂಲಕ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಿದರು.
ವೆಂಕಟಾಪೂರ ಗ್ರಾಮದಲ್ಲಿ ದೀಪಾವಳಿಯಿಂದ ಭಾರತ ಹುಣ್ಣಿಮೆಯವರೆಗೆ ಈ ಗ್ರಾಮದಲ್ಲಿ ಯಾವುದೇ ಹೊಸ ಬಟ್ಟೆ ಖರೀದಿಯಾಗಲಿ ಚಪ್ಪಲಿ ಖರೀದಿ ಆಗಲಿ ಮದುವೆಗಳಾಗಲಿ ಹಾಗೂ ಹೊಸ ಮನೆ ಕಟ್ಟುವುದು ಆಗಲಿ ಯಾವುದೇ ಹೊಸ ಕೆಲಸವನ್ನು ಕೈಗೊಳ್ಳುವುದಿಲ್ಲ.
ಈ ಸಂದರ್ಭದಲ್ಲಿ ಗದ್ದುಗೆ ಪೂಜಾರಿಗಳಾದ ಯಲ್ಲಪ್ಪ ಗಾಂಜಿ, ಮಹಾದೇವ ಗಾಂಜಿ, ಯಲ್ಲಪ್ಪ ಗಾಂಜಿ, ಗ್ರಾಮದ ಮುಖಂಡರುಗಳಾದ ಶಾಸಪಗೌಡ ಪಾಟೀಲ್ ಗಿರೀಶ ಹಳ್ಳೂರ್, ತಿಮ್ಮಣ್ಣ ಢವಳೇಶ್ವರ, ಮಹಾದೇವ ವಟವಟಿ, ಹನುಮಂತ ಕೋಳಿಗುಡ, ಹನುಮಂತ ಪೂಜಾರಿ, ಕರೆಪ್ಪ ಹಾದಿಮನಿ, ಹನುಮಂತ ಹೊಸಮನಿ, ವೆಂಕಪ್ಪ ನೀಲಪ್ಪಗೋಳ, ಕಲ್ಲಪ್ಪ ಬಡಕಲಿ, ಸೇರಿದಂತೆ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.