spot_img
spot_img

ಮಕ್ಕಳ ಬಾಲ್ಯ ಜೀವನದಲ್ಲಿ ಅಜ್ಜ ಅಜ್ಜಿಯರು ಪರಮಾತ್ಮ ಇದ್ದಂತೆ – ಜನಪದ ಸಾಹಿತಿ ಸಿದ್ದಪ್ಪ ಬಿದರಿ

Must Read

spot_img
- Advertisement -

ಡಿ.ಎಸ್ ಸಿ.ಬಿ.ಎಸ್.ಇ. ಶಾಲೆಯಲ್ಲಿ ಅಜ್ಜ-ಅಜ್ಜಿಯರ ದಿನ ಆಚರಣೆ

ಮೂಡಲಗಿ : ಮಕ್ಕಳ ಬಾಲ್ಯ ಜೀವನದಲ್ಲಿ ಅಜ್ಜ-ಅಜ್ಜಿಯರು ಪರಮಾತ್ಮನ ರೂಪದಂತೆ ಕಾಣುವದರ ಜೊತೆಗೆ ಮಕ್ಕಳ ಬಾಲ್ಯದ ಜೀವನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸ್ಪೂರ್ತಿಯನ್ನು ತುಂಬುತ್ತಾರೆ. ಅಲ್ಲದೇ ಮಕ್ಕಳು ತಮ್ಮ ಬಾಲ್ಯವನ್ನು ಅಜ್ಜ-ಅಜ್ಜಿಯರ ಜೊತೆಗೆ ಕಳೆದಾಗ ಅವರ ಅನುಭವ ಮಕ್ಕಳ ಮೇಲಾಗಿ ಸ್ವಾಭಿಮಾನ ಮತ್ತು ಸೃಜನಶೀಲ ಸಮಾಜಮುಖಿ ವ್ಯಕ್ತಿತ್ವ ಬೆಳೆಯುವಲ್ಲಿ ಸಹಾಯಕವಾಗುತ್ತದೆ. ಇಂದು ಸಮಾಜ ಬೆಳೆದಂತೆ ಕುಟುಂಬದ ಪ್ರೀತಿ ಮಕ್ಕಳ ಮೇಲೆ ಕಡಿಮೆಯಾಗಿ ವೈಜ್ಞಾನಿಕ ಜೀವನ ಮಕ್ಕಳ ಬದುಕನ್ನು ಮತ್ತು ಅವರ ಬಾಲ್ಯವನ್ನು ಹಾಳುಮಾಡುತಿದೆ. ಅಜ್ಜ-ಅಜ್ಜಿಯರು ಮಕ್ಕಳ ನಿಜವಾದ ಗುರುಗಳು ಹಾಗೂ ಮಾರ್ಗದರ್ಶಕರು ಆಗಿರುತ್ತಾರೆ ಮಕ್ಕಳ ಬದುಕನ್ನು ರೂಪಿಸುವಲ್ಲಿ ಅವಿಭಕ್ತ ಕುಟುಂಬಗಳು ಪ್ರಮುಖ ಪಾತ್ರವನ್ನು ವಹಿಸುತ್ತೇವೆ ಎಂದು ಬೀಳಗಿಯ ಜನಪದ ಸಾಹಿತಿ ಸಿದ್ದಪ್ಪ ಬಿದರಿ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಸಿ.ಬಿ.ಎಸ್.ಇ. ಶಾಲೆಯಲ್ಲಿ ಹಮ್ಮಿಕೊಂಡಿರುವ ಗ್ರಾಂಡ್ ಪೇರಂಟ್ಸ್ ಡೇ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನವನ್ನು ವಹಿಸಿಕೊಂಡು ಮಾತನಾಡಿ ಅಜ್ಜ-ಅಜ್ಜಿಯರು ಮಕ್ಕಳಿಗೆ ತಮ್ಮ ಅನುಭವದ ಪ್ರೀತಿ. ಸಾಮಾಜಿಕ ಕಾಳಜಿ, ಜೀವನದ ಮೌಲ್ಯಗಳನ್ನು ಹೇಳಿಕೊಡುತ್ತಾರೆ ಅಲ್ಲದೇ ಕನ್ನಡ ಭಾಷೆಯ ಗ್ರಾಮೀಣ ಬದುಕಿನ ಸೊಗಡನ್ನು ನಮ್ಮ ಮಕ್ಕಳಲ್ಲಿ ತುಂಬುವ ಕಾರ್ಯ ಮಾಡುತ್ತಾರೆ ನಮ್ಮ ಹಿರಿಯರು ವೈವಿಧ್ಯಮಯ ಸಮಾಜ ಆರಾಧಕರಾಗಿದ್ದು ಅವುಗಳ ಬೆಳವಣಿಗೆಯನ್ನು ತಾತಾ-ಅಜ್ಜಿಯಿಂದ ಮಕ್ಕಳು ಕಲಿಯಬಹುದು ಎಂದರು.

- Advertisement -

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ಮಕ್ಕಳ ಬದುಕಿನಲ್ಲಿ ತಂದೆ ತಾಯಿಗಳ ಪ್ರೀತಿಯ ಜೊತೆಗೆ ಅಜ್ಜ-ಅಜ್ಜಿಯರ ಪ್ರೀತಿ ದೊರತಾಗ ಅವರ ಜೀವನ ಸಾಮಾಜಿಕ ಪರಿಜ್ಞಾನದ ಮೇಲೆ ಬೆಳೆಯುವುದು ಮಕ್ಕಳಿಗೆ ಮೊಬೈಲ್ ವ್ಯಾಮೋಹ ಬಿಟ್ಟು ಅಜ್ಜ-ಅಜ್ಜಿಯರ ಜೊತೆಗೆ ಬೇರೆಯಲು ತಂದೆ ತಾಯಿಗಳು ಮಕ್ಕಳಿಗೆ ಕಿವಿ ಮಾತು ಹೇಳಬೇಕೆಂದರು.

ಕಾರ್ಯಕ್ರಮದಲ್ಲಿ ಕಸ್ತೂರಿ ಪಾರ್ಶಿ, ಪೂಜಾ ಪಾರ್ಶಿ, ಇಂದಿರಾ ಸಾತನೂರು, ರಮೇಶ ಪಾಟೀಲ, ಹಣಮಂತ ದೇಸಾಯಿ ಬಾಳಾಗೌಡ ಪಾಟೀಲ, ಬಾಬಾಸಾಹೇಬ ನಾಯಿಕ, ಕೃಷ್ಣಪ್ಪಾ ಪಾಟೀಲ, ಯಲ್ಲಪ್ಪ ಕಪ್ಪಲಗುದ್ದಿ, ಡಾ. ಕೆ.ಎಚ್.ನಾಗರಾಳೆ, ಶ್ರೀಕಾಂತ ಕೌಜಲಗಿ, ಸುರೇಶ ಡಬ್ಬನ್ನವರ ಸಿದ್ದಪ್ಪಾ ದುರದುಂಡಿ, ಗುರು ಪಾಟೀಲ ಹಾಗೂ ಶಾಲಾ ಸಿಬ್ಬಂದಿಯವರು ಹಾಜರಿದ್ದರು.

ಶಾಲಾ ಮಕ್ಕಳಿಂದ ತಮ್ಮ ಅಜ್ಜ-ಅಜ್ಜಿಯರಿಗೆ ಆರುತಿ ಬೆಳಗಿ ಅವರ ಆರ್ಶೀವಾದ ಪಡೆದುಕೊಂಡರು ಅಜ್ಜ-ಅಜ್ಜಿಯರನ್ನು ಒಳಗೊಂಡ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿ ಅಜ್ಜ-ಅಜ್ಜಿಯರು ತಮ್ಮ ಮೊಮ್ಮಕ್ಕಳೊಂದಿಗೆ ಭರತುಕೊಂಡಿದ್ದು & ಕೆಲವು ಅಜ್ಜಿಯಿಂದರು ಮೊಮ್ಮಕ್ಕಳಿಗೆ ಜೋಗುಳ ಹಾಗೂ ಗ್ರಾಮೀಣ ಹಾಡುಗಳನ್ನು ಹಾಡಿ ರಂಜಿಸುವುದು ವಿಶೇಷವಾಗಿತ್ತು.

- Advertisement -

ಶಾಲೆಯ ಪ್ರಾಚಾರ್ಯ ಜೋಶಪ್ ಬೈಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕಿ ಸುನೀತಾ ಸುಣದೋಳಿ ಸೌಜನ್ಯ ಮೀರಾಶಿ ನಿರೂಪಿಸಿದರು. ಶಿಕ್ಷಕ ಮೋಹಿನ್ ಪಿರಜಾದೆ ವಂದಿಸಿದರು.

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group