ಬೆಂಗಳೂರು ಗೆಜ್ಜೆ ಹೆಜ್ಜೆ ರಂಗತಂಡದ ವತಿಯಿಂದ ಆಯೋಜಿಸಲಾದ ಪದ್ಮಶ್ರೀ ಡಿ. ಸರೋಜಾದೇವಿಯವರ ಗೌರವಾರ್ಥ ರಂಗಕಲಾ ಉತ್ಸವ ರಂಗಸಂಭ್ರಮ ಕಾರ್ಯಕ್ರಮವು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರೇಕ್ಷಕರ ಹರ್ಷೋದ್ಗಾರ ಮತ್ತು ಕಲಾವಿದರ ಮನಮೋಹಕ ಪ್ರದರ್ಶನಗಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಪಾರ್ಶ್ವನಾಥ, ಡಾ. ಎಸ್. ನರಸಿಂಹಮೂರ್ತಿ, ಎಚ್. ನಾಗರಾಜ್, ಲಕ್ಷ್ಮೀನಾರಾಯಣ, ಮಂಜುನಾಥ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ನೃತ್ಯ, ಭಾವಗೀತೆ ಕಿರು ನಾಟಕಗಳ ಪ್ರದರ್ಶನವು ಪ್ರೇಕ್ಷಕರ ಮನಸೆಳೆಯಿತು. ಕಲಾವಿದರ ಕಲಾತ್ಮಕ ಪ್ರತಿಭೆ ಮತ್ತು ಆಯೋಜಕರ ಸೌಕರ್ಯ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಯಿತು.
ಆಯೋಜಕರು ಮೈಸೂರು ರಮಾನಂದ ಮಾತನಾಡಿ, ಕಲೆಯನ್ನು ಬದುಕಿನ ಭಾಗವನ್ನಾಗಿಸಲು ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಈ ರೀತಿಯ ರಂಗ ಉತ್ಸವಗಳು ಬಹುಮುಖ್ಯ ಎಂದರು.
ರಂಗಪ್ರೇಮಿಗಳು, ಕಲಾವಿದರು ಹಾಗೂ ಅಭಿಮಾನಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.

