“ಹಸಿರು ನಮ್ಮೆಲ್ಲರ ಉಸಿರಾಗಲಿ” – ಮಾಜಿ ಶಾಸಕ ರಮೇಶ ಭೂಸನೂರ ಕರೆ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಸಿಂದಗಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು,ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಗಿಡಮರಗಳ ಪಾತ್ರ ಮಹತ್ವದ್ದಾಗಿದೆ, ಹಸಿರು ನಮ್ಮ ಉಸಿರಾಗಬೇಕು ಹಾಗಿದ್ದಾಗ ಮಾತ್ರ ನಮಗೆ ಉಸಿರಾಗಿರುವ ಆಮ್ಲಜನಕ ದೊರೆಯಲು ಸಾಧ್ಯ ಎಂದು ಮಾಜಿ ಶಾಸಕ ರಮೇಶ ಭೂಸನೂರ ಅವರು ಮಾತನಾಡಿದರು.

ತಾಲೂಕಿನ ಪುರದಾಳದ ಶ್ರೀ ಭೀಮಾಶಂಕರ ಬ್ರಹ್ಮ ವಿದ್ಯಾಶ್ರಮ ಆವರಣದಲ್ಲಿ “ಸದ್ಗುರುವಿನ ಆಶ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮ” ದ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ನಮ್ಮ ಪೂರ್ವಜರು ಹಾಗೂ ಸಿಂಧೂ ನಾಗರಿಕತೆಯ ಕಾಲದಿಂದಲೂ ಗಿಡಮರಗಳನ್ನು ಪೂಜಿಸುವ ಸಂಸ್ಕೃತಿ ಭಾರತಿಯರಲ್ಲಿದೆ. ನಮಗೆ ಅದು ವೈಜ್ಞಾನಿಕ ಸತ್ಯ ಎಂಬುದು ಈ ಕರೋನಾ ಸಂಕಷ್ಟದಲ್ಲಿ ನಮ್ಮೆಲ್ಲರಿಗೂ ಅರ್ಥವಾಗಿದೆ.ಶ್ರೀಮಠದ ಆವರಣದಲ್ಲಿ ಸಸಿ ನೆಡುವ ಮೂಲಕ ಗ್ರಾಮದ ನಾಗರಿಕರು ಪರಿಸರ ಪ್ರೇಮವನ್ನು ಮೆರೆದಿದ್ದಾರೆ ಎಂದರು.

ಇದೆ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಸಮಾಜ‌ ಸೇವಕರಾದ ಸಂತೋಷ ಕುಮಾರ ಪಾಟೀಲ ಡಂಬಳ ಅವರು‌ ಮಾತನಾಡಿ ಪುರದಾಳದ ನೆಲೆ ಆಧ್ಯಾತ್ಮಿಕ ಗಟ್ಟಿತನದಿಂದ ಕೂಡಿದೆ. ಯತಿರಾಜ ಭೀಮಾಶಂಕರ ಮಹಾರಾಜರಿಂದ ಹಾಗೂ ಅವರ ಪರಮ ಶಿಷ್ಯರಾದ ಯಮನೂರೇಶ ಶರಣರಿಂದ ಈ ನೆಲೆ ಪಾವನವಾಗಲು ಸಾಧ್ಯವಾಗಿದೆ.ಈ ಪಾವನ ನೆಲದಲ್ಲಿ ಸಸಿ ನೆಡುವ ಭಾಗ್ಯ ನಮಗೂ ದೊರಕಿದ್ದು ಖುಷಿ ತಂದಿದೆ ಎಂದರು.

- Advertisement -

ಸದ್ಗುರು ಯಮನೂರೇಶ ಶರಣರು ಸಾವಿರಾರು ಹಾಡುಗಳನ್ನು ರಚಿಸಿ, ತಮ್ಮ ಗುರುವಿನ ಹೆಸರಲ್ಲಿ ಆಶ್ರಮವನ್ನು ಸ್ಥಾಪಿಸಿ,ಗ್ರಾಮದ ಜನತೆಗೆ ಸದ್ಗುರುವಿನ ಆಶ್ರಮ ಕಲ್ಪವೃಕ್ಷವಾಗಿದೆ. ಅದರ ಸುಂದರ ಪರಿಸರಕ್ಕಾಗಿ ಆಶ್ರಮದ ಆವರಣದಲ್ಲಿ ಸಸಿಗಳನ್ನು ನೆಟ್ಟಿರುವದು ಪರಿಸರ ಕಾಳಜಿಯನ್ನು ಹಾಗೂ ಆಶ್ರಮದ ಬಗೆಗಿನ ತಮ್ಮ ಪ್ರೀತಿಯನ್ನು ತೋರುತ್ತದೆ ಎಂದು ಸಮಾಜ ಸೇವಕರಾದ ಸಿದ್ದು ಬುಳ್ಳಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇದೆ ಸಂದರ್ಭದಲ್ಲಿ ಗ್ರಾಮಸ್ಥರು ಆಶ್ರಮಕ್ಕೆ ಕಲ್ಯಾಣ ಮಂಟಪ ಒದಗಿಸಲು ಬೇಡಿಕೆ ಇಟ್ಟಾಗ,ಮಾಜಿ ಶಾಸಕ ರಮೇಶ ಭೂಸನೂರ ಅವರು ಸರ್ಕಾರದ ಮೂಲಕ ಮೂರು ತಿಂಗಳಲ್ಲಿ ಕಲ್ಯಾಣ ಮಂಟಪ ಒದಗಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಡಿವಾಳಪ್ಪ ದ್ಯಾಪುರ,ಬಸವರಾಜ ತಾಳಿಕೋಟಿ, ಸಂತೋಷ ಬಿರಾದಾರ, ಮಲ್ಲಪ್ಪ ಮಾದರ,ಸದಾಶಿವ ಕಂನ್ಷೆ, ಭೀಮಾಶಂಕರ ಕಾಮನಕೇರಿ, ಶಂಕರಗೌಡ ಕೊಳುರ,ನಿಂಗನಗೌಡ ಬಿರಾದಾರ,ಜ್ಯೋತಿಬಾ ಕಂನ್ಷೆ ,ಈರನಗೌಡ ಪಾಟೀಲ, ರಾಜು ಮದರಖಾನ,ನಾಡಗೌಡ ಬಿರಾದಾರ,ಗುರಪ್ಪ ವಾಲಿಕಾರ,ಹಣಮಂತ್ರಾಯ ಕಂದಗನೂರ,ಸಿದ್ದರಾಮ ವಾಲಿಕಾರ,ಬೋಜು ಹದರಿ,ಈಶ್ವನಾಥ ಪುರದಾಳ, ಕೆಂಚಪ್ಪ ಮಾದರ ಪಾಲ್ಗೊಂಡಿದ್ದರು.ಶಿಕ್ಷಕ ಕನ್ನಪ್ಪ ಪೂಜಾರಿ ನಿರೂಪಿಸಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!