ಮುನವಳ್ಳಿ: ಪಟ್ಟಣದ ಶ್ರೀ ಸೋಮಶೇಖರ ಮಠದ ಲಿಂ. ಬಸವಲಿಂಗ ಮಹಾಸ್ವಾಮಿಗಳು ೬೬ನೇ ಪುಣ್ಯಸ್ಮರಣೋತ್ಸವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪುಂಡಲೀಕ ಪುಂಡಲೀಕ ಬಾಳೋಜಿ. ಮುನವಳ್ಳಿಯ ಪತ್ರಕರ್ತರಾದ ತಾನಾಜಿರಾವ ಮುರಂಕರ.ಬೆನಕಟ್ಟಿಯ ಮಾಧ್ಯಮ ಪ್ರತಿನಿಧಿ ಮಹಾಂತೇಶ ಗಿಲಾಕಿ.ಶಿಕ್ಷಕರಾದ ವೀರಣ್ಣ ಕೊಳಕಿ.ಶಿಕ್ಷಕ ಸಾಹಿತಿಗಳಾದ ವೈ.ಬಿ.ಕಡಕೋಳ.ಛಾಯಾಗ್ರಾಹಕರಾದ ಬಸವರಾಜ ತುಳಜನ್ನವರ ಇವರನ್ನು ಸೋಮಶೇಖರಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ಗುರುರಕ್ಷೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಗುಳೇದಗುಡ್ಡದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ.ಉಪ್ಪಿನಬೆಟಗೇರಿಯ ವಿರುಪಾಕ್ಷ ಮಹಾಸ್ವಾಮಿಗಳು. ಮುರಗೋಡದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಕಮತಗಿ ಕೋಟೆಕಲ್ಲದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು. ಹೊಸಳ್ಳಿಯ ಶ್ರೀ ಬೂದೀಶ್ವರ ಸ್ವಾಮೀಜಿ ಸ್ವಾಮೀಜಿಯವರು. ಅಮೀನಗಡದ ಶ್ರೀ ಪ್ರಭು ಶಂಕರರಾಜೇಂದ್ರ ಸ್ವಾಮೀಜಿ. ಕನಕಗಿರಿ ಸುವರ್ಣ ವಿರಕ್ತಮಠದ ಶ್ರೀ ಡಾ. ಚನ್ನಮಲ್ಲ ಸ್ವಾಮೀಜಿ, ಸವದತ್ತಿ ಕಲ್ಮಠದ ಶ್ರೀ ಶಿವಲಿಂಗ ಸ್ವಾಮೀಜಿ, ಗೊರವನಕೊಳ್ಳದ ಶ್ರೀ ಶಿವಾನಂದ ಸ್ವಾಮೀಜಿ, ತಾರೀಹಾಳದ ಶ್ರೀ ಅಡವೀಶ ದೇವರು ಉಪಸ್ಥಿತರಿದ್ದರು.