ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

Must Read

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು ಪ್ರಸಾದ್ ಅವರ ಸಾಧನೆಯನ್ನು ಮನ್ನಿಸಿ ಅವರಿಗೆ ವಾರ್ಷಿಕ ಕೊಡ ಮಾಡುವ ಪ್ರತಿಷ್ಠಿತ ಮಾರ್ಗದರ್ಶಕ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕಾಮಾಕ್ಷಿ ಆಸ್ಪತ್ರೆಯ ಮೂತ್ರ ಶಾಸ್ತ್ರ ವಿಭಾಗದ ತಜ್ಞ ಡಾ.ಪ್ರಕಾಶ್ ಕೆ.ಪ್ರಭು ಅವರಿಗೆ ರೋಟರಿ ಐವರಿ ಸಿಟಿಯ ಗೌರವ ಸದಸ್ಯತ್ವವನ್ನು ನೀಡಿ, ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಐವರಿ ಸಿಟಿ ಅಧ್ಯಕ್ಷ ರೊ.ಕೆ.ಶಶಿಧರ್, ಮಾಜಿ ಅಧ್ಯಕ್ಷ ರೊ.ಸಂಜಯ್ ಅರಸ್, ರೊ.ಸುನಿಲ್ ಬಾಳಿಗ, ಕಾರ್ಯದರ್ಶಿ ರೊ.ಶೋಭ ನಾಗರಾಜ್, ರೊ.ಎಂ.ಕೆ.ಸಚ್ಚಿದಾನಂದನ್, ರೊ.ಎಂ.ಕೆ.ಮುಖೇಶ್, ರೊ.ಇಫ್ತಿಕರ್ ಅಹಮದ್, ರೊ.ಕೇಶವ್ ಬಿ.ಕಾಂಚನ್ ಹಾಗೂ ಮುಂತಾದವರನ್ನು ಕಾಣಬಹುದು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group