ಬೀದರ – ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಗ್ಯಾರಂಟಿ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದ್ದಾರೆ
ಬೀದರ್‌ನಲ್ಲಿ ಈ ಕುರಿತು ಮಾತನಾಡಿದ ಶಾಸಕ ಶರಣು ಸಲಗರ್, ಸಿಐಡಿ ಎನ್ನುವುದು ಪೊಲೀಸ್ ರೆಸ್ಟ್ ಹೌಸ್. ಸಿಐಡಿಯನ್ನು ಕಾಂಗ್ರೆಸ್ ಇನ್ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್ ಅಂತಾ ಕರೆಯಬಹುದು. ಕೆಲಸಕ್ಕೆ ಬಾರದ ಪೊಲೀಸ್ ಅಧಕಾರಿಗಳನ್ನು ಸಿಐಡಿಗೆ ನಿಯೋಜನೆ ಮಾಡುತ್ತಾರೆ. ಹೀಗಾಗಿ, ಸಿಐಡಿ ತನಿಖೆ ಬಗ್ಗೆ ನಮಗೆ ಒಪ್ಪಿಗೆ ಇಲ್ಲ. ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡುವವರೆಗೂ ನಾವು ಹೋರಾಟ ಮಾಡ್ತೇವೆ. ಈಶ್ವರಪ್ಪ ಪ್ರಕರಣದಲ್ಲಿ ಸಂತೋಷ ಪಾಟೀಲ್‌ಗೆ ದುಡ್ಡು ಬರ್ತಿಲ್ಲ ಎಂಬ ನೋವಿತ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡ. ಆದರೆ ಸಚಿನ್ ಪಾಂಚಾಳಗೆ ದುಡ್ಡಿನ ತೊಂದರೆ ಇರಲಿಲ್ಲ. ಸಾಕಷ್ಟು ಕಿರುಕುಳ ಕೊಟ್ರು. ಬೆಂಗಳೂರಿನ ಲಾಡ್ಜ್‌ಗೆ ಕರೆದೊಯ್ದು ಹೊಡೆದ್ರು. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ರೆ ಡೆತ್‌ನೋಟ್‌ನಲ್ಲಿರುವ ಆರೋಪಿಗಳಿಗೆ ನೂರಕ್ಕೆ ನೂರು ಶಿಕ್ಷೆ ಆಗುತ್ತೆ. ಸಿಐಡಿಯಿಂದ ಸಚಿನ್ ಕುಟುಬಕ್ಕಾಗಲಿ, ಬೀದರ್, ಕಲಬುರಗಿ ಜಿಲ್ಲೆಗೆ ನ್ಯಾಯ ಸಿಗಲ್ಲ ಎಂದರು
ಈ ಮಧ್ಯೆ ಆತ್ಮಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಡಿವೈಎಸ್ ಪಿ ಸುಲೇಮಾನ್ ಹಾಗೂ ತಹಶಿಲ್ದಾರ ನೇತೃತ್ವದ ಸಿಐಡಿ ತಂಡ ತನಿಖೆಯನ್ನು ಚುರುಕುಗೊಳಿಸಿದೆ.
ಆದರೆ ಈ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದಿರುವ ಶಾಸಕರು, ಮಹಿಳೆಯರು ಪೊಲೀಸ್ ಸ್ಟೇಶನ್ ಗೆ ಹೋದರೆ ದೂರು ದಾಖಲಿಸಿಕೊಳ್ಳದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ಕೆಲಸದಿಂದ ವಜಾ ಮಾಡಬೇಕು. ಇವರನ್ನು ವಜಾ ಮಾಡುವತನಕ ನಾವು ಬರಲಿರುವ ಬಜೆಟ್ ಅಧಿವೇಶನವನ್ನೂ ನಾವು ಬಹಿಷ್ಕರಿಸುತ್ತೇವೆ ಎಂದು ಶಾಸಕ ಶರಣು ಸಲಗರ ಹೇಳಿದರು.
ವರದಿ : ನಂದಕುಮಾರ ಕರಂಜೆ, ಬೀದರ