ಮೂಡಲಗಿ – ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಯಶಸ್ವಿ ಸಲಹೆ ಹಾಗೂ ನೇತೃತ್ವದಿಂದಾಗಿ ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗ ಶ್ರೀಮತಿ ಲಕ್ಷ್ಮಿ ಮಂಜುನಾಥ ಹೆಳವರ ಇವರು ಅವಿರೋಧವಾಗಿ ಆಯ್ಕೆಗೊಂಡರು.
ಏಚುನಾವಣೆಯ ಫಲಿತಾಂಶವನ್ನು ಚುನಾವಣಾ ಅಧಿಕಾರಿ ಶ್ರೀಮತಿ ಆರ್ ಪಿ ನಾರಾಯಣಕರ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಪಂಚಾಯತ ಪಿಡಿಒ ರವಿ ಮರೆನ್ನವರ, ಸಾಮಾಜಿಕ ಹೋರಾಟಗಾರ ಗುರುನಾಥ ಗಂಗಣ್ಣವರ, ಮುಖಂಡರಾದ ರಾಮಪ್ಪ ಅರಬಾವಿ, ಭೀಮಪ್ಪ ನಾವಿ, ಶಂಭುಲಿಂಗ ಮುಕ್ಕಣ್ಣವರ, ಲಕ್ಷ್ಮಣ್ ಬಂಡ್ರೋಳಿ, ಶಿವಪುತ್ರ ಬಂಡಿನವರ, ಗುಂಡೂರಾವ್ ಗುಜನಟ್ಟಿ, ಹನುಮಂತ ರೊಡಲಕ್ಕನವರ, ವೆಂಕಪ್ಪ ಶಿರಗನ್ನವರ, ಮಂಜುನಾಥ್ ಹೇಳವರ, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಗ್ರಾಮಸ್ಥರ ಪರವಾಗಿ ಸತ್ಕರಿಸಿ ಶುಭಾಶಯಗಳು ತಿಳಿಸಲಾಯಿತು.
ಗುಜನಟ್ಟಿ ಗ್ರಾಮ ಪಂಚಾಯತಿ ಗೆ ನೂತನವಾಗಿ ಅಧ್ಯಕ್ಷ- ಉಪಾಧ್ಯಕ್ಷ ರಾಗಿ ಆಯ್ಕೆಗೊಂಡಿರುವ ಕಲ್ಲಪ್ಪ ಮುಕ್ಕನ್ನವರ ಮತ್ತು ಲಕ್ಷ್ಮಿ ಹೆಳವರ ಅವರಿಗೆ ಅಭಿನಂದನೆಗಳು. ಗ್ರಾಮದ ಅಭಿವೃದ್ಧಿ ಗೆ ಗ್ರಾಮಸ್ಥರ ಮತ್ತು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸಬೇಕು. ಪಕ್ಷಭೇದ ಮರೆತು ಗ್ರಾಮದ ಅಭಿವೃದ್ಧಿಗೆ ದುಡಿಯಬೇಕು. ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರಗತಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುವೆ. ಅನುದಾನವನ್ನು ಸದ್ಬಳಕೆ ಮಾಡಲು ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವೆ.
ಬಾಲಚಂದ್ರ ಜಾರಕಿಹೊಳಿ
ಶಾಸಕರು, ಅರಭಾವಿ