- Advertisement -
ಗುರ್ಲಾಪೂರ: ಸಮೀಪದ ಇಟನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಇತ್ತೀಚೆಗೆ ಸಂಘದ ಕಾರ್ಯಾಲಯದಲ್ಲಿ ಚುನಾವಣೆ ಅಧಿಕಾರಿಯಾದ ಜಿ ಎಸ್ ಲೋಕರೆ ಇವರ ನೇತೃತ್ವದಲ್ಲಿ ಅವಿರೋಧವಾಗಿ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಚನ್ನಪ್ಪ ಚ ಮಗದುಮ್,ಉಪಾಧ್ಯಕ್ಷರಾಗಿ ದೂಳಪ್ಪ ದ ಮುತ್ನಾಳ, ಸದಸ್ಯರಾಗಿ ಗೋವಿಂದ ಪೂಜೇರಿ, ಸಿದ್ದಪ್ಪ ಸುಣದೋಳಿ, ಮಹಂತೇಶ ಬೆನ್ನಳ್ಳಿ, ಸಿದ್ದಪ್ಪ ಹಾಲಳ್ಳಿ, ಸಂತೋಷ ಸಿ ಬಿ ಪಾಟೀಲ,ಯಲ್ಲಪ್ಪ ಸನದಿ, ಅರ್ಜುನ ಮಾದರ,ಮುತ್ತಪ್ಪ ದಾಸಣ್ಣವರ,ನಿಂಬೆವ್ವ ದಾನಿಹಾಳ,ಸುಮಿತ್ರಾ ತೇರದಾಳ, ಅವಿರೋಧವಾಗಿ ಆಯ್ಕೆಯಾದರು ಎಂದು ಸಂಘದ ಮುಖ್ಯಕಾರ್ಯನಿರ್ವಾಕರಾದ ಮಹಾದೇವ ಹಾಲಳ್ಳಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗಿರಿಗೌಡ ಪಾಟೀಲ, ಶಂಕರಗೌಡ ಪಾಟೀಲ, ಲಕ್ಷ್ಮಣ ಸಿ ಪಾಟೀಲ, ಮಾರುತಿ ಬೆಳಕೂಡ, ಲಕ್ಷ್ಮಣ ಮರಾಪೂರ ಹಾಗು ಸಂಘದ ಸದಸ್ಯರು ಮತ್ತು ಸಿಬ್ಬಂದಿಯವರು ಉಪಸ್ಥತರಿದ್ದರು.