ಗುರುವು ಮಾನವೀಯತೆ ಬೆಳೆಸಬೇಕು, ಶಿಷ್ಯ ಕರ್ತವ್ಯ ನಿಭಾಯಿಸಬೇಕು

Must Read

ಬ್ರಹ್ಮವೆಂಬುದು ತಾನು! ಒಮ್ಮಾರು ನೀಳವೇ            ಒಮ್ಮೆ ಸದ್ಗುರುವಿನುಪದೇಶ- ಪಾಲಿಸಲು             ಗಮ್ಮನೆ ಮುಕ್ತಿ -ಸರ್ವಜ್ಞ !!

ಅಂದರೆ ಬ್ರಹ್ಮ ಜ್ಞಾನ ಪಡೆಯುವ ಮಾರ್ಗ ಸುದೀರ್ಘವಾದದ್ದು ಸದ್ಗುರುವಿನ ಉಪದೇಶ ಆ ಮಾರ್ಗವನ್ನು ಸಮಾನಗೊಳಿಸಬಲ್ಲದು ಅಂತ
ಗುರುವಿಗೆ ಬ್ರಹ್ಮನಂತೆ ಶ್ರೇಷ್ಠವಾದವನು ಅಂತ ಆರಾಧಿಸುವ ಕಾಲ ಒಂದಿತ್ತು.

” ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಅಂತ ಗುರುವಿನ ಮಹಿಮೆಯನ್ನು ಕೊಂಡಾಡುವ ಪ್ರಾಚೀನ ಮನೋಭಾವನೆ ಎಲ್ಲಿ…. ಇಂದು ಗುರುಗಳನ್ನೇ ಗುಲಾಮರನ್ನಾಗಿ ಮಾಡಿಸಿಕೊಂಡು ಒಯ್ಯುವ ಹೀನಾಯ ಮನೋವೃತ್ತಿ ಈಗಿನ ಕಾಲವೆಲ್ಲಿ ಅನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುವದು ಸಹಜವಾಗಿದೆ .

ಸರ್ವಜ್ಞನು ಇನ್ನೊಂದು ಕಡೆ ಹೇಳುತ್ತಾನೆ
ಸರತರು ಮರನಲ್ಲ ! ಸುರಭಿಯೊಂದಾವಲ್ಲ
ಪರುಷಪಾಷಾಣದೊಳಗಲ್ಲ -ಗುರುವುತಾ
ನರರೊಳಗಲ್ಲ ಸರ್ವಜ್ಞ !!

ಕಲ್ಪವೃಕ್ಷ ಸಾಮಾನ್ಯ ಮರವಲ್ಲ ಕಾಮಧೇನು ಸಾಧಾರಣ ಗೋವಲ್ಲ ಪರುಷ ಪಾಷಾಣವಲ್ಲ ಹಾಗೆಯೇ ಗುರು ಸಾಮಾನ್ಯರಕ್ಕಿಂತ ಶ್ರೇಷ್ಠನೂ ಅಂತ ಸರ್ವಜ್ಞನು ಹೇಳುತ್ತಾನೆ .

ಹೌದು ಇದು ಅಕ್ಷರಶಃ ಸತ್ಯ ಯಾಕೆಂದರೆ ಗುರುವಿನ ಮಹತ್ವವನ್ನು ಯಾರು ಯಾವ ಕಾಲಕ್ಕೂ ಕಡಿಮೆ ಮಾಡಲಾಗದು.ಅಂತೆಯೇ ೫ ಸಪ್ಟೆಂಬರ್ ಶಿಕ್ಷಕ ದಿನಾಚರಣೆ ಎಂದು ರಾಧಾಕೃಷ್ಣನ್ ಅವರ ನೆನಪಿಗಾಗಿ ನಾವು ಆಚರಿಸಲಾಗುವುದು ಏಕೆಂದರೆ ಡಾ.ರಾಧಾಕೃಷ್ಣರು ಅತ್ಯಂತ ಶ್ರೇಷ್ಠವಾದ ಗುರು ಆದವರು. ಅವರ ನೆನಪಿಗಾಗಿ ನಮ್ಮ ದೇಶಕ್ಕೆ ಕೊಟ್ಟ ಕಾಣಿಕೆಗಾಗಿ ಅವರಿಗೆ ಉಪಕೃತವನ್ನು ಸಲ್ಲಿಸಲು ಅವರಿಗೆ ದೊಡ್ಡ ದೊಡ್ಡ ಪದವಿಗಳನ್ನು ಕಾಣಿಕೆಗಳನ್ನು ಕೊಡಲು ಬಂದಾಗ ಅದನ್ನು ಅವರು ನಿರಾಕರಿಸಿ ತಮ್ಮಹುಟ್ಟಹಬ್ಬದ ದಿನದಂದು “ಶಿಕ್ಷಕರ ದಿನ”ವನ್ನಾಗಿ ಆಚರಿಸಲು, ಇಡೀ ಶಿಕ್ಷಕ ವೃಂದಕ್ಕೆ ಗೌರವ ಸನ್ಮಾನವನ್ನು ಸಲ್ಲಿಸಲು ಕೇಳಿಕೊಂಡರಂತೆ. ಇದಕ್ಕನುಗುಣವಾಗಿಯೇ ಡಾ.ರಾಧಾಕೃಷ್ಣನರ ಹೆಸರಿನಲ್ಲಿ ಅವರ ಜನ್ಮದಿನದಂದು ಶಿಕ್ಷಕ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುವುದು.

ಡಾ. ರಾಧಾಕೃಷ್ಣನ್ ರು ಸ್ವಂತ ಶಿಕ್ಷಕರಾಗಿದ್ದರು. ಶಿಕ್ಷಕರ ಸ್ಥಾನಮಾನವನ್ನು ಗೌರವಿಸುವಂಥವರು. ರಾಷ್ಟ್ರಪತಿಗಳಾಗಿ ನಿವೃತ್ತರಾದ ಮೇಲು ಕೂಡ ಶಿಕ್ಷಕ ಪರಂಪರೆ ನಡೆಸಿಕೊಂಡು ಬಂದವರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವೀಧರರಾದ ಮೇಲೆ ಇಂಗ್ಲೆಂಡಿಗೆ ತೆರಳಿದರು ಅಲ್ಲಿ ಆಕ್ಸ್ಫರ್ಡ್ನಲ್ಲಿ ಕೆಲಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಭಾರತಕ್ಕೆ ಮರಳಿದ ಮೇಲೆ ಎಷ್ಟೊ ವರ್ಷ ದರ್ಶನ ಶಾಸ್ತ್ರದ ಪ್ರಾಧ್ಯಾಪಕರಾಗಿ ತಮ್ಮ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದರು. ಭಾರತೀಯ ದರ್ಶನ ಶಾಸ್ತ್ರಗಳನ್ನು ಕುರಿತು ಹಲವಾರು ಗ್ರಂಥವನ್ನು ಬರೆದಿದ್ದಾರೆ. “ಭಾರತೀಯ ದರ್ಶನ “ಎಂಬ ಎರಡು ದೊಡ್ಡ ಗ್ರಂಥಗಳನ್ನು ಬರೆದರು ಅವರು ಭಗವದ್ಗೀತೆಯ ಮೇಲೆಯೂ ಮಾರ್ಮಿಕವಾದ ವ್ಯಾಖ್ಯಾನ ಮಾಡಬಲ್ಲವರಾಗಿದ್ದರು, ದರ್ಶನ ಶಾಸ್ತ್ರದಲ್ಲಿ ಆಳವಾದ ಅಭ್ಯಾಸವುಳ್ಳ ಪ್ರತಿಭಾ ಪೂರ್ಣ ವಿದ್ವಾಂಸರಾಗಿದ್ದರು ಹಾಗೂ ಶ್ರೇಷ್ಠವಾಗ್ಮಿಗಳು. ಅವರು ಆಕಾಶವಾಣಿಯಾಗಲಿ, ಸಾರ್ವಜನಿಕ ವೇದಿಕೆಯ ಮೂಲಕವಾಗಲಿ ಭಾಷಣ ಮಾಡಲು ನಿಂತರೆ ಜನರೆಲ್ಲ ಮುಗ್ಧರಾಗುತ್ತಿದ್ದರು. ಅವರ ದನಿಯಲ್ಲಿ ಗಾಂಭೀರ್ಯತೆ ಪಾಂಡಿತ್ಯ ತುಂಬಿ ತುಳುಕುತ್ತಿತ್ತು. ಭಾರತದ ಅಭಿಮಾನದ ಶಿಕ್ಷಕರೆಂದೇ ಪ್ರಸಿದ್ಧಿ ಹೊಂದಿದ್ದರು.

ಆದರೆ ಇಂದು ಭಾರತದಲ್ಲಿ ಶಿಕ್ಷಕರ ಪರಿಸ್ಥಿತಿ ಬದಲಾಗಿದೆ ಎಳೆಯ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಅವರದೇ ಆದ ಕೆಲವು ಕರ್ತವ್ಯಗಳಿವೆ.  ಹಾಗೆ ವಿದ್ಯಾರ್ಥಿಗಳದು ಕೂಡ. ಶಿಕ್ಷಕ ದಿನಾಚರಣೆಯಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಪಾತ್ರದಲ್ಲಿ ಏನು ಸುಧಾರಿಸಿಕೊಳ್ಳಬಹುದು ಎಂದು ….
ಸಂಕ್ಷಿಪ್ತವಾಗಿ ನೋಡಿದರೆ ಶಿಕ್ಷಕರ ಕೆಲಸವೆಂದರೆ ಶಿಕ್ಷಕರು ಹೊಸ ಪಾಠ ವಿಧಾನಗಳು – ಕೇವಲ ಪುಸ್ತಕ ಪಾಠವಲ್ಲ, ಆಟ, ಚಟುವಟಿಕೆ, ತಂತ್ರಜ್ಞಾನ ಬಳಸಿ ಬೋಧನೆ ಮಾಡಬೇಕು.
ವಿದ್ಯಾರ್ಥಿಗಳ ಮನಸ್ಥಿತಿ ಅರ್ಥಮಾಡಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆ ವೇಗ, ಆಸಕ್ತಿ, ಶಕ್ತಿ ಬೇರೆಬೇರೆ. ಅದನ್ನು ಗಮನಿಸಿ ಸಹಾಯ ಮಾಡಬೇಕು.

ಮೌಲ್ಯಗಳ ಬೋಧನೆ – ಕೇವಲ ಪಾಠವಲ್ಲ, ಜೀವನ ಪಾಠ, ಶಿಷ್ಟಾಚಾರ, ಮಾನವೀಯತೆ, ಪ್ರಾಮಾಣಿಕತೆಗಳನ್ನು ಬೆಳೆಸಬೇಕು.
ತಮ್ಮನ್ನೇ ನವೀಕರಿಸಿಕೊಳ್ಳುವುದು – ಹೊಸ ಪಠ್ಯಕ್ರಮ, ತಂತ್ರಜ್ಞಾನ, ಸಮಾಜದ ಬದಲಾವಣೆಗಳನ್ನು ಕಲಿಯಬೇಕು.

ಸಹಾನುಭೂತಿ ಮತ್ತು ಪ್ರೋತ್ಸಾಹ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲು ಹೆಚ್ಚು ಪ್ರೋತ್ಸಾಹ ನೀಡಬೇಕು.

ಇನ್ನು ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ಮಾತನಾಡುವುದು ಅಂದರೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡುವುದು ಎಲ್ಲಕ್ಕಿಂತ ಮುಖ್ಯವಾದ ಕೆಲಸವಾಗಬೇಕು ಇದು ಅವರ ಆದ್ಯ ಕರ್ತವ್ಯವೂ ಕೂಡ – ಕೇವಲ ಶಿಕ್ಷಕ ದಿನದಂದು ಅಷ್ಟೇ ಅಲ್ಲ, ಪ್ರತಿದಿನ ಗೌರವದಿಂದ ವರ್ತಿಸಬೇಕು.
ಸಮಯಪಾಲನೆ ಮತ್ತು ಶಿಸ್ತು – ಓದುವಲ್ಲಿ, ಶಾಲಾ ಕೆಲಸದಲ್ಲಿ, ಹಾಗೂ ನೈತಿಕ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು.

ಪ್ರಶ್ನಿಸುವ ಅಭ್ಯಾಸವಿರಬೇಕು ….ಕೇವಲ ಪಾಠ ಕೇಳುವುದಲ್ಲ, ಅರ್ಥಮಾಡಿಕೊಂಡು ಪ್ರಶ್ನಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ವಯಂ ಅಧ್ಯಯನ ಬಹಳ ಮುಖ್ಯ– ಶಿಕ್ಷಕ ಹೇಳಿದಷ್ಟರಲ್ಲೇ ನಿಲ್ಲದೆ, ಪುಸ್ತಕ, ಗ್ರಂಥಾಲಯ, ಇಂಟರ್‍ನೆಟ್‌ನಿಂದ ಹೆಚ್ಚುವರಿ ಕಲಿಯುವ ಹಂಬಲ ಇರಬೇಕು. ಮೌಲ್ಯಾಧಾರಿತ ಬದುಕು ನಡೆಸಬೇಕಾದರೆ ಪ್ರಾಮಾಣಿಕತೆ, ಸಹಾನುಭೂತಿ, ಸಹಪಾಠಿಗಳೊಂದಿಗೆ ಸಹಕಾರ, ಸಮಾಜದತ್ತ ಜವಾಬ್ದಾರಿ ಇವು ಬೆಳೆಸಿಕೊಳ್ಳಬೇಕು.

ಅಂದರೆ ಒಟ್ಟಿನಲ್ಲಿ ಹೇಳುವದಾದರೆ ಶಿಕ್ಷಕರು ಜ್ಞಾನ-ಮೌಲ್ಯಗಳನ್ನು ನೀಡಿದರೆ, ವಿದ್ಯಾರ್ಥಿಗಳು ಅದನ್ನು ಕೃತಜ್ಞತೆಯಿಂದ ಸ್ವೀಕರಿಸಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.ಹೀಗೆ ಶಿಕ್ಷಕರು ವಿದ್ಯಾರ್ಥಿಗಳು ಕೂಡಿ ಭವ್ಯ ಭಾರತ ನಿರ್ಮಾಣದತ ಹೆಜ್ಜೆ ಹಾಕಬೇಕಾಗಿದೆ.

ಸವಿತಾ ದೇಶಮುಖ

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group