spot_img
spot_img

೨೯ ರಂದು ಚಿತ್ತಾಪುರದಲ್ಲಿ ‘ಗುರು ವಚನ ಪ್ರಭ’ ಜಿಲ್ಲಾ ಮಟ್ಟದ ವಚನ ಗೋಷ್ಠಿ

Must Read

ಚಿತ್ತಾಪೂರ: ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಕಲಬುರ್ಗಿ ಜಿಲ್ಲಾ ಸಮಿತಿ ಇವರಿಂದ ಡಾ. ಪಂ. ಪುಟ್ಟರಾಜರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ದಿನಾಂಕ ೨೯ ರವಿವಾರ ಮುಂಜಾನೆ ೧೦ ಗಂಟೆಗೆ ಚಿತ್ತಾಪೂರ ಸರಕಾರಿ ಪ್ರೌಢ ಶಾಲೆಯ ಆವಣ ದಲ್ಲಿ ‘ಗುರು ವಚನ ಪ್ರಭ’ ಜಿಲ್ಲಾ ಮಟ್ಟದ ಆಧುನಿಕ ವಚನಕಾರರಿಂದ ವಚನ ಗೋಷ್ಠಿ ಮತ್ತು ಖ್ಯಾತ ಗಾಯಕರಿಂದ ವಚನ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಷ. ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಕಂಬಳೇಶ್ವರ ಸಂಸ್ಥಾನ ಹಿರೇಮಠ ಚಿತ್ತಾಪೂರ ಇವರು ವಹಿಸಿಕೊಳ್ಳುವರು. ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕರಾದ ಶ್ರೀ ವೇ. ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಗದಗ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಕಲಬುರ್ಗಿ ಜಿಲ್ಲಾ ಸಂಚಾಲಕರಾದ ವಚನಕಾರ ಪಂಚಾಕ್ಷರಿ ಬ. ಪೂಜಾರಿ ದಂಡಗುಂಡ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು. ಶರಣಕುಮಾರ ಮೋದಿ ಜಿಲ್ಲಾ ಅದ್ಯಕ್ಷರು ಅಖಿಲ ಬಾರತ ವೀರಶೈವ ಮಹಾಸಭಾ ಕಲಬುರ್ಗಿ, ಡಾ. ಮಲ್ಲಿನಾಥ ತಳವಾರ ಸಾಹಿತಿಗಳು, ತಾಲೂಕಾ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಚಿತ್ತಾಪೂರ, ವೀರೇಂದ್ರ ಕೋಲ್ಲೊರ ತಾಲೂಕಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಚಿತ್ತಾಪೂರ, ಕಾಶಿರಾಯ ಕಲಾಲ ಮುಖ್ಯಗುರುಗಳು ಸರಕಾರಿ ಪ್ರೌಡಶಾಲೆ ಚಿತ್ತಾಪೂರ, ಹಿರಿಯ ಮುಖಂಡರಾದ ಭೀಮಣ್ಣ ಸಾಲಿ ಚಿತ್ತಾಪೂರ ಮುಖ್ಯ ಅತಿಥಿಗಳಾಗಿ ಆಮಿಸಲಿದ್ದಾರೆ. ವಚನ ಸಾಹಿತ್ಯ ಕುರಿತು ಎಸ್. ಕೆ. ಬೀರೇದಾರ ತಾಲೂಕಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ಇವರು ವಚನ ಸಾಹಿತ್ಯ ಕುರಿತು ವಿಷೇಶ ಉಪನ್ಯಾಸ ನೀಡಲಿದ್ದಾರೆ, ಖ್ಯಾತ ಸಂಗೀತ ಕಲಾವಿದರಾದ ರೇವಣಸಿದ್ಧಯ್ಯ ಹಿರೇಮಠ ಸಂಗೀತ ಶಿಕ್ಷಕರು ಚಿಂಚೋಳಿ ಇವರಿಂದ ವಚನ ಗಾಯನ ನಡೆಯಲಿದೆ ಇವರಿಗೆ ರಾಜಶೇಖರಯ್ಯ ಮಠಪತಿ ಅಳ್ಳೋಳ್ಳಿ ಇವರು ತಬಲಾ ಸಾಥ ನೀಡಲಿದ್ದಾರೆ.

ಕಲಬುರ್ಗಿ ಜಿಲ್ಲೆಯ ಆಧುನಿಕ ವಚನಕಾರರಾದ ಸುಭಾಷಸ್ವಾಮಿ ತೊಟ್ನಳ್ಳಿಮಠ ಅಳ್ಳೋಳ್ಳಿ, ಲಿಂಗಾರೆಡ್ಡಿ ಶೇರಿ ಜಾಕನಳ್ಳಿ ಸೇಡಂ, ನರಸಿಂಹರಾವ್ ಹೇಮನೂರ ಕಲಬುರ್ಗಿ, ಡಾ. ಬಿ. ಆರ್. ಅಣ್ಣಾಸಾಗರ ಕಾಳಗಿ ಸೇಡಂ, ಭೀಮರಾಯ ಹೇಮನೂರ ಕಲಬುರ್ಗಿ, ಚಂದ್ರಶೇಖರ ಚಕ್ಕಿ ಕಲಬುರ್ಗಿ, ಸಂತೋಷಿ ಮಠಪತಿ ಗಾಜಗೀರಾ, ಪ್ರೋ. ಸುನಂದಾ ಕಲ್ಲಾ ಜೇವರ್ಗಿ, ಡಾ. ರಾಜಶೇಖರ ಮಾಂಗಾ ಕಲಬುಗಿ, ನೀಲಕಂಠಪ್ಪ ಎಚ್. ಊಡಗಿ ಸೇಡಂ, ಲಿಂಗಣ್ಣ ಆರ್.ಮಲ್ಕನ್ ಕೋಲ್ಲೂರ ಚಿತ್ತಾಪೂರ, ಸಾಯಪ್ಪ ಮುನಿ ಶಿಕ್ಷಕರು ಇಟಕಾಲ್ ಸೇಡಂ ಮೊಗಲಪ್ಪ ಮೆದಕ್ ಮಳಖೇಡ ಸೇಡಂ ಲಕ್ಷಣ ರಂಜೋಳಕರ ಸೇಡಂ ವೀರಯ್ಯ ಸ್ಥಾವರಮಠ ರಾಜೋಳ್ಳಿ ಚಿತ್ತಾಪೂರ, ಶರಣರೆಡ್ಡಿ ಶಿಕ್ಷಕರು ಕೋಡ್ಲಾ ಸೇಡಂ, ಶಿವಸ್ವಾಮಿ ಚಿನ್ನಕೇರಾ ಚಿಂಚೋಳಿ, ವೇ. ಶಿವಕವಿ ಜೋಗೂರ ಜೇವರ್ಗಿ ಮತ್ತು ಪಂಚಾಕ್ಷರಿ ಬ. ಪೂಜಾರಿ ದಂಡಗುಂಡ ಚಿತ್ತಾಪೂರ ಇವರು ಸ್ವರಚಿತ ವಚನಗಳನ್ನು ವಾಚನ ಮಾಡಲಿದ್ದಾರೆ.

ವಚನ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಉದಯೋನ್ಮುಖ ವಚನಕಾರರಿಗೆ ವೇದಿಕೆಯಾಗಿರುವ ಸೇವಾ ಸಮಿತಿಯ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತಿರದ ವಚನಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಕಲಬುರ್ಗಿ ಜಿಲ್ಲಾ ಸಂಚಾಲಕರಾದ ಪಂಚಾಕ್ಷರಿ ಬ. ಪೂಜಾರಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!