spot_img
spot_img

‘ಗುರು ವಚನ ಪ್ರಭ’ ವಚನ ಮತ್ತು ಕವಿಗೋಷ್ಠಿಗೆ ಕವಿ, ವಚನಕಾರರಿಗೆ ಆಹ್ವಾನ

Must Read

ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ಪಂ. ಪುಟ್ಟರಾಜ ಗುರುವರ್ಯರರ ವಚನ ಸಾಹಿತ್ಯ ಮತ್ತು ಭಕ್ತಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯ ಸ್ಮರಣೆಗಾಗಿ ಗುರು ವಚನ ಪ್ರಭಾ ಹೆಸರಿನಲ್ಲಿ ಕವಿಗೋಷ್ಠಿ, ವಚನ ಗೋಷ್ಠಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಆಯ್ದ ಜಿಲ್ಲೆಗಳಲ್ಲಿ ಕೊನೆಯ ರವಿವಾರ ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಸ್ತುತ, ಈ ತಿಂಗಳ ಗುರು ವಚನ ಪ್ರಭಾ ಸಮಾರಂಭವನ್ನು ದಿನಾಂಕ ೨೬ ಜೂನ್ ೨೦೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಹಾವೇರಿಯ ಲಿಂ. ಶ್ರೀ ಶಾಂತವೀರ ಪಟ್ಟಾದ್ಯಕ್ಷರ ಧಾರ್ಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಸಮಾರಂಭದ ಭಾಗವಾಗಿರುವ ಕವಿ ಗೋಷ್ಠಿ ಅಥವಾ ವಚನ ಗೋಷ್ಠಿಯಲ್ಲಿ ಭಾಗವಹಿಸಲು, ಹಾವೇರಿ ಜಿಲ್ಲೆಯ ಮತ್ತು ಹಾವೇರಿ ಜಿಲ್ಲೆಗೆ ಹತ್ತಿರದಲ್ಲಿರುವ ಆಧುನಿಕ ವಚನಕಾರರು ಮತ್ತು ಭಕ್ತಿ ಪಂಥದ ಕವಿಗಳು ತಮ್ಮ ವಿವರಗಳೊಂದಿಗೆ, ಒಂದು ಭಾವಚಿತ್ರ ಮತ್ತು ವಾಚನ ಮಾಡಲಿರುವ ಸ್ವರಚಿತ ಭಕ್ತಿ ಗೀತೆ ಅಥವ ಸ್ವರಚಿತ ವಚನವನ್ನು ಕಳಿಸಿಕೊಟ್ಟು ಹೆಸರು ನೋಂದಾಯಿಸಕೊಳ್ಳಲು ಕೋರಲಾಗಿದೆ.

ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ೨೦ ಜೂನ್ ೨೦೨೨ ಸಂಜೆ ೫ ಗಂಟೆಯಾಗಿರುತ್ತದೆ. ಉಚಿತ ಪ್ರವೇಶವಾಗಿದ್ದು, ಭಾಗವಹಿಸಿದ ಎಲ್ಲಾ ಕವಿ, ವಚನಕಾರರಿಗೆ ಪುಸ್ತಕ ಕಾಣಿಕೆಯೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಆಯ್ದ ವಚನಕಾರರಿಗೆ ‘ಗುರು ಪುಟ್ಟರಾಜ ಕೃಪಾ ಪೋಷಿತ’ ವಚನ ಸಾಹಿತ್ಯ ಸಿರಿ ಜಿಲ್ಲಾ ಮಟ್ಟದ ಪ್ರಶಸ್ತಿ, ಸಮಿತಿಯ ಸಾಧಕ ಸದಸ್ಯರಿಗೆ ಗುರು ಪುಟ್ಟರಾಜ ಸೇವಾ ಸಿರಿ ಗೌರವ ಪ್ರಶಸ್ತಿ ಸಮರ್ಪಿಸಲಾಗುವುದು.

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರವನ್ನೂ ಏರ್ಪಡಿಸಲಾಗಿದೆ. ಕಾಲಮಿತಿಗೆ ಅನುಗುಣವಾಗಿ, ಆಯ್ದ ಕೆಲವು ಕಲಾವಿದರಿಗೆ ಅವಕಾಶ ನೀಡಲಾಗುವುದು.

ಆಸಕ್ತ ಸ್ಥಳೀಯ ಸಂಗೀತ ಕಲಾವಿದರು ಕೂಡ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬಹುದೆಂದು ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣವರ ಬೆಳಗಾವಿ ಹಾಗೂ ಹಾವೇರಿ ತಾಲೂಕಾ ಸಂಚಾಲಕರಾದ ಫಕ್ಕೀರಶೆಟ್ರು ಶಿ. ಅಂಗಡಿ, ಶಿಕ್ಷಕರು ಹಾವೇರಿ ಇವರುಗಳು ಜಂಟಿ ಪತ್ರಿಕಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!